
ಬಿಜೆಪಿ ಪಕ್ಷವು ಹಿಂದೂತ್ವದ ಸಿದ್ದಾಂತದ ಮೇಲೆ ನಡೆದುಕೊಂಡು ಬಂದಂತಹ ಪಕ್ಷವಾಗಿದೆ ಈ ಪಕ್ಷದಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತನಿಂದ ಹಿಡಿದು ನಾಯಕರ ವರೆಗೂ ಎಲ್ಲರೂ ಸಂಸ್ಕಾರ ಉಳ್ಳವರಾಗಿದ್ದಾರೆ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಪಂಚಮಸಾಲಿ ಸಮಾಜದ ಜನರಿಂದ ಹಿಡಿದು ಸಣ್ಣ ಪುಟ್ಟ ಎಲ್ಲ ಸಮಾಜದ ಬಾಂದವರನ್ನು ಪ್ರೀತಿಸುವಂತಹ ಹೃದಯವಂತಿಕೆ ಹೊಂದಿದ್ದಾರೆಂದು ಬಿಜೆಪಿ ಮುಖಂಡ ಹಾಗೂ ನಡಹಳ್ಳಿ ಅಭಿಮಾನಿ ಬಳಗದ ಶಿವಶಂಕರ ಹಿರೇಮಠ ಅವರು ಹೇಳಿದರು.
ಶುಕ್ರವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಬಸನಗೌಡ ಪಾಟೀಲ(ಯತ್ನಾಳ) ಅವರು ಹಿಂದೂ ಸಮಾಜದ ನಾಯಕರಾಗಿದ್ದಾರೆ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವದು ನಮ್ಮೇಲ್ಲರಿಗೂ ನೋವು ಇದೆ ಆದರೆ ಬಿಜೆಪಿ ಪಕ್ಷದ ವರಿಷ್ಠರು ತೆಗೆದುಕೊಂಡ ತಿರ್ಮಾನಕ್ಕೆ ಬದ್ದರಾಗಬೇಕಾಗುತ್ತದೆ ಯಾಕೆಂದರೆ ಬಿಜೆಪಿ ಪಕ್ಷದಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಸಿದ್ದಾಂತವನ್ನು ಅಳವಡಿಸಿಕೊಂಡು ಬಂದಿದ್ದಾಗಿದೆ ರಾಜಕೀಯ ನಾಯಕರುಗಳು ಆರೋಪ ಮತ್ತು ಪ್ರತ್ಯಾರೋಪ ಮಾಡುವದು ಸಹಜವಾದ ಪ್ರಕ್ರೀಯೇ ಆಗಿದೆ ಇದನ್ನೇ ಬಂಡವಾಳವನ್ನಾಗಿಟ್ಟುಕೊಂಡು ಕೆಲವು ಕಾಂಗ್ರೇಸ್ ಪ್ರಚೋದಿತರು ಬಿಜೆಪಿ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜೇಂದ್ರ ಮತ್ತು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರ ಭಾವಚಿತ್ರಗಳಿಗೆ ಪ್ರತಿಭಟನೆಯ ಸಮಯದಲ್ಲಿ ಚಪ್ಪಲಿಹಾರ ಹಾಕಿ ಅವಮಾನಿಸಿರುವದು ಅವರ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ ಎಂದ ಅವರು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಅಭಿವೃದ್ದಿ ಪೂರಕ ಕ್ರೀಯಾಶೀಲಹೊಂದಿದಂತಹ ವ್ಯಕ್ತಿಯಾಗಿದ್ದಾರೆ ಬಡವರ ಬಗ್ಗೆ ಕಳಕಳಿ ಹೊಂದಿದಂತಹ ವ್ಯಕ್ತಿಯಾಗಿದ್ದಾರೆ ಅದರಲ್ಲಿಯೂ ಪಂಚಮಸಾಲಿ ಸಮಾಜದ ಬಂದುಗಳೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಿದವರಾಗಿದ್ದಾರೆ ಇಂತಹ ವ್ಯಕ್ತಿಯ ಹೆಸರನ್ನು ತೇಜೋವಧೆ ಮಾಡುವ ದೃಷ್ಠಿಯಿಂದ ಕೆಲವು ಬಿಜೆಪಿ ಪಕ್ಷದ ವಿರೋಧಿಗಳು ಪ್ರತಿಭಟನಾ ಸಮಯದಲ್ಲಿ ಬಿಜೆಪಿ ನಾಯಕರುಗಳ ಭಾವಚಿತ್ರಕ್ಕೆ ಅವಮಾನಿಸುವಂತಹ ಕಾರ್ಯ ಮಾಡಿದ್ದಾರೆ ಇದನ್ನು ಭಲವಾಗಿ ಖಂಡಿಸುತ್ತೇವೆಂದರು. ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳಿಂದಲೂ ಅಭಿವೃದ್ದಿ ಕಾಣದೇ ಹಾಗೆ ಉಳಿದಿದ್ದ ಮುದ್ದೇಬಿಹಾಳ ಮತಕ್ಷೇತ್ರವನ್ನು ಅಂದು ಶಾಸಕರಾಗಿದ್ದ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡಿದ ಪರಿಣಾಮ ಇಡೀ ಮತಕ್ಷೇತ್ರದಲ್ಲಿ ರಸ್ತೆ, ಗುಡಿ ಗುಂಡಾರಗಳು ಅಲ್ಲದೇ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳಲ್ಲಿ ಮಹಾನ್ ನಾಯಕರುಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸರ್ವ ಸಮಾಜದ ಬಂದುಗಳ ಹೃದಯದಲ್ಲಿ ನೆಲೆಸುವಂತಹ ಕೆಲಸ ಮಾಡಿದ್ದಾರೆ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವದಕ್ಕೆ ಪಂಚಮಸಾಲಿ ಸಮಾಜದ ಬಂದುಗಳಿಗೆ ನೋವು ಆಗಿದೆ ಇದನ್ನು ಪ್ರಶ್ನೀಸಿ ಪ್ರತಿಭಟನೆ ಮಾಡುವದು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕು ಇದೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕಾಂಗ್ರೇಸ್ಸಿನ ಪ್ರಚೋದಿತ ಕೆಲವರು ಬಿಜೆಪಿ ಪಕ್ಷದ ನಾಯಕರ ಭಾವಚಿತ್ರಕ್ಕೆ ಅವಮಾನಿಸಿರುವದು ಖಂಡನೀಯವಾಗಿದೆ ಈ ಅವಮಾನ ಕೃತ್ಯದಲ್ಲಿ ಭಾಗಿಯಾದವರೂ ಯಾರೂ ಬಿಜೆಪಿ ಕಾರ್ಯಕರ್ತರೇ ಅಲ್ಲಾ ಆದ ಕಾರಣ ಇದೇ ದಿ.೭ ರಂದು ಬಿ.ಎಸ್.ಯಡಿಯೂರಪ್ಪನವರ ಹಾಗೂ ವಿಜೇಂದ್ರ ಮತ್ತು ಎ.ಎಸ್.ಪಾಟೀಲ(ನಡಹಳ್ಳಿ) ಅವರ ಭಾವಚಿತ್ರಗಳಿಗೆ ಕ್ಷೀರಾಭಿಷೇಕ ಸಮಾರಂಭವನ್ನು ಆಯೋಜಿಸಲಾಗಿದ್ದು ಅಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ನಡಹಳ್ಳಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಇನ್ನೋರ್ವ ಪುರಸಭಾ ಸದಸ್ಯ ಬಿಜೆಪಿ ಮುಖಂಡ ವಾಸುದೇವ ಹೆಬಸೂರ ಅವರು ಮಾತನಾಡಿ ಯತ್ನಾಳ ಅವರೂ ನಮ್ಮ ನಾಯಕರಾಗಿದ್ದಾರೆ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವದು ನಮಗೂ ಕೂಡಾ ನೋವು ಆಗಿದೆ ರಾಜಕೀಯವಾಗಿ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಪಕ್ಷದ ತಿರ್ಮಾನವನ್ನು ಸ್ವಾಗತಿಸಿದ್ದಾರೆ ಹೊರತು ಪಂಚಮಸಾಲಿ ಸಮಾಜವನ್ನು ದ್ವೇಶಿಸುವಂತಹ ಕೆಲಸ ಮಾಡಿಲ್ಲಾ ಈ ಕಾರ್ಯವನ್ನು ಕಾಂಗ್ರೇಸ್ ಪ್ರಚೋದಿತರು ಬಿಜೆಪಿ ನಾಯಕರುಗಳ ಭಾವಚಿತ್ರಗಳಿಗೆ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿರುವದು ಸರಿಯಲ್ಲಾ ಇದನ್ನು ನಾವು ಖಂಡಿಸುತ್ತೇವೆಂದ ಅವರು ಎ.