ದುಬೈ ಬ್ಯಾರಿ ಮೇಳ ಯಶಸ್ವಿ -12 ಸಾವಿರಕ್ಕೂ ಹೆಚ್ಚು ಜನ ಸೇರುವ ಮೂಲಕ ಇತಿಹಾಸ ಸೃಷ್ಟಿ

ದುಬೈ: ರವಿವಾರ ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(BCCI) ಆಶ್ರಯದಲ್ಲಿ ನಡೆದ ಬ್ಯಾರಿ ಮೇಳ-2025 (Beary Mela 2025)ಬಹಳ ಯಶಸ್ವಿಯಾಗಿ ನಡೆಯಿತು.
ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ನೇತೃತ್ವದಲ್ಲಿ ಮಧ್ಯಾಹ್ನದಿಂದ ಆರಂಭಗೊಂಡ ಬ್ಯಾರಿ ಮೇಳವು ರಾತ್ರಿ ವರೆಗೂ ಅದ್ದೂರಿಯಾಗಿ ನಡೆದಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸೇರುವ ಮೂಲಕ ದುಬೈಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ.
ಈ ಮೇಳದಲ್ಲಿ ಕೇವಲ ಬ್ಯಾರಿ ಸಮುದಾಯದವರಲ್ಲದೆ ಇನ್ನಿತರ ಹಿಂದೂ, ಕ್ರಿಶ್ಚಿಯನ್ ಸಮುದಾಯದವರೂ ಕೂಡ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು. ಈ ಕಾರ್ಯಕ್ರಮದಲ್ಲಿ ಜನರು ಕುಟುಂಬ ಸಮೇತರಾಗಿ ಪಾಲ್ಗೊಂಡು ಸಂಭ್ರಮಿಸಿದರು.
ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ
ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ‘Beary statesman Leadership’ ಪ್ರಶಸ್ತಿ, ತುಂಬೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರಿಗೆ ‘Global beary of Business Icon’ ಪ್ರಶಸ್ತಿ, ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್
ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
ಮೇಳದ ಮುಖ್ಯ ವೇದಿಕೆಯಲ್ಲಿ ಬ್ಯಾರಿ ಜಾನಪದ ಕಲೆಗಳಾದ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕವಾಲಿ, ‘ಪೋಕರಾಕ BA -LLB’ ಹಾಸ್ಯಮಯ ನಾಟಕ, ಮಕ್ಕಳ ಫ್ಯಾಶನ್ ಷೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಈ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಜನರ ಮನಸೂರೆಗೊಳಿಸಿತು. ಜೊತೆಗೆ ವೇದಿಕೆಯ ಮುಂದೆ ಸಂದಲ್ (ಮೆರವಣಿಗೆ) ಕಾರ್ಯಕ್ರಮವು ನಡೆಯಿತು.ಕೊಲಾಸೊ ಅವರಿಗೆ ‘Global icon of Philanthropy’ ಪ್ರಶಸ್ತಿ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರಿಗೆ ‘Indian Diaspora Humanitarian’ ಪ್ರಶಸ್ತಿ, ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿ ಲಿಮಿಟೆಡ್‌ನ ಸಿಇಒ ಮುಹಮ್ಮದ್ ಆಸಿಫ್ ಕರ್ನಿರೆ ಅವರಿಗೆ ‘Global Beary of Business Youth Icon’ ಪ್ರಶಸ್ತಿ ನೀಡಿ ಗೌರವಿಸಲಾಯಿತು.