ಕ್ರೈಂ
Trending

ಸರ್ಕಾರಿ ಉದ್ಯೋಗ ಪಡೆಯಲು ರೈಲ್ವೆ ಇಲಾಖೆಯಲ್ಲಿದ್ದ ಪತಿಯನ್ನೇ ಹತ್ಯೆಗೈದ ಪತ್ನಿ

ಉತ್ತರ ಪ್ರದೇಶ: ಸರ್ಕಾರಿ ಉದ್ಯೋಗ ಹಾಗೂ ಸವಲತ್ತುಗಳನ್ನು ಪಡೆಯುವ ದುರಾಸೆಯಲ್ಲಿ ರೈಲ್ವೆ ಇಲಾಖೆಯಲ್ಲಿದ್ದ ಪತಿಯನ್ನೇ ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನಜೀಬಾಬಾದ್‌ನಲ್ಲಿ ಘಟನೆ ನಡೆದಿದ್ದು, ಸರ್ಕಾರಿ ಹುದ್ದೆಯ ಆಸೆಯಲ್ಲಿ ಪತಿಯನ್ನು ಕೊಲೆ ಮಾಡಿದ್ದಾಳೆ. ಆದರೆ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಆಕೆ ಹೇಳಿದ್ದಳು, 29 ವರ್ಷದ ದೀಪಕ್ ಕುಮಾರ್ ಅವರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ವರದಿ ದೃಢಪಡಿಸಿದ್ದವು. ನಜೀಬಾಬಾದ್‌ನ ಕ್ಯಾರೇಜ್ ಮತ್ತು ವ್ಯಾಗನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಆದರ್ಶ ನಗರದ ಬಾಡಿಗೆ ಮನೆಯಲ್ಲಿ ಪತ್ನಿ ಶಿವಾನಿ ಜೊತೆ ವಾಸಿಸುತ್ತಿದ್ದರು.  ಈ ಜೋಡಿ ಪ್ರೇಮ ವಿವಾಹವಾಗಿದ್ದರು.ಕಳೆದ ಶುಕ್ರವಾರ ದೀಪಕ್ ಅವರ ಕುಟುಂಬಕ್ಕೆ ಶಿವಾನಿ ದೀಪಕ್​ಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದರು. ದೀಪಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಮತ್ತು ನಂತರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಆದರೆ ವೈದ್ಯರು ಅವರನ್ನು ದಾಖಲಿಸಲು ನಿರಾಕರಿಸಿದರು. ಬಿಜ್ನೋರ್‌ನ ಜಿಲ್ಲಾ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ದೀಪಕ್ ಅವರ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಗಮನಿಸಿದ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದಾಗ ಅನುಮಾನಗಳು ಹುಟ್ಟಿಕೊಂಡಿತ್ತು.ಕತ್ತು ಹಿಸುಕಿ ಸಾವನ್ನಪ್ಪಿರುವುದನ್ನು ದೃಢಪಟ್ಟಿತ್ತು. ದೀಪಕ್ ಅವರ ಸಹೋದರ ಪಿಯೂಷ್ ಅಲಿಯಾಸ್ ಮುಕುಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಶಿವಾನಿ ಮತ್ತು ಅಪರಿಚಿತ ಸಹಚರನ ವಿರುದ್ಧ ಪ್ರಕರಣ ದಾಖಲಿಸಿದರು. ಶಿವಾನಿಯನ್ನು ವಶಕ್ಕೆ ಪಡೆಯಲಾಗಿದೆ.

ಆರಂಭಿಕ ವಿಚಾರಣೆಯ ಸಮಯದಲ್ಲಿ, ಶಿವಾನಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದಳು ಆದರೆ ಅಂತಿಮವಾಗಿ ಅಪರಾಧವನ್ನು ಒಪ್ಪಿಕೊಂಡಳು. ಕೊಲೆಯ ಸಮಯದಲ್ಲಿ ಆತ ಊಟ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆತನ ಗಂಟಲಿನಲ್ಲಿ ಆಹಾರ ಹಾಗೆಯೇ ಇತ್ತು. ಅವನನ್ನು ಕತ್ತು ಹಿಸುಕಲು ಹಗ್ಗವನ್ನು ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದೀಪಕ್ ಅವರ ಹಿನ್ನೆಲೆ ಮಣಿಪುರದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸಿದ್ದು, 2023 ರಲ್ಲಿ ಅವರು ಆ ಹುದ್ದೆಯನ್ನು ತೊರೆದು ರೈಲ್ವೆಗೆ ಸೇರಿದರು.

ಇತ್ತೀಚೆಗೆ ಪತ್ನಿಯ ಕುಟುಂಬದೊಂದಿಗಿನ ಸಂಬಂಧ ಹದಗೆಟ್ಟಿದ್ದರಿಂದ ಅವರು ಆಕೆಯೊಂದಿಗೆ ಬೇರೆಡೆಗೆ ತೆರಳಿದ್ದರು. ದಂಪತಿಗೆ ವೇದಾಂತ್ ಎಂಬ ಒಂದು ವರ್ಷದ ಮಗನೂ ಇದ್ದಾನೆ. ಮೃತರ ಅವಲಂಬಿತ ಯೋಜನೆಯಡಿ ಉದ್ಯೋಗ ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಶಿವಾನಿ ಈ ಕೊಲೆ ಮಾಡಿರಬಹುದು ಎಂಬ ಆರೋಪಗಳು ಕೇಳಿಬಂದಿವೆ.

Related Articles

Leave a Reply

Your email address will not be published. Required fields are marked *

Back to top button