
ಚಾಮರಾಜನಗರ :ಪುಣಜನೂರು ಚೆಕ್ ಪೋಸ್ಟ್ ಬಳಿ ಮರಕ್ಕೆ ಡಿಕ್ಕಿ ಹೊಡದ ಕಾರು ಇಬ್ಬರು ಸಾವನಪ್ಪಿದ್ದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.ಮೈಸೂರು ಮೂಲದ ನಂದನ್(24), ಜೀವನ್ (25) ಮೃತ ದುರ್ದೈಗಳಾಗಿದ್ದಾರೆ.ಗುಂಡ್ಲುಪೇಟೆಯ ಸುನೀಲ್, ಮೈಸೂರಿನ ಶಶಾಂಕ್, ಧನುಷ್ ಗಾಯಾಗೊಂಡವ ರಾಗಿದ್ದು ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಕೋಳಿ ಪಾಳ್ಯದ ಬಳಿ ಸ್ನೇಹಿತನ ಮದುವೆಗೆ ಬಂದಿದ್ದ ಇವರು ರಾತ್ರಿ ವೇಳೆ ಅಡ್ಡಾಡ್ತಿಯಾಗಿ ವಾಹನ ಚಾಲನೆ ಮಾಡಿಕೊಂಡು ಬಂದು ಮರಕ್ಕೆ ಡಿಕ್ಕಿ ಹೊಡೆಯಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರೂ ಸಾವನಪ್ಪಿದ್ದಾರೆ ಚಾಮರಾಜನಗರದ ರಾಮಸಮುದ್ರ ಪೂರ್ವ ಪೊಲೀಸ್ ಠಾಣಾ ಇಲ್ಲಿ ಪ್ರಕರಣ ದಾಖಲಾಗಿದೆ.