ಇತ್ತೀಚಿನ ಸುದ್ದಿ

ಬೀದರ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಉದ್ಘಾಟನೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಇಂದು ಬೀದರ್ ಜಿಲ್ಲಾ ಘಟಕವನ್ನು ಉದ್ಘಾಟನೆ ಮಾಡಿದು ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಬಸವರಾಜ್ ಜಾಬ ಶೆಟ್ಟಿ (ಅಧ್ಯಕ್ಷರು ಬುಡಾ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ) ರವರು ಪತ್ರಿಕಾ ರಂಗ ಕಿಂತ ಸಾಮಾಜಿಕ ಜಾಲತಾಣ ಹೆಚ್ಚಾಗಿದೆ. ಒಳೆಯ ವಿಚಾರಕಿಂತ ಕೆಟ್ಟ ವಿಚಾರವನ್ನು ತೋರಿಸಿದರೆ. ಸಾಮಾಜಿಕ ಜಾಲತಾಣ ವಿಡಿಯೋ ಹಾಕುವವರು ಸಹ ಈಗ ಪತ್ರಕರ್ತರು ಎಂದು ಹೇಳುತ್ತಿದಾರೆ. ಅಂತವರ ವಿರುದ್ಧ ಕ್ರಮ ಕೈಗೊಳಬೇಕು ನೈಜ ಪತ್ರಕರ್ತರಿಗೆ ಹಾಗ ಸಮಾಜದಲ್ಲಿ ಒಳೆಯ ಗೌರವ ಸಿಗುತ್ತದೆ ಎಂದು ಹೇಳಿದರು. ನಂತರ ಮಾತನಾಡಿದ ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ ಪತ್ರಕರ್ತರ ದಿನನಿತ್ಯ ಯಾವ ರೀತಿ ವರದಿ ಮಾಡಬೇಕು ಮತ್ತು ದಿನನಿತ್ಯ ಪತ್ರಿಕೆಯನ್ನು ಓದುವುದು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಪತ್ರಿಕೆಗಳಲ್ಲಿ ವರದಿಯನ್ನು ಯಾವ ರೀತಿ ಮಾಡಬೇಕು ಯಾವ ರೀತಿ ಬರೆಯಬೇಕು ಎಂಬುದು ತಿಳಿಯುತ್ತದೆ. ಜಿಲ್ಲೆಯಲ್ಲಿ ಸಂಘ ಕಟ್ಟುವುದು ಮುಖ್ಯವಲ್ಲ ಹಾಗೂ ಗುರುತಿನ ಚೀಟಿ ಪಡೆಯುವುದು ಮುಖ್ಯವಲ್ಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವುದು ತುಂಬಾ ಅಪಾಯಕಾರಿ ಪ್ರತಿಯೊಂದು ವಿಷಯವನ್ನು ಕುಲಂಕುಶವಾಗಿ ಪರಿಶೀಲಿಸಿ ವರದಿ ಮಾಡಬೇಕು ನಾವು ಈ ಹಿಂದೆ ವಿಶ್ವೇಶ್ವರ ಭಟ್ಟ ಅವರ ಜೊತೆ ಕೆಲಸ ಮಾಡಿದ್ದೇವೆ ಅವರ ಶಿಷ್ಯರಾಗಿ ಅವರ ಬರವಣಿಗೆಯನ್ನು ನೋಡಿ ತುಂಬಾ ಕಳಿಸಿದ್ದೇವೆ ತಾವು ಸಹ ಸಂಘಟನೆ ಜೊತೆಯಲ್ಲಿ ಪತ್ರಿಕೆಯನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಪತ್ರಕರ್ತರಿಗೆ ಕಿವಿ ಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಹುಲಿ ಅಮರನಾಥ ಮಾತನಾಡಿ ಸಂಘ ಕಟ್ಟುವುದು ತುಂಬಾ ಕಷ್ಟದ ಕೆಲಸ ಇಂದು ನಾನು ಸಂಘ ಕಟ್ಟಬೇಕಾದರೆ ಬಂದ ಅಡೆತಡೆಗಳು ತುಂಬಾ ಆದರೂ ಅವುಗಳನ್ನು ಎದುರಿಸಿ ಇಂದು ಕರ್ನಾಟಕದ ಕಿರೀಟ ಬೀದರ್ ನಲ್ಲಿ ಘಟಕ ಉದ್ಘಾಟನೆಯಾಗುತ್ತಿರುವುದು ತುಂಬಾ ಸಂತೋಷದ ವಿಚಾರ. ಯಾವುದೇ ಒಬ್ಬ ವ್ಯಕ್ತಿ ಹುಟ್ಟಿ ದೊಡ್ಡವನಾದರೂ ತಾನು ಹುಟ್ಟಿದ ದಿನಾಂಕ ಹುಟ್ಟಿದ ಸ್ಥಳ ಹುಟ್ಟಿಗೆ ಕಾರಣಕರ್ತರು ಯಾರು ಎಂಬ ಎಲ್ಲಾ ದಾಖಲೆಗಳು ಇರುತ್ತವೆ ಅದೇ ರೀತಿ ನಮ್ಮ ಸಂಘದ ಮೇಲೆ ಆಪಾದನೆ ಮಾಡುವಂತಹ ಬೇರೆ ಸಂಘದವರು ಸಹ ತನ್ನ ಸಂಘ ಹುಟ್ಟಿದ ದಿನಾಂಕ ಹುಟ್ಟಿದ ವರ್ಷ ಹುಟ್ಟಿದ ಸಂದರ್ಭದಲ್ಲಿ ನೀಡಿದಂತಹ ನೊಂದಣಿ ಪತ್ರ ಹುಟ್ಟಿಸಿದವರು ಯಾರು ಎಂಬ ದಾಖಲೆಗಳನ್ನು ಪ್ರದರ್ಶಿಸಬೇಕು.

