ವಿಮಾನದಲ್ಲಿ ಏಕಾಏಕಿ ರಂಧ್ರ ಸೃಷ್ಟಿಯಾಗಿ, 8 ತಿಂಗಳ ಮಗು ಸೇರಿ ನಾಲ್ಕು ಮಂದಿ 15 ಸಾವಿರ ಅಡಿಯಿಂದ ಬಿದ್ದಿದ್ರು, ಏನಿದು ಘಟನೆ

ಅದು 1986ರ ಏಪ್ರಿಲ್ 2ರಂದು ನಡೆದ ಘಟನೆ, ರೋಮ್‌ನಿಂದ ಅಥೆನ್ಸ್‌ಗೆ ವಿಮಾನ ಹೊರಟಿತ್ತು. ಮಾರ್ಗದಮಧ್ಯದಲ್ಲಿ ವಿಮಾನದೊಳಗೆ ಬಾಂಬ್ ಸ್ಪೋಟಗೊಂಡು ರಚನೆಯಾದ ದೊಡ್ಡ ರಂದ್ರದಿಂದ 8 ತಿಂಗಳ ಮಗು ಸೇರಿ 4 ಮಂದಿ 15 ಸಾವಿರ ಅಡಿಯಿಂದ ಕೆಳಗೆ ಬಿದ್ದಿದ್ದರು. ಮತ್ತೊಂದೆಡೆ, ಈ ಪ್ರಯಾಣವನ್ನು ವಿಮಾನದಲ್ಲಿ ಕೇವಲ ಎರಡರಿಂದ ಮೂರು ಗಂಟೆಗಳಲ್ಲಿ ಪೂರ್ಣಗೊಳಿಸಬಹುದು. ಅದಕ್ಕಾಗಿಯೇ ರೋಮ್‌ನಿಂದ ಅಥೆನ್ಸ್‌ಗೆ ಹೊರಟ ವಿಮಾನವು ಆ ಸಮಯದಲ್ಲಿ ಪ್ರಯಾಣಿಕರಿಂದ ತುಂಬಿತ್ತು. ಬಾಂಬ್ ಸ್ಫೋಟದಿಂದ ವಿಮಾನದಲ್ಲಿ ದೊಡ್ಡ ರಂಧ್ರವಾಗಿತ್ತು.
ಪ್ರಪಂಚದಾದ್ಯಂತ ಸಂಭವಿಸಿದ ವಿಮಾನ ಅಪಘಾತಗಳ ದೊಡ್ಡ ಪಟ್ಟಿಯೇ ಇದೆ. ಕಳೆದ ಕೆಲವು ತಿಂಗಳುಗಳಲ್ಲಿ ಅಮೆರಿಕದಲ್ಲಿಯೇ ಸಾಕಷ್ಟು ವಿಮಾನ ಅಪಘಾತ(Plane Accident)ಗಳು ಸಂಭವಿಸಿವೆ. ಇದರಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಇನ್ನೂ ಕೆಲವರು ಗಾಯಗೊಂಡಿದ್ದಾರೆ. 1986ರಲ್ಲಿ ಬೋಯಿಂಗ್ ವಿಮಾನ 727ರಲ್ಲಿ ನಡೆದ ಬಾಂಬ್ ಸ್ಪೋಟ ಯಾರೂ ಕೂಡ ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ.
ಅಂದು ಏಪ್ರಿಲ್ 2, ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭಯಾನಕ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಏನೂ ಅರಿಯದ 8 ತಿಂಗಳ ಕಂದಮ್ಮ ಕೂಡ ಇತ್ತು. ಅಮೆರಿಕದ ಪ್ರಮುಖ ವಿಮಾನಯಾನ ಸಂಸ್ಥೆಯಾದ TWA ಯ ಬೋಯಿಂಗ್ 727 ಪ್ರಯಾಣಿಕ ವಿಮಾನದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು.ಈ ವಿಮಾನವು ರೋಮ್ ಮೂಲಕ ಅಥೆನ್ಸ್‌ಗೆ ಹೋಗುತ್ತಿತ್ತು. ರೋಮ್ ಮತ್ತು ಅಥೆನ್ಸ್ ನಡುವಿನ ಅಂತರವು ಸುಮಾರು 1272 ಕಿಲೋಮೀಟರ್‌ಗಳು, ಇದು ರೈಲಿನಲ್ಲಿ ತಲುಪಲು ಸುಮಾರು 15 ಗಂಟೆಗಳು ತೆಗೆದುಕೊಳ್ಳುತ್ತದೆ.ಮತ್ತೊಂದೆಡೆ, ಈ ಪ್ರಯಾಣವನ್ನು ವಿಮಾನದಲ್ಲಿ ಕೇವಲ ಎರಡರಿಂದ ಮೂರು ಗಂಟೆಗಳಲ್ಲಿ ಪೂರ್ಣಗೊಳಿಸಬಹುದು. ಅದಕ್ಕಾಗಿಯೇ ರೋಮ್‌ನಿಂದ ಅಥೆನ್ಸ್‌ಗೆ ಹೊರಟ ವಿಮಾನವು ಆ ಸಮಯದಲ್ಲಿ ಪ್ರಯಾಣಿಕರಿಂದ ತುಂಬಿತ್ತು. ಬಾಂಬ್ ಸ್ಫೋಟದಿಂದ ವಿಮಾನದಲ್ಲಿ ದೊಡ್ಡ ರಂಧ್ರವಾಗಿತ್ತು.
ವಿಮಾನವು ರೋಮ್‌ನಿಂದ ಸಮಯಕ್ಕೆ ಸರಿಯಾಗಿ ಹೊರಟಿತು. ಇದಾದ ನಂತರ, ವಿಮಾನವು ಗಾಳಿಯಲ್ಲಿ ಸುಮಾರು 15,000 ಅಡಿ ಎತ್ತರದಲ್ಲಿದ್ದಾಗ ವಿಮಾನದ ಸೀಟಿನ ಕೆಳಗೆ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ಸ್ಫೋಟಗೊಂಡು ವಿಮಾನದಲ್ಲಿ 3 ರಿಂದ 4 ಅಡಿ ದೊಡ್ಡ ರಂಧ್ರ ಸೃಷ್ಟಿಯಾಯಿತು ಮತ್ತು ಅಲ್ಲಿ ಕುಳಿತಿದ್ದ ನಾಲ್ವರು ಅಮೇರಿಕನ್ ನಾಗರಿಕರು ಗಾಳಿಯ ಒತ್ತಡದಿಂದಾಗಿ ವಿಮಾನದಿಂದ ಹೊರಗೆ ಬಿದ್ದರು. ಈ ಭೀಕರ ಅಪಘಾತದಲ್ಲಿ ಎಂಟು ತಿಂಗಳ ಮಗು ಕೂಡ ಇತ್ತು. ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದರು.
ವಿಮಾನವು ಅಥೆನ್ಸ್ ವಿಮಾನ ನಿಲ್ದಾಣಕ್ಕೆ ಬಹಳ ಹತ್ತಿರ ಬಂದಾಗ ಈ ಘಟನೆ ಸಂಭವಿಸಿದೆ. ಆದಾಗ್ಯೂ, ವಿಮಾನದಲ್ಲಿ ಬಾಂಬ್ ಸ್ಫೋಟಗೊಂಡ ನಂತರ ಯಾರೂ ಬದುಕುಳಿಯುವ ಭರವಸೆ ಇರಲಿಲ್ಲ. ಆದರೆ, ಈ ಭಯಾನಕ ಪರಿಸ್ಥಿತಿಯಲ್ಲಿ, ವಿಮಾನದ ಪೈಲಟ್ ಬಹಳ ಎಚ್ಚರಿಕೆಯಿಂದ ಅಥೆನ್ಸ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಮತ್ತು ಸುರಕ್ಷಿತವಾಗಿ ಇಳಿಸಿದರು, ಇದು ವಿಮಾನದಲ್ಲಿ ಕುಳಿತಿದ್ದ 118 ಪ್ರಯಾಣಿಕರ ಜೀವಗಳನ್ನು ಉಳಿಸಿದ್ದರು.ಅಮೆರಿಕದ ಪ್ರಯಾಣಿಕ ವಿಮಾನದ ಬಾಂಬ್ ದಾಳಿಯ ಹೊಣೆಯನ್ನು ಅರಬ್ ಎಜ್ಜೆಡೈನ್ ಕಸ್ಸಮ್ ಹೊತ್ತುಕೊಂಡಿತ್ತು, ಲಿಬಿಯಾದ ಮೇಲೆ ಅಮೆರಿಕದ ಬಾಂಬ್ ದಾಳಿಗೆ ಪ್ರತೀಕಾರ ಎಂದು ಕರೆಯಲಾಗಿತ್ತು.