ಇತ್ತೀಚಿನ ಸುದ್ದಿ
Trending

ಕರ್ನಾಟಕದ ಬಜೆಟ್ 2025-26

ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್​​ 4 ಲಕ್ಷ ಕೋಟಿ ರೂ ಗಾತ್ರದ್ದಾಗಿದ್ದು, ಬೆಂಗಳೂರಿಗೆ ಸಾಕಷ್ಟು ಹಣ ನೀಡಲಾಗಿದೆ. ಟನಲ್ ಕಾರಿಡಾರ್ ಯೋಜನೆಗಳು, ಬ್ರ್ಯಾಂಡ್ ಬೆಂಗಳೂರು ಅಡಿ ವಿವಿಧ ಯೋಜನೆಗಳು, ಕುಡಿಯುವ ನೀರಿನ ಯೋಜನೆ, ಒಳಚರಂಡಿ ವ್ಯವಸ್ಥೆ ಬಲಪಡಿಸುವ ಯೋಜನೆ ಇವೆಲ್ಲಕ್ಕೂ ಬಜೆಟ್​​ನಲ್ಲಿ ಹಣ ನೀಡಲಾಗಿದೆ.ಕರ್ನಾಟಕ ರಾಜ್ಯದ ಆರ್ಥಿಕ ವ್ಯವಸ್ಥೆಯ ಜೀವನಾಡಿಯಾದ ಬೆಂಗಳೂರು ನಗರದ ಅಭಿವೃದ್ಧಿಗೆ ಬಜೆಟ್​​ನಲ್ಲಿ ಸಾಕಷ್ಟು ಹಣ ನೀಡಲಾಗಿದೆ. ನಗರದ ರಸ್ತೆ, ರೈಲು ಇತ್ಯಾದಿ ಮೂಲಸೌಕರ್ಯಗಳ ಸುಧಾರಣೆಗೆ ಇರುವ ವಿವಿಧ ಯೋಜನೆಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಕಾರಿಡಾರ್​ಗಳು, ಕುಡಿಯುವ ನೀರು, ಒಳಚರಂಡಿ, ಕೆರೆಗಳ ಅಭಿವೃದ್ಧಿ ಇತ್ಯಾದಿಗಳಿಗೆ ಸಿದ್ದರಾಮಯ್ಯ ತಮ್ಮ ಬಜೆಟ್​​ನಲ್ಲಿ ಸಾವಿರಾರು ಕೋಟಿ ರೂ ನೀಡಿದ್ದಾರೆ. 40,000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದ ಸುರಂಗ ಕಾರಿಡಾರ್ ಯೋಜನೆಗೆ ಸರ್ಕಾರದಿಂದ 19,000 ಕೋಟಿ ರು ಗ್ಯಾರಂಟಿ ನೀಡಲಾಗಿದೆ.

ಕರ್ನಾಟಕದ ಬಜೆಟ್ 2025-26, ಬೆಂಗಳೂರು ನಗರಕ್ಕೆ ಸಿಕ್ಕಿದ್ದು…

  • ಬೆಂಗಳೂರಿನಲ್ಲಿ ಟನಲ್ ಕಾರಿಡಾರ್ ಯೋಜನೆಗೆ 19,000 ಕೋಟಿ ರೂ
  • ನಮ್ಮ ಮೆಟ್ರೋ ಹಂತ-3 ಯೋಜನೆ ಅಡಿ 40.50 ಕಿ.ಮಿ. ಉದ್ದದ ಡಬಲ್‌-ಡೆಕ್ಕರ್‌ ಮೇಲ್ಸೇತುವೆ 8,916 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
  • ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ನಮ್ಮ ಮೆಟ್ರೋ ಜಾಲ ಅಭಿವೃದ್ಧಿ.
  • “ಬ್ರ್ಯಾಂಡ್ ಬೆಂಗಳೂರು” ಅಡಿ, 1,800 ಕೋಟಿ ರೂ. ಮೊತ್ತದ 21 ಯೋಜನೆಗಳಿಗೆ ಅನುಮೋದನೆ.
  • 413 ಕೋಟಿ ರೂ. ವೆಚ್ಚದಲ್ಲಿ “ಸಮಗ್ರ ಆರೋಗ್ಯ ಯೋಜನೆ” ಜಾರಿ.
  • ಬೆಂಗಳೂರು ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ನಿರ್ಮಿಸಲು 3 ಸಾವಿರ ಕೋಟಿ ರೂ. ಆರ್ಥಿಕ ನೆರವು.
  • ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಯಿಂದ 50 ಲಕ್ಷ ಜನರಿಗೆ ನೀರು ಪೂರೈಕೆ.
  • ಕಾವೇರಿ 6ನೇ ಹಂತ ಯೋಜನೆ ಅನುಷ್ಠಾನಗೊಳಿಸಲು ವಿಸ್ತೃತ ಯೋಜನಾ ವರದಿ ತಯಾರಿಕೆ
  • BWSSB ವತಿಯಿಂದ ಬಯೋಗ್ಯಾಸ್-ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್‌ಗಳ ಉಪಯೋಗ ಪಡೆಯಲು PPP ಮಾದರಿಯಲ್ಲಿ ಯೋಜನೆ.
  • ಬೆಂಗಳೂರು ಬಿಸಿನೆಸ್ ಕಾರಿಡಾರ್‌ ಯೋಜನೆ: 73 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ.
  • ಹವಾಮಾನ ವೈಪರಿತ್ಯದಿಂದ ಉಂಟಾಗುವ ಪ್ರವಾಹ ನಿಯಂತ್ರಣ ಮತ್ತು ಒಳಚರಂಡಿ ವ್ಯವಸ್ಥೆಯ ಸುಧಾರಣೆಗಾಗಿ ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್​ಎಸ್​​ಬಿಗೆ ₹3,000 ಕೋಟಿ ಅನುದಾನ
  • 300 ಕಿಮೀ ರಸ್ತೆ ಅಭಿವೃದ್ಧಿಗೆ ₹3,000 ಕೋಟಿ ರೂ
  • ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿಗೆ ₹1,070 ಕೋಟಿ ಅನುದಾನ​
  • “ಸೇಫ್ ಸಿಟಿ” ಯೋಜನೆಗೆ ₹667 ಕೋಟಿ ರೂ ನೀಡಲಾಗುವುದು. ಈ ಯೋಜನೆಯಡಿಯಲ್ಲಿ 7,500 ಕ್ಯಾಮೆರಾಗಳು, 10 ಡ್ರೋನ್‌ಗಳು, 560 ಬಾಡಿ-ಕ್ಯಾಮ್‌ಗಳು ಅಳವಡಿಸಲಾಗುತ್ತಿದೆ​
  • ಮಹಿಳಾ ಭದ್ರತೆಗಾಗಿ 60 ಮಹಿಳಾ ಔಟ್-ಪೋಸ್ಟ್ ಠಾಣೆಗಳ ನಿರ್ಮಾಣ
  • ಬೆಂಗಳೂರಿನಲ್ಲಿ ಸಿಗ್ನಲ್ ಫ್ರೀ ಜಂಕ್ಷನ್​​ಗಳ ನಿರ್ಮಾಣ
  • 14 ಕೆರೆಗಳ ಅಭಿವೃದ್ಧಿ ಯೋಜನೆಗೆ 35 ಕೋಟಿ ರೂ
  • 50 ಲಕ್ಷ ಜನರಿಗೆ ಉಪಯೋಗವಾಗುವ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಗೆ 5,550 ಕೋಟಿ ರೂ

Related Articles

Leave a Reply

Your email address will not be published. Required fields are marked *

Back to top button