ಕ್ರೈಂ

ತನಿಖೆ ಮುಗಿಯುವವರೆಗೆ ರನ್ಯಾ ರಾವ್, ಅವರ ತಂದೆ ಬಗ್ಗೆ ಮಾತಾಡಲ್ಲ

ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬೆಳವಣಿಗೆಗಳ ಬಗ್ಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.ರನ್ಯಾ ರಾವ್ ಪ್ರಕರಣವನ್ನು ನೋಡಿದ್ದೇನೆ. ತನಿಖೆ ಮುಗಿದ ಮೇಲೆ ಎಲ್ಲವೂ ಗೊತ್ತಾಗಲಿದೆ. ತನಿಖೆ ಸಂಪೂರ್ಣವಾಗಿ ಆಗಲಿ. ಸಿಐಡಿಗೆ ಕೊಟ್ಟು ವಾಪಸ್ ತೆಗೆದುಕೊಂಡಿದ್ದಾರೆ. ಅದು ಯಾಕೆ ಅಂತ ನನಗೆ ಗೊತ್ತಿಲ್ಲ. ಹಿಂದೆ ಯಾರೆಲ್ಲಾ ಇದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ಒಂದು ವ್ಯವಸ್ಥೆಯನ್ನು ಅಧಿಕಾರದಲ್ಲಿದ್ದವರು ದುರುಪಯೋಗಪಡಿಸಿಕೊಂಡಾಗ, ಅವರನ್ನು ಶಿಕ್ಷಿಸದೇ ಇದ್ದಾಗ ಜನಸಾಮಾನ್ಯರಿಗೆ ವ್ಯವಸ್ಥೆ ಮೇಲೆಯೇ ಅನುಮಾನ ಬರುತ್ತದೆ. ಅದಕ್ಕೆ ನಾವೆಲ್ಲರೂ ತನಿಖೆ ಮುಗಿಯುವವರೆಗೆ ಕಾಯೋಣ ಎಂದರು.ನಟಯ ತಂದೆ ಹಿರಿಯ ಪೊಲೀಸ್ ಆಫೀಸರ್ ಇದ್ದಾರೆ. ತನಿಖೆ ನಡೆಯುತ್ತಿರುವಾಗ ನಾವು ಆರೋಪ ಮಾಡಲ್ಲ. ಸತ್ಯಾಂಶವೆಲ್ಲವೂ ತನಿಖೆಯಿಂದ ಹೊರ ಬರಲಿ ಎಂದರು.