ಅದನ್ನು ಬಿಟ್ಟು. ಎಲ್ಲಾ ದಾಖಲೆಗಳು ಇರುವಂತಹ ನಮ್ಮ ಸಂಘದ ಮೇಲೆ ಹೂಹ ಪೋಹಗಳನ್ನು ಹೇಳುವುದನ್ನು ಬಿಡಬೇಕು. ಪತ್ರಕರ್ತರು ಎಂದರೆ ಎಲ್ಲರೂ ಒಂದೇ ಎಲ್ಲರನ್ನೂ ಒಂದೇ ರೀತಿ ನೋಡಬೇಕು ಒಂದು ಸಂಘದಲ್ಲಿ ನೊಂದಣಿ ಆಗಿರುವವರು ಮಾತ್ರ ಪತ್ರಕರ್ತರು ಉಳಿದವರು ಪತ್ರಕರ್ತರಲ್ಲ ಎಂದು ಹೇಳುವುದನ್ನು ಮೊದಲು ನಿಲ್ಲಿಸಬೇಕು. ಯಾವ ಪತ್ರಿಕೆಗೂ ಕಮ್ಮಿ ಇಲ್ಲದ ರೀತಿಯಲ್ಲಿ ಇಂದು ಮಾಸಪತ್ರಿಕೆ ಪಾಕ್ಷಿಕ ಪತ್ರಿಕೆ ದಿನಪತ್ರಿಕೆಗಳು ಮುದ್ರಣವಾಗುತ್ತಿದೆ. ಜೊತೆಯಲ್ಲಿ ಸುದ್ದಿ ಹೆಚ್ಚು ಬರುತ್ತಿದೆ. ಸರ್ಕಾರ ನೀಡುವಂತಹ ಎಲ್ಲಾ ರೀತಿಯ ಸೌಲತ್ತುಗಳನ್ನು ಎಲ್ಲಾ ಪತ್ರಕರ್ತರಿಗೆ ಸಿಗಬೇಕು ಇದೇ ನಮ್ಮ ಸಂಘದ ಉದ್ದೇಶ ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ತು ಸದಸ್ಯರಾದ ಅರವಿಂದ ಕುಮಾರ್ ಅರಳಿ ಮಾತನಾಡಿ ನಾನು ಸಹ ಪತ್ರಕರ್ತ ಪತ್ರಕರ್ತರ ನೋವು ಏನೆಂಬುದು ತಿಳಿದಿರುವೆ ಇಲ್ಲಿಯವರೆಗೆ ಸಕ್ರಿಯ ರಾಜಕಾರಣಿಯಾಗಿದ್ದು ಪತ್ರಿಕೋದ್ಯಮದ ಕಡೆ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಿ ಪತ್ರಕರ್ತರ ಸಮಸ್ಯೆಯನ್ನು ಬಗೆಹರಿಸಲು ಪತ್ರಕರ್ತರೊಂದಿಗೆ ಇರುವುದಾಗಿ ಹೇಳಿದರು.


ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳಿಗೆ ರಾಜ್ಯಾದ್ಯಂತ ಬಂದಂತಹ ವಿವಿಧ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಗಣ್ಯರಿಗೆ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಕಾರ್ಯಧ್ಯಕ್ಷರಾದ ಮಹಮ್ಮದ್ ಇಮ್ರಾನ್ ಸಹಿದ್ ಉಪಾಧ್ಯಕ್ಷರಾದ ಸಮೀರ್ ಖಾನ್, ಹಣವಂತ ದೇಶಮುಖ್ ಪ್ರಧಾನ ಕಾರ್ಯದರ್ಶಿ ಅಮೋಸ್ ದಾಸ್ ನಿರ್ದೇಶಕರಾದ ರಾಜಶೇಖರ್ ಹಾಗೂ ರಾಕೇಶ್ ಕಾನೂನು ಸಲಹೆಗಾರರಾದ ಶರಣಪ್ಪ ಶರ್ಮಾ ಹಾಗೂ ಹಲವಾರು ಪತ್ರಕರ್ತರು ವರದಿಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button