ಎಸ್.ಪಾಟೀಲ(ನಡಹಳ್ಳಿ) ಅವರ ನೇತೃತ್ವದಲ್ಲಿ ಕಳೆದ ಎರಡ್ಮೂರು ತಿಂಗಳ ಹಿಂದೆ ಕಳಪೆ ಬೀಜ ಪೂರೈಕೆ ಯಿಂದ ಮತ್ತು ಮಳೆ ಅಭಾವದಿಂದ ತೊಗರಿ ಬೆಳೆ ಕೈಕೊಟ್ಟಿದ್ದಕ್ಕೆ ದೊಡ್ಡ ಮಟ್ಟದ ಹೋರಾಟವನ್ನು ಕೈಗೊಳ್ಳಲಾಗಿತ್ತು ಅದರ ಪರಿಣಾಮ ಈ ಭಾಗದ ಎಲ್ಲ ರೈತರಿಗೆ ಪರಿಹಾರದ ಜೊತೆಗೆ ವಿಮಾ ಕೂಡಾ ಜಮಾ ಆಗಿದೆ ಇಂತಹ ರೈತರ ಪರ ಹೋರಾಟಗಾರ ನಡಹಳ್ಳಿ ಅವರನ್ನು ಮೊನ್ನೆ ತಾಳಿಕೋಟಿಯಲ್ಲಿ ಬಾವಚಿತ್ರಕ್ಕೆ ಅವಮಾನಿಸಿರುವದರ ವಿರೂದ್ದ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ನಡಹಳ್ಳಿ ಅಭಿಮಾನಿ ಬಳಗದ ನೇತೃತ್ವದಲ್ಲಿ ಇದೇ ದಿ.೭ ರಂದು ಕ್ಷೀರಾಭಿಷೇಕ ಸಮಾರಂಭವನ್ನು ಆಯೋಜಿಸಿದ್ದೇವೆ ಅಂದು ಸಾಯಂಕಾಲ ೪ ಗಂಟೆಗೆ ಅಂಬೇಡ್ಕರ್ ಸರ್ಕಲ್‌ದ ಮೂಲಕ ಕತ್ರಿಭಜಾರ, ಶಿವಾಜಿ ಮಹಾರಾಜರ ವೃತ್ತ, ರಾಣಾಪ್ರತಾಪಸಿಂಹ್ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ಮೆರವಣಿಗೆಯ ಮೂಲಕ ಆಗಮಿಸಿ ಸಮಾರಂಭವನ್ನು ನಡೆಸಲು ಮುಂದಾಗಿದ್ದೇವೆಂದರು.
ಇನ್ನೋರ್ವ ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ ಅವರು ಮಾತನಾಡಿ ಹಿಂದೂತ್ವ ಅಂದರೆ ಬಿಜೆಪಿ ಬಿಜೆಪಿ ಅಂದರೆ ಹಿಂದೂತ್ವ ಎರಡೂ ಒಂದೇ ಆಗಿದೆ ಯತ್ನಾಳ ಅವರ ಉಚ್ಚಾಟನೆಯಿಂದ ಎಲ್ಲರಿಗೂ ನೋವು ಆಗಿದೆ ಯಾವುದೇ ಪಕ್ಷದ ನಾಯಕರುಗಳಾಗಿರಲಿ ಅವರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿರುವದು ಬಿಜೆಪಿ ಕಾರ್ಯಕರ್ತರಾದ ನಾವುಗಳು ಖಂಡಿಸುತ್ತೇವೆಂದರು.
ಈ ಸಮಯದಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ, ಮುರಿಗೆಪ್ಪ ಸರಶೆಟ್ಟಿ, ಬಾಬು ಕಾರ್ಜೋಳ, ರಾಘವೇಂದ್ರ ವಿಜಾಪೂರ, ಮಲ್ಲು ಮೇಟಿ, ಈಶ್ವರ ಹೂಗಾರ, ಕಕ್ಕು ರಂಗ್ರೇಜ್, ವಿಠ್ಠಲ ಮೋಹಿತೆ, ಗುರುನಾಥ ರೆಡ್ಡಿ, ವಿಠ್ಠಲ ಮೋಹಿತೆ, ಬಸ್ಸು ಹೊಟ್ಟಿ, ಮೊದಲಾದವರು ಇದ್ದರು.
ವಕಫ್ ವಿಲ್ ಮಂಡನೆ ಸ್ವಾಗತಾರ್ಹ
ಲೋಕಸಭಾ ಅಧಿವೇಶನದಲ್ಲಿ ವಕಲ್ ವಿಲ್ ಮಂಡನೆಯಾಗಿ ಅನುಮೋದನೆಗೊಂಡಿರುವದು ಎಲ್ಲ ಹಿಂದೂ ಸಮಾಜ ಬಾಂದವರು ಸ್ವಾಗತಿಸುತ್ತೇವೆ ಈ ನಿರ್ಧಾರ ಕೈಕೊಂಡ ಕೇಂದ್ರ ಸರ್ಕಾರ ಮತ್ತು ವಿಶೇಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಅಭಿನಂದಿಸುತ್ತೇವೆ.