
ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಸೂಚನೆ ಇದೆ. ಇದಕ್ಕೆ ಕಾರಣ ಇದು ವಿಜಯ್ ಅವರ ಕೊನೆಯ ಚಿತ್ರವಾಗಲಿದೆ ಎಂಬುದು. ಆ ಬಳಿಕ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಈಗ ಅವರು ಪ್ರತಿ ವಿಚಾರವನ್ನು ವೋಟ್ ರೀತಿಯಲ್ಲೇ ನೋಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಅವರು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವೇ ಕಾರಣ.‘ಜಾಟ್’ ಸಿನಿಮಾ ಮಾಡಿ ಫೇಮಸ್ ಆದ ತೆಲುಗಿನ ಗೋಪಿಚಂದ್ ಮಲಿನೇನಿ ಅವರು ಇತ್ತೀಚೆಗೆ ಸಂದರ್ಶನ ಒಂದನ್ನು ನೀಡಿದ್ದಾರೆ. ಈ ವೇಳೆ ಅವರು ದಳಪತಿ ವಿಜಯ್ ಬಗ್ಗೆ ಹಾಗೂ ಅವರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಕೊನೆಯ ಸಿನಿಮಾಗೆ ಅವರಿಗೆ ತಮಿಳು ನಿರ್ದೇಶಕರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಒತ್ತಡ ಇತ್ತು ಎಂದಿದ್ದಾರೆ.ಗೋಪಿಚಂದ್ ಅವರು ವಿಜಯ್ನ ಭೇಟಿ ಮಾಡಿ ಸ್ಕ್ರಿಪ್ಟ್ ವಿವರಣೆ ಕೊಟ್ಟರು. ವಿಜಯ್ಗೆ ಕಥೆ ಇಷ್ಟ ಕೂಡ ಆಗಿತ್ತು. ಅದೇ ರೀತಿ ಸಿನಿಮಾ ಘೋಷಣೆ ಮಾಡಲು ಕೂಡ ರೆಡಿ ಆಗಿದ್ದರು. ಆದರೆ, ವಿಜಯ್ ಸುತ್ತ ಇರುವವರು ಇದಕ್ಕೆ ಅವಕಾಶ ಕೊಡಲಿಲ್ಲ ಎಂಬುದು ಗೋಪಿಚಂದ್ ಆರೋಪ.
‘ವಿಜಯ್ ಸಿನಿಮಾ ಅನೌನ್ಸ್ ಮಾಡಲು ರೆಡಿ ಆಗಿದ್ದರು. ಇದು ಅವರ ಕೊನೆಯ ಸಿನಿಮಾ. ಆ ಬಳಿಕ ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ. ಹೀಗಾಗಿ, ಅವರ ಸುತ್ತಲು ಇರುವವರು ತಮಿಳು ಸಿನಿಮಾನ ಆಯ್ಕೆ ಮಾಡಿಕೊಳ್ಳುವಂತೆ ಮನ ಒಲಿಸಿದ್ದರು’ ಎಂದಿದ್ದಾರೆ ಗೋಪಿಚಂದ್ ಅವರು.ಎಚ್. ವಿನೋದ್ ಅವರು ವಿಜಯ್ ಅವರ ಕೊನೆಯ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ರಾಜಕೀಯದ ಕಥೆ ಹಿಡಿದು ವಿನೋದ್ ಹೋಗಿದ್ದರು. ಇದು ಅವರಿಗೆ ಇಷ್ಟ ಆಗಿದೆ. ಅವರು ಸುತ್ತಲು ಇರುವವರು ಕೂಡ ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಮಾಡಲು ಸೂಚಿಸಿದ್ದರು. ಈ ಮೊದಲು ಕಾರ್ತಿಕ್ ಸುಬ್ಬರಾಜ್ ಕೂಡ ವಿಜಯ್ಗೆ ಕಥೆ ಹೇಳಿದ್ದಾಗಿ ಹೇಳಿಕೊಂಡಿದ್ದರು. ಆದರೆ, ವಿಜಯ್ ಅವರು ಈ ಕಥೆಯನ್ನು ಆಯ್ಕೆ ಮಾಡಲಿಲ್ಲ.
‘ಜನ ನಾಯಗನ್’ ಸಿನಿಮಾ ವಿಚಾರಕ್ಕೆ ಬರೋದಾದರೆ, ಈ ಚಿತ್ರದ ಶೂಟ್ ಕೊಡೈಕೆನಲ್ನಲ್ಲಿ ನಡೆಯುತ್ತಿದೆ. ವಿಜಯ್ ಅವರು ಅಲ್ಲಿ ಇದ್ದಾರೆ. 2026ರ ಜನವರಿ 9ರಂದು ಸಿನಿಮಾ ರಿಲೀಸ್ ಆಗಲಿದೆ.