ವಿಧಾನಸಭೆ

ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆಗೆ ಬೆಂಗಳೂರು ನವನಿರ್ಮಾಣ ಪಕ್ಷ ವಿರೋಧ

ಬೆಂಗಳೂರು: ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟ ಬೃಹತ್ ಬೆಂಗಳೂರು ಆಡಳಿತ ಮಸೂದೆ ಖಂಡಿಸಿರುವ ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್‌ಪಿ) ರ‍್ಯಾಲಿಗೆ ಕರೆ ನೀಡಿದೆ. ಮಾರ್ಚ್ 16ರಂದು ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಮತ್ತು ಜಾಗೃತಿ ರ‍್ಯಾಲಿಗೆ ಕರೆ ಕೊಟ್ಟಿದೆ.ನವನಿರ್ಮಾಣ ಪಕ್ಷ ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿದ್ದು, ” ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಹಾನಗರ ಬೃಹತ್ ಬೆಂಗಳೂರು ಆಡಳಿತ ಮಸೂದೆ ಬೆಂಗಳೂರಿನ ಸ್ವಾಯತ್ತ ಆಡಳಿತ ಹಕ್ಕನ್ನು ದುರ್ಬಲಗೊಳಿಸುತ್ತಿದೆ. ರಾಜ್ಯ ಸರ್ಕಾರ ಹಾಗೂ ಶಾಸಕರ ನಿಯಂತ್ರಣವನ್ನು ಬಲಪಡಿಸುವ ಮೂಲಕ ಭಾರತೀಯ ಸಂವಿಧಾನದ 243W ವಿಧಿಯನ್ನು ಉಲ್ಲಂಘಿಸುತ್ತದೆ ” ಎಂದು ತೀವ್ರವಾಗಿ ವಿರೋಧಿಸಿದೆ.ಈ ಮಸೂದೆಯು ಬೆಂಗಳೂರಿನ ಸ್ವ- ಆಡಳಿತದ ಹಕ್ಕಿನ ಮೇಲೆ ಹಲ್ಲೆಯಾಗಿದ್ದು, ನಗರದ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಪುರಸಭೆಯ ವ್ಯವಹಾರಗಳಲ್ಲಿ ರಾಜ್ಯ ಸರ್ಕಾರ ಮತ್ತು ಶಾಸಕರ ಹಸ್ತಕ್ಷೇಪವನ್ನು ಬಲಪಡಿಸುತ್ತದೆ. ನಗರದ ಮೇಯರ್ ಮತ್ತು ಪುರಸಭೆಗೆ ಅಧಿಕಾರ ನೀಡುವ ಬದಲು, ಮಸೂದೆಯು ಬೆಂಗಳೂರಿನ ಆಡಳಿತದಲ್ಲಿ ಶಾಸಕರು ಮತ್ತು ರಾಜ್ಯ ಸರ್ಕಾರದ ಹಸ್ತಕ್ಷೇಪವನ್ನು ಬಲಪಡಿಸುತ್ತದೆ ಎಂದು ಬಿಎನ್‌ಪಿ ಟೀಕಿಸಿದೆ.ಈ ಬಗ್ಗೆ ನವನಿರ್ಮಾಣ ಪಕ್ಷದ ಸಂಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಮಾತನಾಡಿ, “ ಈ ಮಸೂದೆಯನ್ನು ತಕ್ಷಣ ತಿದ್ದುಪಡಿ ಮಾಡಬೇಕು ಎಂಬ ಆಗ್ರಹದೊಂದಿಗೆ ಆನ್‌ಲೈನ್ ಮನವಿ ಆರಂಭಿಸಲಾಗಿದೆ. ಈ ಮಸೂದೆ ಸ್ಥಳೀಯ ಆಡಳಿತದ ಅಧಿಕಾರವನ್ನೂ ಜನರ ಪಾಲ್ಗೊಳ್ಳುವ ಅವಕಾಶವನ್ನೂ ಮರೆಯಿಸುತ್ತದೆ. ಈ ಮಸೂದೆ ಮೇಯರ್‌ಗೆ ನಿರ್ಧಾರ ಕೈಗೊಳ್ಳುವ ಪ್ರಾಮಾಣಿಕ ಅಧಿಕಾರ ನೀಡುವುದಿಲ್ಲ. ಶಾಸಕರು ಹಾಗೂ ರಾಜ್ಯ ಸರ್ಕಾರ ಬೆಂಗಳೂರು ಪಾಲಿಕೆಯ ಕೆಲಸಗಳಲ್ಲಿ ಅನಗತ್ಯವಾಗಿ ಮಧ್ಯ ಪ್ರವೇಶಿಸುವಂತೆ ಮಾಡುತ್ತದೆ. ಸರ್ಕಾರವನ್ನು ಜನರಿಗೆ ಜವಾಬ್ದಾರಿಯುತಗೊಳಿಸದೆ, ಬದಲಾಗಿ ಆಡಳಿತವನ್ನು ಜನತೆಯಿಂದ ದೂರ ಮಾಡುತ್ತದೆ,” ಎಂದು ಹೇಳಿದ್ದಾರೆ.“ಬಿಬಿಎಂಪಿ ಕಾಯ್ದೆಯ ಪ್ರಕಾರ ಪ್ರತಿ ತಿಂಗಳು ವಾರ್ಡ್ ಸಮಿತಿ ಸಭೆ ನಡೆಸಲು ಕಡ್ಡಾಯವಿದ್ದರೂ, ಕೇವಲ 32% ಸಭೆಗಳು ಮಾತ್ರ ನಡೆದಿವೆ. ನಗರಾಭಿವೃದ್ಧಿ ಯೋಜನೆಯಲ್ಲಿ ಜನರು ಭಾಗವಹಿಸಬೇಕು, ಶಾಸಕರು ಅಥವಾ ರಾಜ್ಯ ಸರ್ಕಾರವಲ್ಲ. ವಾರ್ಡ್ ಸಮಿತಿಗಳು “ಏರಿಯಾ ಸಭಾ”ಗಳಿಂದ ನೇರ ಮಾಹಿತಿಯನ್ನು ಪಡೆದು, ಸ್ಥಳೀಯ ಅಭಿವೃದ್ಧಿ ಯೋಜನೆ ರೂಪಿಸುವಂತಾಗಬೇಕು. ಬೆಂಗಳೂರು ಮೆಟ್ರೋಪಾಲಿಟನ್ ಪ್ಲಾನಿಂಗ್ ಕಮಿಟಿ ಅಥವಾ ನಗರ ಪಾಲಿಕೆ ನಿರ್ಧಾರಗಳಿಗೆ ಮಾತ್ರ ಅವಲಂಬಿತವಾಗಬಾರದು. ವಾರ್ಡ್ ಮಟ್ಟದ ಕಾಮಗಾರಿಗಳ ಸ್ವತಂತ್ರವಾಗಿ ಪರಿಶೀಲನೆ ನಡೆಸುವ ಅಧಿಕಾರ ಕೂಡಾ ಅವರಿಗೆ ನೀಡಬೇಕು ” ಎಂದು ಪಕ್ಷದ ಬೆಂಗಳೂರು ದಕ್ಷಿಣದ ವಲಯ ನಾಯಕಿ ಪೂಂಗೊತೈ ಪರಮಶಿವಂ ತಿಳಿಸಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button