ಇತ್ತೀಚಿನ ಸುದ್ದಿ
Trending

ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯದ ಇಲಾಖೆಗಳೇ ಇಲ್ಲ

ಮೈಸೂರು : ರಾಜ್ಯ ಸರ್ಕಾರ 2 ವರ್ಷ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ ನಡೆಸಿದ ಹಿನ್ನೆಲೆಯಲ್ಲಿ ಸಿ ಟಿ ರವಿ ವಾಗ್ದಾಳಿ ನಡೆಸಿದರು.ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಸಾಧನೆಯಾ? ಭ್ರಷ್ಟಾಚಾರ, ಸರ್ಕಾರಿ ನೌಕರರು, ಗುತ್ತಿಗೆದಾರರ ಆತ್ಮಹತ್ಯೆ, ಕೊಲೆ ಸುಲಿಗೆ, ಪೊಲೀಸ್ ಠಾಣೆಗಳ ಮೇಲೆ ದಾಳಿ ಇವೆಲ್ಲವೂ ಸಂಭ್ರಮ ಪಡುವ ಸಂಗತಿಗಳಾ?

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯದ ಇಲಾಖೆಗಳೇ ಇಲ್ಲ. ರಾಜ್ಯದಾದ್ಯಂತ 700 ಕ್ಕೂ ಹೆಚ್ಚು ಬಾಣಂತಿಯರ ಸಾವು ಸಂಭವುಸಿದೆ. 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಸಚಿವರು, ಶಾಸಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೆಲ್ಲವೂ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯಾ? ಇವೆಲ್ಲವೂ ಸಂಭ್ರಮ ಪಡುವ ಸಂಗತಿಗಳಾ? ಎಂದು ಪ್ರಶ್ನಿಸಿದ್ದಾರೆ.ವಿದ್ಯುತ್ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆ ಮಾಡಿದ್ದೇ ಇವರ ಸಾಧನೆಯಾ? ಸಾಧನಾ ಸಮಾವೇಶದಲ್ಲಿ ಬೆಲೆ ಏರಿಕೆ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕರದ ಅವಧಿಯಲ್ಲಿ ಕ್ರಿಮಿನಲ್ ಗಳಿಗೆ, ಕಮ್ಯುನಲ್ ಗಳಿಗೆ ರಾಜಾಶ್ರಯ ಸಿಗುತ್ತಿದೆ‌. ಕ್ರಿಮಿನಲ್, ‌ಕಮ್ಯುನಲ್ ಗಳು ಬೀದಿಗೆ ಬಂದಿದ್ದಾರೆ. ಸರ್ಕಾರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸಿದ್ದರಾಮಯ್ಯ ಒನ್ ಸರ್ಕಾರಕ್ಕೂ, ಟು ಸರ್ಕಾರಕ್ಕೂ ಬಹಳ ವ್ಯತ್ಯಾಸವಿದೆ. ಒನ್ ಸರ್ಕಾರದಲ್ಲಿ ಲವಲವಿಕೆ ಇತ್ತು. ಟು ಸರ್ಕಾರದಲ್ಲಿ ಕೊರೊನಾ ಬಂದಂತಿದೆ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಎಷ್ಟು ವರ್ಷ ಅಧಿಕಾರ ನಡೆಸಿದಿರಿ ಎಂಬುದು ಸಾಧನೆಯಲ್ಲ. ಎಷ್ಟು ಅಭಿವೃದ್ಧಿ ಮಾಡಿದ್ದೀರಿ ಎಂಬುದು ಸಾಧನೆ. ಎಷ್ಟು ಶಾಶ್ವತ ಕಾಮಗಾರಿಗಳನ್ನು ಮಾಡಿದ್ದೀರಾ ತೋರಿಸಿ. ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದೇವೆ. ಜನರ ಬಳಿಗೆ ಇದನ್ನು ಕೊಂಡೊಯ್ಯುತ್ತೇವೆ. ಮುಂಬರುವ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ‌. ಪಂಚ ಗ್ಯಾರಂಟಿಗಳು ಪಂಚರ್ ಆಗಿವೆ. ಗೃಹಲಕ್ಷ್ಮಿ ಹಣವನ್ನು ಪ್ರತಿತಿಂಗಳು ಕೊಡ್ತೀವಿ? ಅಂದಿದ್ವಾ ಎಂದು ಹೇಳುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಗ್ರಾಮೀಣ ಭಾಗ ನಿಶಕ್ತಿಯಾಗಿದೆ.ಫ್ರೀ ಬಸ್ ಘೋಷಣೆ ಮಾಡಿದ್ದಾರೆ. ಆದರೆ ಬಸ್ ಗಳೇ ಸಂಚರಿಸುತ್ತಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button