
ಚಾಮರಾಜನಗರ: ಟಾಟಾ ಏಸ್ ಗೂಡ್ಸ್ ವಾಹನ ಇಲ್ಲಿಗೆ ಸಮೀಪದ ಮಾದಾಪುರದ ಬಳಿ ಚಾಲಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಸ್ಥಳದಲ್ಲೇ ಸಾವು ಸಂಭವಿಸಿದೆ.
ಚಾಲಕ ಸುಬ್ರಹ್ಮಣ್ಯ (55) ಬೆಂಗಳೂರಿನ ಕೆಂಗೇರಿ ಎಂದು ಗೊತ್ತಾಗಿದೆ. ಚಾಮರಾಜನಗರಕ್ಕೆ ಬಂದು 5 ಗಂಟೆಗೆ ಹಿಂತಿರುಗುವ ಸಂದರ್ಭದಲ್ಲಿ ಅಸ್ವಸ್ಥತೆ ಅಥವಾ ಬೇರೊಂದು ವಾಹನ ತಪ್ಪಿಸಲು ಹೋಗಿ ಹೀಗಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇದೇ ವಾಹನದಲ್ಲಿದ್ದ ಹೆಣ್ಣು ಮಕ್ಕಳಾದ ಧೃತಿ(12) ಧಾತ್ರಿ(4) ಇದ್ದರು. ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿ 108 ವಾಹನದಲ್ಲಿ ಸಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಅವರ ಸಂಬಂಧಿ ನಾಗಚಂದ್ರ ಸುಪರ್ದಿಗೆ ನೀಡಲಾಗಿದೆ.
ಚಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಸಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಸಂಚಾರಿ ಠಾಣೆ ಪಿಎಸ್ಐ ಹನುಮಂತ ಉಪ್ಪಾರ್ ಮತ್ತು ಸಿಬ್ಬಂದಿ ಅಪಘಾತದ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ.