ಇತ್ತೀಚಿನ ಸುದ್ದಿ
Trending

ರಾಜಋಷಿ ಭಗೀರಥ ಜಯಂತಿ ಆಚರಣೆ.

ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕೊಳ್ಳೇಗಾಲ ಹಾಗೂ ತಾಲ್ಲೂಕು ಉಪ್ಪಾರ ಸಂಘ, ವತಿಯಿಂದ ರಾಜಋಷಿ ಶ್ರೀಭಗೀರಥ ಜಯಂತಿ ಮಹೋತ್ಸವವನ್ನು ಪಟ್ಟಣದ ನ್ಯಾಷಿನಲ್ ಶಾಲಾ ಆವರಣದಲ್ಲಿರುವ ವಿದ್ಯಾಮಾತೆ ಸಾವಿತ್ರಿಬಾಯಿ ಪುಲೆ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.

ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಎಂಜಿಎಸ್ ವಿ ಶಾಲೆ ಮೈದಾನದಲ್ಲಿ ತಾಲ್ಲೂಕು ಉಪ್ಪಾರ ಸಂಘಟನೆಗಳು ಸೇರಿ ಅಲಂಕೃತ ವಾಹನದಲ್ಲಿ ಭಗೀರಥ ಮಹರ್ಷಿಯವರ ಭಾವಚಿತ್ರವನ್ನು ಇರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ಮಾಡಿದರು ಕೊಳ್ಳೇಗಾಲ ಶಾಸಕರ ಎ. ಆರ್. ಕೃಷ್ಣಮೂರ್ತಿ ಹಾಗೂ ಹನೂರು ಶಾಸಕರ ಎಂ. ಆರ್. ಮಂಜುನಾಥ್ ರವರು ಮೆರವಣಿಗೆಗೆ ಚಾಲನೆ ನೀಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಅಂಬೇಡ್ಕರ್ ಸರ್ಕಲ್ ನಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನ್ಯಾಷಿನಲ್ ಶಾಲಾ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು,

ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಮಾತನಾಡಿ ದೇಶಕಂಡ ಮಹರ್ಷಿಗಳಲ್ಲಿ ಅಪ್ರತಿಮ ಛಲಗಾರ ಮಹರ್ಷಿ ಶ್ರೀ ಭಗೀರಥರವರು ಇಡಿದ ಛಲವನ್ನು ಬಿಡದೆ ಉಘ್ರ ತಪಸ್ಸನ್ನು ಮಾಡಿ ಭೂಮಿಗೆ ಗಂಗೆ ಸುರಿಸಿ ತಮ್ಮ ಪೂರ್ವಜರ ಅತ್ನಕ್ಕೆ ಶಾಂತಿಯನ್ನು ಮುಕ್ತಿಯನ್ನು ನೀಡಿದರು, ಅಂತಹ ಮಹನೀಯರ ಛಲ ಮತ್ತು ಶ್ರದ್ದೆಯನ್ನು ಮೈಗೂಡಿಸಿಕೊಂಡು ಎಲ್ಲರು ಉತ್ತಮ ಪ್ರಜೆಗಳಾಗಿ ಬದುಕನ್ನು ಕಟ್ಟಿಕೊಳ್ಳಬೇಕು, ಹೊಂದುಳಿದ ಸಮುದಾಯಗಳು ಮುಂದುವರಿಯಬೇಕಾದರೆ ಶಿಕ್ಷಣ ಒಂದೇ ಅಸ್ತ್ರ, ಆದ್ದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿರುವುದು ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯ ಬೇಕು ಶಿಕ್ಷಣದ ಮೂಲಕ ಜ್ಞಾನವನ್ನು ವೃದ್ಧಿಸಿಕೊಂಡು ತಮ್ಮ ಹಕ್ಕುಗಳನ್ನು ಸ್ಥಾನಮಾನಗಳನ್ನು ಪಡೆದುಕೊಂಡು ಸಮಾಜ ದ ಮುಖ್ಯವಾಹಿನಿಗೆ ಬರಬೇಕು.

ಸಮಾಜದಲ್ಲಿ ಏಳಿಗೆ ಯಾಗಬೇಕಾದರೆ ಮೊದಲು ಶಿಕ್ಷಣ ಅನಂತರ ಸಂಘಟನೆ, ಸಂಘಟಿತರಾಗಿ ಹೋರಾಟಗಳನ್ನು ಮಾಡಬೇಕು, ಆವಾಗಲೇ ಅಭಿವೃದ್ಧಿ ಸಾಧ್ಯ, ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಉಪ್ಪಾರ ಸಮುದಾಯದವರ ಆಶೀರ್ವಾದವು ಕೂಡ ಇದೆ ಯಾಕೆಂದರೆ 19 ವರ್ಷಗಳ ವನವಾಸದ ನಂತರ ಉಪ್ಪಾರ ಸಮುದಾಯದವರು ಕೂಡ ನನಗೆ ಮತಗಳನ್ನು ಗೆಲ್ಲಿಸಿದ್ದೀರಾ ಆದ್ದರಿಂದ ನಾನು ನನ್ನ ಅವಧಿಯಲ್ಲಿ ನಿಮ್ಮ ಸಮುದಾಯದವರಿಗೆ ಯಳಂದೂರು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರನ್ನಾಗಿ ಮಾಡಿದ್ದೇನೆ ಜೊತೆಗೆ ಯಳಂದೂರು ಪಟ್ಟಣದಲ್ಲಿ ಉಪ್ಪಾರ ಭವನ ನಿರ್ಮಾಣಕ್ಕೆ ಅನುದಾನವನ್ನು ಕೊಟ್ಟಿದ್ದೇನೆ ಹಾಗೂ ಕೊಳ್ಳೇಗಾಲದಲ್ಲಿ ಸಹ ಉಪ್ಪಾರ ಭವನಕ್ಕೆ ಜಾಗ ನೋಡಿದ್ದಾರೆ ಮುಂದಿನ ದಿನಗಳಲ್ಲಿ ಕೊಳ್ಳೇಗಾಲಕ್ಕೆ 50 ಲಕ್ಷಗಳನ್ನು ಕೊಡಿಸುತ್ತೇನೆ,ನಮ್ಮ ಸರ್ಕಾರ ಬಡವರ ಹಿಂದುಳಿದವರ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ಕೊಡುತ್ತಿದೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನಗಳನ್ನು ತಂದು ಅಭಿವೃದ್ಧಿ ಪಡಿಸುತ್ತೇನೆ, ಎಂದರು.

ಕಲಾತಂಡಗಳು ಹಾಗೂ ಯಜಮಾನರುಗಳಿಗೆ ಸನ್ ಈ ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ ಕುಂತೂರು ಮೋಳೆ, ಯಳಂದೂರು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಭು ಪ್ರಸಾದ್, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಶಿವಕುಮಾರ್, ತಾಲ್ಲೂಕು ಭಗೀರಥ ಉಪ್ಪಾರ ಸಂಘ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷರು ರೇಖಾ, ಸದಸ್ಯರು ಧರಣೇಶ್, ರಾಘವೇಂದ್ರ, ಮಂಜುನಾಥ್, ಉಪವಿಭಾಗಾಧಿಕಾರಿ ಮಹೇಶ್.ಬಿ.ಆರ್, ತಹಶಿಲ್ದಾರ್ ಬಸವರಾಜು.ಐ.ಈ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ನಗರಸಭೆ ಪೌರಯುಕ್ತ ಪರಶಿವಯ್ಯ, ಚೆಸ್ಕಾಂ ಎಇಇ ರಾಜು, ಹಾಗೂ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button