ಇತ್ತೀಚಿನ ಸುದ್ದಿ
Trending

ಪೊಲೀಸರ ಮುಂದೆಯೇ ಪತಿಗೆ ಥಳಿಸಿದ ಮಾಜಿ ಬಾಕ್ಸರ್‌ ಸವಿಟೀ ಬೂರಾ!

ಅಂತಾರಾಷ್ಟ್ರೀಯ ಬಾಕ್ಸರ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಸವೀಟಿ ಬೂರಾ ತಮ್ಮ ಪತಿ, ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಇಬ್ಬರ ಕುಟುಂಬ ಸದಸ್ಯರು ಕುಳಿತಿದ್ದಾಗಲೇ ಏಕಾಏಕಿ ಪತಿ ದೀಪಕ್ ಹೂಡಾಗೆ ಥಳಿಸಿದ್ದಾರೆ. ಮಾ.15 ರಂದು ನಡೆದ ಘಟನೆ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.ವಿಚ್ಛೇದನ ಪ್ರಕರಣದ ಸಂಬಂಧ ಎರಡು ಕುಟುಂಬಗಳ ಸದಸ್ಯರು ಹರಿಯಾಣದ ಹಿಸಾರ್‌ ಪೊಲೀಸ್ ಠಾಣೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಸವೀತಿ ಬೂರಾ ಹೂಡಾ ಕಡೆಗೆ ಧಾವಿಸಿ ಅವರ ಕುತ್ತಿಗೆ ಹಿಡಿದುಕೊಂಡು ಹಲ್ಲೆ ಮಾಡಲು ಯತ್ನಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಕುಟುಂಬ ಸದಸ್ಯರು ಮಧ್ಯ ಪ್ರವೇಶಿಸಿ ಸ್ವೀಟಿ ಬೂರಾ ಅವರನ್ನು ತಡೆದಿದ್ದಾರೆ.”ಹೂಡಾ ಅವರೊಂದಿಗೆ ಬದುಕಲು ಬಯಸುವುದಿಲ್ಲ. ವಿಚ್ಛೇದನ ಬೇಕು. ನಯಾ ಪೈಸೆಯೂ ಬೇಡ. ನನ್ನ ವಸ್ತುಗಳು ಬೇಕು ಅಷ್ಟೇ. ವಸ್ತುಗಳ ಪಟ್ಟಿಯನ್ನು ನಾನು ಈಗಾಗಲೇ ಪೊಲೀಸರಿಗೆ ಸಲ್ಲಿಸಿದ್ದೇನೆ, ಆದರೆ ಒಂದು ತಿಂಗಳಿನಿಂದ ಯಾವುದೇ ಕ್ರಮ ಕೈಗೊಂಡಿಲ್ಲ… ನಾನು ಪ್ರಧಾನಿ ನರೇಂದ್ರ ಮೋದಿ ಜಿ ಮತ್ತು ನಮ್ಮ ಗೃಹ ಸಚಿವರಿಗೆ ನ್ಯಾಯಕ್ಕಾಗಿ ಮನವಿ ಮಾಡುತ್ತೇನೆ. ಶಾಂತಿಯುತ ಪರಿಹಾರಕ್ಕಾಗಿ ಆಶಿಸುತ್ತಾ ನಾನು ಆರಂಭದಲ್ಲಿ ಮೌನವಾಗಿದ್ದೆಎಂದು ಬೂರ ಹೇಳಿದ್ದರು.”ಮಾರ್ಚ್ 15 ರಂದು ಹಿಸಾರ್ ಪೊಲೀಸ್ ಠಾಣೆಗೆ ಕರೆ ಬಂದಾಗ ವಿಚಾರಣೆ ವೇಳೆ ತನ್ನ ಮೇಲೆ ಹಲ್ಲೆ ನಡೆಸಲಾಯಿತು. ವಿಚಾರಣೆಯ ಸಮಯದಲ್ಲಿ, ನನ್ನ ಹೆಂಡತಿ ಮತ್ತು ಅವಳ ತಂದೆ ಅವಾಚ್ಯ ಶಬ್ಧ ಬಳಸಿದರು. ಪೊಲೀಸರ ಎದುರಲ್ಲೇ ಇರುವಾಗ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು ಮತ್ತು ನನಗೆ ಗಾಯಗಳಾಗಿವೆ. ಅವರ ತಾಯಿಯ ಚಿಕ್ಕಪ್ಪ ಸತ್ಯವಾನ್ ಕೂಡ ಅವರೊಂದಿಗೆ ಇದ್ದರು” ಎಂದು ಎಂದು ದೀಪಕ್‌ ಹೂಡಾ ಹೇಳಿದ್ದಾರೆ.

2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮೆಹಂ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಿ ಸೋತಿದ್ದ ದೀಪಕ್, ಈ ಹಿಂದೆ 1 ಕೋಟಿ ರೂಪಾಯಿ ಫಾರ್ಚೂನರ್ ಕಾರಿಗೆ ಬೇಡಿಕೆ ಇಟ್ಟಿದ್ದರಂತೆ. ಅದರಂತೆ ಅದನ್ನು ಪೂರೈಸಿದ್ದರೂ ಅವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 85 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಪತಿ ಅಥವಾ ಕುಟುಂಬವು ಮಹಿಳೆಯ ಮೇಲೆ ಕ್ರೌರ್ಯದಿಂದ ವರ್ತಿಸುವುದಕ್ಕೆ ಸಂಬಂಧಿಸಿದೆ.ಬೂರಾ ಮತ್ತು ಹೂಡಾ 2022 ರಲ್ಲಿ ವಿವಾಹವಾಗಿದ್ದರು ಮತ್ತು ಇಬ್ಬರೂ ಕ್ರೀಡಾಪಟುಗಳು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ. ಬೂರಾ ಮಿಡಲ್‌ವೇಟ್ ವರ್ಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಗಿದ್ದರೆ, ಹೂಡಾ ಪ್ರೊ ಕಬಡ್ಡಿ ಲೀಗ್‌ನಲ್ಲಿನ ತಮ್ಮ ಸಾಧನೆಗಳಿಗೆ ಹೆಸರುವಾಸಿಯಾಗಿದ್ದಾರೆ.ಹೂಡಾ 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರೋಹ್ಟಕ್ ಜಿಲ್ಲೆಯ ಮೆಹಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಫಲರಾಗಿದ್ದರು.


Related Articles

Leave a Reply

Your email address will not be published. Required fields are marked *

Back to top button