
ಮೈಸೂರು : ಪಹಲ್ಗಾಂ ಘಟನೆಯಿಂದ ಭಾರತದ ಇಂಟೆಲಿಜೆನ್ಸ್ ಬೇರೆ ದೇಶಗಳ ಮುಂದೆ ತಲೆ ತಗ್ಗಿಸುವಂತಾಗಿದೆ. ಕಾಶ್ಮೀರ ಘಟನೆಯನ್ನು ಕಾಂಗ್ರೆಸ್ ಖಂಡಿಸಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.ಉಗ್ರ ಚಟುವಟಿಕೆಗೆ ಕಡಿವಾಣ ಹಾಕಲು ಕಾಂಗ್ರೆಸ್ ಬೆಂಬಲ ಸೂಚಿಸಿದೆ. ಕಾಶ್ಮೀರದಲ್ಲಿ ಪೊಲೀಸ್ ನೇಮಕ ಮಾಡುವುದು ಎಲ್ಲವೂ ಕೇಂದ್ರ ಸರ್ಕಾರ. 2 ಸಾವಿರ ಜನ ಒಟ್ಟಿಗೆ ಕುಳಿತಿದ್ದ ಜಾಗದಲ್ಲಿ ಯಾವೊಬ್ಬ ಪೊಲೀಸ್ ಇರಲಿಲ್ಲ ಯಾಕೆ? ಇದಕ್ಕೆ ಕೇಂದ್ರ ಸರ್ಕಾರ ಯಾಕೆ ಉತ್ತರ ಕೊಡುತ್ತಿಲ್ಲ. ಆರ್ಟಿಕಲ್ 370 ತೆಗೆದ ನಂತರ ಜಮ್ಮು ಕಾಶ್ಮೀರ ನೈಜ ಸ್ಥಿತಿಗೆ ಬಂದಿದೆ ಎಂದು ಸುಳ್ಳು ಹೇಳುವ ಕೆಲಸ ಮಾಡಿದ್ದೀರಾ. ನಿಮ್ಮ ಅವಧಿಯಲ್ಲೇ 3800 ದಾಳಿ, 416 ಮಿಲಿಟರಿ ಸೈನಿಕರು ಸಾವನ್ನಪ್ಪಿದ್ದಾರೆ. ಸಾವಿನ ಮನೆಯಲ್ಲಿ ಗಳ ಹಿರಿಯುವ ಕೆಲಸ ಬಿಜೆಪಿ ಮಾಡುತ್ತಿದೆ. ಪಹಲ್ಗಾಂ ಘಟನೆಯಲ್ಲಿ ಮುಸ್ಲಿಂ ವ್ಯಕ್ತಿಗಳೂ ಸತ್ತಿದ್ದಾರೆ. ಹಿಂದೂ ವ್ಯಕ್ತಿಗಳು ಎಂದು ಕೇಳಿ ಸಾಯ್ಸಿದ್ರು ಅಂತ ಹೇಳಲಿಕ್ಕೆ ಮುಂದಾಗಿದ್ದೀರಿ ಎಂದರು.
ಐದಾರು ರಾಜ್ಯಗಳಲ್ಲಿ ಈಗ ಚುನಾವಣೆ ಬರುತ್ತಿದೆ. ಇದರ ಹುನ್ನಾರದ ಭಾಗವೇ ಪಹಲ್ಗಾಮ್ ಘಟನೆ. ಸಂತೋಷ್ ಲಾಡ್ ಅವರು ಕನ್ನಡಿಗರನ್ನು ವಾಪಸ್ ಕರೆ ತಂದರು. ಸಿಎಂ, ಸಚಿವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ವಿಮಾನ ಟಿಕೆಟ್ ದರವನ್ನು ನೀವು ಏರಿಕೆ ಮಾಡಿದ್ದೀರಿ? ಮಾಧ್ಯಮಗಳ ಮುಂದೆ ಬಿಟ್ಟಿ ಪ್ರಚಾರ ತೆಗೆದುಕೊಳ್ಳುವ ಅಯೋಗ್ಯರು ಬಿಜೆಪಿಯವರು. ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಬಿಡುವುದಿಲ್ಲ ಅಂತೀರಾ. ಡ್ಯಾಮ್ ತುಂಬಿದ ಬಳಿಕ ನೀರು ಬಿಡಲೇಬೇಕಲ್ಲವೇ? ಇಂತಹ ನಿರ್ಧಾರ ಬಿಟ್ಟು ಉಗ್ರರನ್ನು ಹುಡುಕಿ ಕೊಲ್ಲುವ ಕೆಲಸ ಮಾಡಿ. ಸರ್ವ ಪಕ್ಷದ ಸಭೆಗೆ ಯಾಕೆ ಮೋದಿ ಬರಲಿಲ್ಲ. ಭಾಷಣದ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಎಲ್ಲಾ ಮುಸ್ಲಿಮರನ್ನು ಉಗ್ರರು ಎಂದು ಬಿಂಬಿಸುವುದು ತಪ್ಪು ಎಂದರು.