
ಸೆಲೆಬ್ರಿಟಿಗಳಿಂದ ಹಿಡಿದು ದೊಡ್ಡ ದೊಡ್ಡ ನಗರಗಳ ಹಳೆಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇದೀಗ 70 ವರ್ಷ ಹಳೆಯ ಬೆಂಗಳೂರು ನಗರದ ಫೋಟೋವೊಂದು ಎಲ್ಲೆಡೆ ಹರಿದಾಡುತ್ತಿದೆ. 1950 ದಶಕದಲ್ಲಿ ಎಂ.ಜಿ ರೋಡ್ ಹೇಗಿತ್ತು ಎಂಬುದನ್ನು ತೋರಿಸುವ ಕಪ್ಪು-ಬಿಳುಪಿನ ಫೋಟೋ ಹರಿದಾಡುತ್ತಿದ್ದು, ಸಂಚಾರದಟ್ಟಣೆಯಿಲ್ಲದ ಯುಗದ ನೋಟವನ್ನು ಕಂಡು ಸ್ವರ್ಗದಂತಿತ್ತು ನಮ್ಮ ಬೆಂಗಳೂರು ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.ಕೆಂಪೇಗೌಡರು ಕಟ್ಟಿದ ಬೆಂದಕಾಳೂರು ಇಂದು ಜಾಗತಿಕ ಮಟ್ಟದಲ್ಲಿ ಹೈಟೆಕ್ ನಗರವಾಗಿ ಬೆಳೆದು ನಿಂತಿದೆ. ಜೊತೆಗೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು (Bengaluru) ಎಂಬ ಮಾಯಾ ನಗರಿ ಎಷ್ಟೋ ಜನರಿಗೆ ಜೀವನ ಕಲ್ಪಿಸಿಕೊಟ್ಟ ನಗರವಾಗಿದೆ. ಪ್ರಸ್ತುತ ಟ್ರಾಫಿಕ್ (Traffic) ಸದ್ದು, ಗದ್ದಲದಿಂದ ತುಂಬಿರುವ ಬೆಂಗಳೂರು ದಶಕಗಳ ಹಿಂದೆ ಹೇಗಿತ್ತು ಗೊತ್ತಾ? ಈ ಕುರಿತ ಹಳೆಯ ಫೋಟೋವೊಂದು (Photo) ವೈರಲ್ ಆಗುತ್ತಿದೆ. 1950 ದಶಕದಲ್ಲಿ ಎಂ.ಜಿ ರೋಡ್ (M.G Road) ಹೇಗಿತ್ತು ಎಂಬುದನ್ನು ತೋರಿಸುವ ಫೋಟೋ ಹರಿದಾಡುತ್ತಿದ್ದು, ಸಂಚಾರದಟ್ಟಣೆಯಿಲ್ಲದ ಯುಗದ ನೋಟವನ್ನು ಕಂಡು ಸ್ವರ್ಗದಂತಿತ್ತು ನಮ್ಮ ಬೆಂಗಳೂರು ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.ಸುಮಾರು 70 ವರ್ಷಗಳ ಹಿಂದೆ ನಮ್ಮ ಬೆಂಗಳೂರು ನಗರ, ಟ್ರಾಫಿಕ್ ಫ್ರೀ ಬೀದಿಗಳು ಹೇಗಿತ್ತು ಎಂಬುದನ್ನು ತೋರಿಸುವ ಹಳೆಯ ಕಪ್ಪು-ಬಿಳುಪಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 1950 ರಲ್ಲಿ ಎಂ.ಜಿ ರೋಡ್ ಹೇಗಿತ್ತು, ನಮ್ಮ ಬೆಂಗಳೂರು ಎಷ್ಟು ಪ್ರಶಾಂತವಾಗಿತ್ತು ಎಂಬುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ.ಈ ಕುರಿತ ಫೋಟೋವನ್ನು IndiaHistorypic ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “1950 ರಲ್ಲಿ ಬೆಂಗಳೂರಿನ ಎಂ.ಜಿ ರೋಡ್ನ ಕಾರ್ ಪಾರ್ಕಿಂಗ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ಫೋಟೋದಲ್ಲಿ 70 ವರ್ಷಗಳ ಹಿಂದೆ ಎಂ.ಜಿ ರೋಡ್ ಹೇಗಿತ್ತು ಎಂಬುದನ್ನು ಹಾಗೂ ವಿಂಟೇಜ್ ಕಾರು, ಸೈಕಲ್ ರಿಕ್ಷಾಗಳನ್ನು ಪಾರ್ಕ್ ಮಾಡಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಮಾರ್ಚ್ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 36 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಆಗಿನ ಬೆಂಗಳೂರು ಸ್ವರ್ಗದಂತಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಷ್ಟು ಸುಂದರವಾಗಿತ್ತು ನಮ್ಮ ಬೆಂಗಳೂರು ನಗರ, ಆದ್ರೆ ಇಂದು ಅಭಿವೃದ್ಧಿಯ ಹೆಸರಲ್ಲಿ ಸಿಟಿ ಅವ್ಯವಸ್ತೆಗೊಂಡಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸ್ವರ್ಗದಂತಿದ್ದ ನಗರವನ್ನು ಇಂದು ಅಭಿವೃದ್ಧಿಯ ಹೆಸರಲ್ಲಿ ಹಾಳು ಮಾಡಿ ಬಿಟ್ಟಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.