ಇತ್ತೀಚಿನ ಸುದ್ದಿ

ಶಕ್ತಿ ಯೋಜನೆಯಿಂದ ದೇಗುಲಗಳಿಗೆ ಹೆಚ್ಚಿದ ಲಾಭ

ಬೆಂಗಳೂರು: ಮುಜರಾಯಿ ದೇವಾಲಯಗಳಿಗೆ ಈ ವರ್ಷದ ಆರಂಭದಲ್ಲಿಅಂದರೆ ಜನವರಿ-ಫೆಬ್ರವರಿ ಎರಡೇ ತಿಂಗಳಲ್ಲಿಕೇವಲ 10 ದೇವಾಲಯಗಳಿಂದ ಬರೋಬ್ಬರಿ 70 ಕೋಟಿ ರೂ. ಆದಾಯ ಹರಿದು ಬಂದಿದೆ.‘ಶಕ್ತಿ’ ಯೋಜನೆಯ ಫಲದಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಆದಾಯದಲ್ಲಿಈ ವರ್ಷವೂ ಭರ್ಜರಿ ಏರಿಕೆಯಾಗಿದೆ. ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಆದಾಯವು ‘ಶಕ್ತಿ’ ಯೋಜನೆಗೆ ಮೊದಲು ಕೂಡ ಹೆಚ್ಚಿನ ಪ್ರಮಾಣದಲ್ಲಿಯೇ ಹರಿದು ಬರುತ್ತಿತ್ತು. ಯೋಜನೆ ಜಾರಿಯಾದ ನಂತರ ಇವುಗಳ ಆದಾಯ ಎರಡು- ಮೂರು ಪಟ್ಟು ಏರಿಕೆಯಾಗುತ್ತಾ ಬಂದಿದ್ದು, ಇದೀಗ ದಾಖಲಾರ್ಹ ಏರಿಕೆಯಾಗಿದೆ.2024ರ ಡಿಸೆಂಬರ್‌ ಅಂತ್ಯದ ವೇಳೆಗೆ 10 ಪ್ರತಿಷ್ಠಿತ ದೇವಾಲಯಗಳ ಆದಾಯ 305 ಕೋಟಿ ರೂ.ಗಳಷ್ಟಿದ್ದುದು, 2025ರ ಫೆಬ್ರವರಿ ಅಂತ್ಯದ (ಎರಡು ತಿಂಗಳಲ್ಲಿ) ವೇಳೆಗೆ ಬರೋಬ್ಬರಿ 370 ಕೋಟಿ ಗೂ ಅಕ ಹಣ ಸಂಗ್ರಹವಾಗಿದೆ. ಎರಡು ತಿಂಗಳಲ್ಲಿ 70 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಎಲ್ಲಾದೇವಾಲಯಗಳ ಆದಾಯ ಪರಿಗಣಿಸಿದರೆ ಬಹುಕೋಟಿಯಾಗಲಿದೆ. ಮಾರ್ಚ್, ಏಪ್ರಿಲ್‌, ಮೇ ತಿಂಗಳಲ್ಲಿಶಾಲಾ-ಕಾಲೇಜುಗಳಿಗೆ ರಜೆಯಿದ್ದು, ಜಾತ್ರೆಗಳು ಕೂಡ ನಡೆಯಲಿವೆ. ಈ ವೇಳೆ ದೇವಾಲಯಗಳ ಆದಾಯದಲ್ಲಿಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ.ಜನವರಿಯಲ್ಲಿ ಧನುರ್ಮಾಸವಿತ್ತು. ಅಯ್ಯಪ್ಪಸ್ವಾಮಿ ಮಾಲೆ ಹಾಕಿದವರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿಭೇಟಿ ನೀಡಿದ್ದರು. ಜತೆಗೆ ಸಂಕ್ರಾಂತಿ ಹಬ್ಬವಿತ್ತು. ಅದಾದ ಬಳಿಕ ಫೆಬ್ರವರಿಯಲ್ಲಿಶಿವರಾತ್ರಿ ಹಬ್ಬ ಮತ್ತು ಮದುವೆ ಸಮಾರಂಭಗಳು ಕೂಡ ಹೆಚ್ಚಾಗಿದ್ದವು. ಹೀಗಾಗಿ, ಕುಕ್ಕೆ ಸುಬ್ರಹ್ಮಣ್ಯಸ್ವಾಮಿ, ಮೈಸೂರಿನ ಚಾಮುಂಡೇಶ್ವರಿ, ಯಡಿಯೂರು ಸಿದ್ದಲಿಂಗೇಶ್ವರ, ನಂಜನಗೂಡಿನ ಶ್ರೀ ನಂಜುಂಡೇಶ್ವರ, ಕೊಪ್ಪಳದ ಹುಲಿಗೆಮ್ಮ, ಬೆಂಗಳೂರಿನ ಬನಶಂಕರಿ ದೇವಿ ಸೇರಿದಂತೆ ಬಹುತೇಕ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿದರು. ದೇವಾಲಯಗಳಿಗೆ ಭಕ್ತರ ದಂಡಿನ ಜತೆ ಕೋಟ್ಯಂತರ ರೂ. ಆದಾಯವೂ ಬಂದಿದೆ.ದೇವಾಲಯಗಳ ಆದಾಯ, ಖರ್ಚು ವೆಚ್ಚ, ಅಲ್ಲಿನ ಚಟುವಟಿಕೆಗಳಿಗಾಗಿ 2023ರಲ್ಲಿ‘ದಾರ್ಮಿಕ ಪರಿಷತ್ತು ಕಾಯಿದೆ’ ಜಾರಿಗೆ ತರಲಾಯಿತು. ಅದರಂತೆ 205 ‘ಎ’ ಗ್ರೇಡ್‌ ದೇವಾಲಯಗಳಿಗೆ ಒಬ್ಬ ಅಧ್ಯಕ್ಷರು ಮತ್ತು 8 ಮಂದಿ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. 193 ‘ಬಿ’ ಗ್ರೇಡ್‌ ದೇವಾಲಯಗಳಲ್ಲಿಜಿಲ್ಲಾಕಾರಿಗಳೇ ಒಂದು ಸಮಿತಿ ರಚಿಸಿದ್ದಾರೆ. ಹೀಗಾಗಿ, ಪ್ರತಿ ದೇವಾಲಯಗಳು ಒಂದೊಂದು ಸರಕಾರವಿದ್ದಂತೆ. ಆದಾಯವು ಆಯಾ ಸಮಿತಿಯ ವ್ಯಾಪ್ತಿಗೆ ಬರುತ್ತದೆ.ದೇವಾಲಯಗಳಿಗೆ ಬರುವ ಭಕ್ತರಿಗೆ ಬೇಕಾದ ಸೌಲಭ್ಯಗಳು, ದೇವಾಲಯಗಳ ಅಭಿವೃದ್ ಕೆಲಸಗಳಿಗೆ ಬಳಸಿ ಉಳಿದ ಹಣವನ್ನು ಆಯಾ ದೇವಾಲಯಗಳ ಹೆಸರಿನಲ್ಲಿಎಫ್‌ಡಿ ಇಡಲಾಗುವುದು. ಒಂದು ರೂಪಾಯಿಯನ್ನೂ ಅನ್ಯ ಉದ್ದೇಶಗಳಿಗೆ ಬಳಸುವುದಿಲ್ಲಎಂದು ರಾಜ್ಯ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ದೇವಾಲಯಗಳ ಆದಾಯ ವಿವರ

