ಸಿನಿಮಾ
Trending

ಜಾಮೀನು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ನಟಿ ರನ್ಯಾ ರಾವ್

ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ (Gold Smugling) ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ (Ranya Rao) ಜಾಮೀನು ಕೋರಿ ಹೈಕೋರ್ಟ್​ಗೆ (High Court) ಅರ್ಜಿ ಸಲ್ಲಿಸಿದ್ದಾರೆ. ರನ್ಯಾ ರಾವ್ ಪರ ವಕೀಲರು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅನ್ನು ಡಿಆರ್​ಐ ಅಧಿಕಾರಿಗಳು ಮಾರ್ಚ್ 3 ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ನಟಿ ರನ್ಯಾ ರಾವ್ ಬರೋಬ್ಬರಿ 14 ಕೆಜಿಗೂ ಹೆಚ್ಚಿನ ತೂಕದ ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿದ್ದರು. ಸದ್ಯ, ನಟಿ ರನ್ಯಾ ರಾವ್​ ಪರಪ್ಪನ ಅಗ್ರಹಾದಲ್ಲಿದ್ದಾರೆ.ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ರನ್ಯಾ ರಾವ್​ ಜಾಮೀನು ಕೋರಿ 64 ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಹಲವು ಕಾರಣಗಳನ್ನು ನೀಡಿ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ, ರನ್ಯಾ ರಾವ್ ಪರ ವಕೀಲರು ಹೈಕೋರ್ಟ್​ ಮೆಟ್ಟಿಲು ಏರಿದ್ದಾರೆ. ನಟಿ ರನ್ಯಾ ರಾವ್​ಗೆ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ನಟಿ ರನ್ಯಾ ರಾವ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನಟಿ ರನ್ಯಾ ರಾವ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ರನ್ಯಾ ಸಂಬಂಧಿ ಅಕುಲಾ ಅನುರಾಧ ದೂರು, ನೀಡಿದ್ದು ಎಫ್​ಐಆರ್​ ದಾಖಲಿಸಲಾಗಿತ್ತು. ಎಫ್​ಐಆರ್​ ರದ್ದು ಕೋರಿ ಬಸನಗೌಡ ಪಾಟೀಲ್​ ಯತ್ನಾಳ್​ ಹೈಕೋರ್ಟ್​ ಮೆಟ್ಟಿಲು ಏರಿದ್ದರು.ಇದೀಗ, ಹೈಕೋರ್ಟ್​ ಯತ್ನಾಳ್​ ವಿರುದ್ಧದ ಎಫ್​ಐಆರ್​ಗೆ ಏಪ್ರಿಲ್ 28ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬಿನ್​ಎಸ್​ ಸೆಕ್ಷನ್​ 79 ಅನ್ವಯವಾಗುವುದಿಲ್ಲವೆಂದು ಯತ್ನಾಳ್ ಪರ ವಕೀಲರು ವಾದಿಸಿದ್ದರು.

ನಟಿ ರನ್ಯಾ ರಾವ್​ ಅವರು ಪೊಲೀಸ್​ ಪ್ರೋಟೋಕಾಲ್​ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಐಎಎಸ್​ ಅಧಿಕಾರಿ ಗೌರವ್ ಗುಪ್ತಾ ಸಲ್ಲಿಸಿರುವ ವರದಿಯಲ್ಲಿ ದೃಢವಾಗಿದೆ. ಮಲತಂದೆ, ಡಿಜಿಪಿ ರಾಮಚಂದ್ರರಾವ್​ ಅವರು ತನ್ನ ಮಗಳಿಗಾಗಿ ಪೊಲೀಸ್​ ಪ್ರೋಟೋಕಾಲ್​ ದುಪಯೋಗ ಪಡಿಸಿಕೊಂಡಿರುವುದು ಸಾಕ್ಷಿಗಳ ದೃಢವಾಗಿದೆ. ಪ್ರೋಟೋಕಾಲ್ ದುರುಪಯೋಗದ ತನಿಖಾ ವರದಿಯನ್ನು ಐಎಎಸ್​ ಅಧಿಕಾರಿ ಗೌರವ್ ಗುಪ್ತಾ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button