Country
Trending

ಭಾರತೀಯ ಸೇನೆಯ ಬಹುದೊಡ್ಡ ಬೇಟೆ: ಲಷ್ಕರ್​ ಸಂಘಟನೆಯ ಟಾಪ್ ಕಮಾಂಡರ್ ಅಲ್ತಾಫ್​ ಹತ್ಯೆ

ಬಂಡಿಪೋರಾ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ(Bandipora)ದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿ ಸಾವನ್ನಪ್ಪಿದ್ದಾನೆ.  ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿ ಹೊಣೆಯನ್ನು ಲಷ್ಕರ್​-ಎ-ತೊಯ್ಬಾ ಹೊತ್ತುಕೊಂಡಿತ್ತು. ಇದೀಗ ಭಾರತೀಯ ಸೇನೆ ಬಹುದೊಡ್ಡ ಬೇಟೆಯನ್ನೇ ಆಡಿದ್ದು, ಟಾಪ್​ ಕಮಾಂಡರ್​ ಅಲ್ತಾಫ್​ನನ್ನು ಹತ್ಯೆ ಮಾಡಿವೆ.ಭಯೋತ್ಪಾದಕರು ಅಲ್ಲಿ ಅಡಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದ ಸೇನೆ ಅಲ್ಲಿಗೆ ತೆರಳಿತ್ತು. ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಡಿಪೋರಾದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಮೊದಲು ಉಗ್ರರು ಸೇನೆಯ ಮೇಲೆ ಗುಂಡು ಹಾರಿಸಿದ್ದರು. ಅದಕ್ಕೆ ಪ್ರತಿಯಾಗಿ ಸೇನೆಯು ಕೂಡ ದಾಳಿ ನಡೆಸಿತು. ಭದ್ರತಾ ಪಡೆಗಳು ಬೆನ್ನಟ್ಟುತ್ತಿದ್ದ ಭಯೋತ್ಪಾದಕರಲ್ಲಿ ಒಬ್ಬನಿಗೆ ಆರಂಭಿಕ ಗುಂಡಿನ ಚಕಮಕಿಯಲ್ಲಿ ಗಾಯಗಳಾಗಿವೆ ಎಂದು ವರದಿಯಾಗಿತ್ತು.

ಅದೇ ಎನ್‌ಕೌಂಟರ್‌ನಲ್ಲಿ, ಹಿರಿಯ ಅಧಿಕಾರಿಯ ವೈಯಕ್ತಿಕ ಭದ್ರತಾ ತಂಡದ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡರು.ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶ್ರೀನಗರಕ್ಕೆ ಆಗಮಿಸಿದರು. ಅಲ್ಲಿ ಬಂಡಿಪೋರಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಅವರು ಪರಿಸ್ಥಿತಿಯ ಸಮಗ್ರ ಭದ್ರತಾ ಪರಿಶೀಲನೆ ನಡೆಸಲಿದ್ದಾರೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಶಂಕಿತ ಎಲ್‌ಇಟಿ ಭಯೋತ್ಪಾದಕರನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿದ್ದಾರೆ.

ಎಎಸ್‌ಪಿ ನೇತೃತ್ವದಲ್ಲಿ ಪೊಲೀಸರ ವಿಶೇಷ ತನಿಖಾ ತಂಡ ರಚನೆ, 200ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಎಸ್‌ಐಟಿಯಿಂದ ವಿಚಾರಣೆ ನಡೆಸಲಾಗುತ್ತಿದೆ. ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಪಹಲ್ಗಾಮ್​ನಲ್ಲಿ ಪ್ರವಅಸಕ್ಕೆಂದು ಬಂದಿದ್ದ ಹಿಂದೂಗಳನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ 26 ಮಂದಿ ಸಾವನ್ನಪ್ಪಿದ್ದರು.

Related Articles

Leave a Reply

Your email address will not be published. Required fields are marked *

Back to top button