ದೇವಾಲಯದ ಹೆಸರು2024 (ಡಿಸೆಂಬರ್‌ ಅಂತ್ಯಕ್ಕೆ)2025 (ಫೆಬ್ರವರಿ ಅಂತ್ಯಕ್ಕೆ)
ಶ್ರೀ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ112.27 ಕೋಟಿ137.25 ಕೋಟಿ
ಕೊಲ್ಲೂರು ಶ್ರೀ ಮೂಕಾಂಬಿಕಾ56.79 ಕೋಟಿ67.18 ಕೋಟಿ
ಮೈಸೂರಿನ ಚಾಮುಂಡೇಶ್ವರಿ37.16 ಕೋಟಿ42.71 ಕೋಟಿ
ಯಡಿಯೂರು ಸಿದ್ಧಲಿಂಗೇಶ್ವರ22.67 ಕೋಟಿ27.24 ಕೋಟೀ
ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ16.02 ಕೋಟಿ26.91 ಕೋಟಿ
ನಂಜನಗೂಡು ಶ್ರೀಕಂಠೇಶ್ವರ20.42 ಕೋಟಿ24.50 ಕೋಟೀ
ಕೊಪ್ಪಳದ ಶ್ರೀ ಹುಲಿಗೆಮ್ಮ ದೇವಾಲಯ13.82 ಕೋಟಿ15.85 ಕೋಟಿ
ಮಂದಾರ್ತಿಯ ಶ್ರೀ ದುರ್ಗಾ ಪರಮೇಶ್ವರಿ10.84 ಕೋಟಿ13.61 ಕೋಟಿ
ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಹ್ಮಣ್ಯ7.76 ಕೋಟೀ10.11 ಕೋಟಿ
ಬೆಂಗಳೂರಿನ ಬನಶಂಕರಿ7.59 ಕೋಟೀ10.11 ಕೋಟಿ

Related Articles

Leave a Reply

Your email address will not be published. Required fields are marked *

Back to top button