‘‘ಡಿಜಿಪಿ ಕೆ ರಾಮಚಂದ್ರರಾವ್‌ ಸೂಚನೆ ಮೇರೆಗೆ ಅವರ ಮಲಮಗಳು ಹರ್ಷವರ್ಧಿನಿ ರನ್ಯಾಗೆ ಪ್ರೋಟೊಕಾಲ್‌ ಸೇವೆ ಒದಗಿಸುತ್ತಿದ್ದೆ,’’ ಎಂದು ಹೆಡ್‌ಕಾನ್ಸ್‌ಟೆಬಲ್‌ ಬಸಪ್ಪ ಐ. ಬೆಳ್ಳೂರು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಿಚಾರಣೆ ವೇಳೆ ತಿಳಿಸಿದ್ದಾರೆ.ಈ ಹೇಳಿಕೆ ಡಿಜಿಪಿ ರಾಮಚಂದ್ರ ರಾವ್‌ ಅವರಿಗೆ ಸಂಕಷ್ಟ ತಂದೊಡ್ಡುವುದು ನಿಚ್ಚಳವಾಗಿದೆ. ಮಾರ್ಚ್ 3ರಂದು ದುಬೈನಿಂದ ಚಿನ್ನ ಸ್ಮಗ್ಲಿಂಗ್‌ ಮಾಡಿಕೊಂಡು ಬಂದಿದ್ದ ರನ್ಯಾ ಅವರನ್ನು ಕರೆತರಲು ಪ್ರೋಟೊಕಾಲ್‌ ಅಧಿಕಾರಿಯಾಗಿ ಬಸಪ್ಪ ತೆರಳಿದ್ದರು.ಏರ್‌ಪೋರ್ಟ್‌ನಲ್ಲಿ ರನ್ಯಾ ಲಗೇಜ್‌ ಕೂಡ ಪಡೆದುಕೊಂಡು ಮನೆಗೆ ಕರೆದೊಯ್ಯುವ ಸನ್ನಾಹದಲ್ಲಿದ್ದರು. ಈ ವೇಳೆ ಡಿಆರ್‌ಐ ಅಧಿಕಾರಿಗಳು ರನ್ಯಾರ ತಪಾಸಣೆ ನಡೆಸಿ ಬಂಧಿಸಿದ್ದರು. ಈ ನಿಟ್ಟಿನಲ್ಲಿರನ್ಯಾಗೆ ಪ್ರೋಟೊಕಾಲ್‌ ಸೇವೆ ಒದಗಿಸಲು ಬಂದಿದ್ದ ಬಸಪ್ಪ ಅಧಿವರನ್ನು ಡಿಆರ್‌ಐ ಸುದೀರ್ಘ ವಿಚಾರಣೆ ನಡೆಸಿದೆ.ವಿಚಾರಣೆ ವೇಳೆ ಡಿಜಿಪಿ ರಾಮಚಂದ್ರರಾವ್‌ ಅವರ ಸೂಚನೆ ಮೇರೆಗೆ ರನ್ಯಾ ಹಾಗೂ ಅವರ ಕುಟುಂಬಸ್ಥರಿಗೆ ಏರ್‌ಪೋರ್ಟ್‌ಗೆ ಆಗಮನ ಹಾಗೂ ನಿರ್ಗಮನದ ವೇಳೆ ಪ್ರೋಟೊಕಾಲ್‌ ನೀಡುತ್ತಿದ್ದುದಾಗಿ ತಿಳಿಸಿದ್ದಾರೆ. ‘‘ನಟಿ ರನ್ಯಾ ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಈ ಹಿಂದೆಯೂ ಹಲವು ಬಾರಿ ಅವರಿಗೆ ಪ್ರೋಟೊಕಾಲ್‌ ನೀಡಿದ್ದೆ.ಮಾರ್ಚ್ 3 ರಂದು ಕರೆ ಮಾಡಿದ್ದ ರನ್ಯಾ, ಸಾಯಂಕಾಲ 6.20 ರ ಸುಮಾರಿಗೆ ಏರ್‌ಪೋರ್ಟ್‌ಗೆ ಬರುವಂತೆ ತಿಳಿಸಿದ್ದರು. ಹೀಗಾಗಿ, ರಾಜ್ಯ ಗುಪ್ತಚರ ದಳದ ಕಾನ್ಸ್‌ಟೆಬಲ್‌ ಧನುಷ್‌ಕುಮಾರ್‌ ಜತೆ ತೆರಳಿದ್ದೆ. ಆದರೆ, ರನ್ಯಾ ಅವರು ಅಕ್ರಮವಾಗಿ ಚಿನ್ನ ತಂದಿರುವುದು ನನಗೆ ಗೊತ್ತಿಲ್ಲ,’’ ಎಂದು ಡಿಆರ್‌ಐ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ರನ್ಯಾ ನೋಡಿದ್ದು ಇದೇ ಮೊದಲು.ಏರ್‌ಪೋರ್ಟ್‌ನಿಂದ ರನ್ಯಾರನ್ನು ಕರೆತರಲು ಪ್ರೋಟೊಕಾಲ್‌ ಅಧಿಕಾರಿಯಾಗಿದ್ದ ಬಸಪ್ಪ ಜತೆ ತೆರಳಿದ್ದ ಕಾನ್ಸ್‌ಟೆಬಲ್‌ ಧನುಷ್‌ಕುಮಾರ್‌ ಅವರನ್ನೂ ಡಿಆರ್‌ಐ ವಿಚಾರಣೆ ನಡೆಸಿದೆ. ‘‘ಸ್ನೇಹಿತ ಹಾಗೂ ಸಹೋದ್ಯೋಗಿ ಆಗಿದ್ದ ಕಾರಣಕ್ಕೆ ಬಸಪ್ಪ ಜತೆ ತೆರಳಿದ್ದೆ. ರನ್ಯಾ ಅವರನ್ನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ಅವರ ಜತೆ ನನಗೆ ಯಾವುದೇ ಪರಿಚಯವಿಲ್ಲ. ರನ್ಯಾ ಅವರು ಚಿನ್ನ ಸ್ಮಗ್ಲಿಂಗ್‌ ಮಾಡಿದ್ದಾರೆ,’’ ಎಂದು ಧನುಷ್‌ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

Related Articles

Leave a Reply

Your email address will not be published. Required fields are marked *

Back to top button