ನಗರಸಭೆ
Trending

ಜನಾಕ್ರೋಶ ಯಾತ್ರೆಗೆ ೧೦ ಸಾವಿರ ಕಾರ್ಯಕರ್ತರು

ರಾಜ್ಯದ ಕಾಂಗ್ರೇಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷವು ಪ್ರಾರಂಬಿಸಿರುವ ಜನಾಕ್ರೋಶ ಯಾತ್ರೆಯು ಇದೇ ದಿ. ೧೭ ರಂದು ವಿಜಯಪುರ ನಗರಕ್ಕೆ ಆಗಮಿಸಲಿದ್ದು ಈ ಜನಾಕ್ರೋಶ ಯಾತ್ರೆಗೆ ಮುದ್ದೇಬಿಹಾಳ ಮತಕ್ಷೇತ್ರದಿಂದ ವ್ಯಾಲೆಂಟರಿಯಾಗಿ ಕನಿಷ್ಠ ೧೦ ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಬಿಜೆಪಿ ರೈತ ಮೂರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹೇಳಿದರು.

ರವಿವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ ಹಾಲಿನ ದರದಿಂದ ಹಿಡಿದು ವಿದ್ಯುತ್ ದರ, ಬಸ್ ದರ, ಅಲ್ಲದೇ ದಿನಬಳಿಕೆಗೆ ಅವಶ್ಯವಾಗಿರುವ ಎಲ್ಲ ದರಗಳನ್ನು ಹೆಚ್ಚಿಗೆ ಮಾಡಲಾಗಿದೆ ೨೦ ರೂ. ಬಾಂಡ ಇಂದು ೧೦೦ ರೂಗೆ ಹೆಚ್ಚಿಸಲಾಗಿದೆ ಜನಸಾಮಾನ್ಯರು ದರ ಏರಿಕೆಯಿಂದ ಕಾಂಗ್ರೇಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕಲಿಕ್ಕೆ ಹತ್ತಿದ್ದಾರೆ ಈ ಹಿಂದೆ ಹಾಲಿನ ದರ ಏರಿಸಿದಾಗ ದರ ಏರಿಕೆ ಅಲ್ಲಾ ರೈತರಿಗೆ ೫ ರೂ. ಪ್ರೋತ್ಸಾಹದನ ಕೊಡುತ್ತೇವೆಂದರು ಇಲ್ಲಿಯವರೆಗೂ ಒಂದು ರೂ.ಯೂ ಕೋಟ್ಟಿಲ್ಲಾ ಕಿಸಾನ ಸಮ್ಮಾನ ಯೋಜನೆಯಡಿ ರೈತರಿಗೆ ಬೀಜ ಗೊಬ್ಬರ ಇನ್ನಿತರಗಳನ್ನು ಸುಗ್ಗಿ ಕಾಲದ ಸಂದರ್ಬದಲ್ಲಿ ಕೊಂಡುಕೊಳ್ಳಲು ಅನುಕೂಲವಾಗಲೆಂದು ಕೇಂದ್ರ ಸರ್ಕಾರದ ನರೇಂದ್ರ ಮೋದಿಜಿ ಅವರು ೬ ಸಾವಿರ ರೂ. ಕೊಡುತ್ತಿದ್ದರು ಆಗ ನಮ್ಮ ಬಿಜೆಪಿ ಸರ್ಕಾರ ರಾಜ್ಯದಲ್ಲಿದ್ದಾಗ ೪ ಸಾವಿರ ರೂ. ಸೇರಿಸಿ ಒಟ್ಟು ೧೦ ಸಾವಿರ ರೂ. ಕೊಡುವಂತಹ ಕಾರ್ಯವನ್ನು ಮಾಡಲಾಗಿತ್ತು ಆದರೆ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯ ಸರ್ಕಾರದಿಂದ ನೀಡುತ್ತಿದ್ದ ೪ ಸಾವಿರ ರೂ. ಸ್ಥಗಿತಗೊಳಿಸಿದ್ದಾರೆಂದು ಆರೋಪಿಸಿದರು.

ವಿದ್ಯಾನಿಧಿ ಯೋಜನೆಯಡಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಫ್ ಯೋಜನೆಯನ್ನು ಜಾರಿಗೆ ತರಲಾಗಿತ್ತು ಇದರಿಂದ ರಾಜ್ಯದ ೫ ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು ಅದನ್ನು ಕೂಡಾ ತೆಗೆದು ಹಾಕಿದ್ದಾರೆ ಒಂದೆಡೆ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿ ಬಸ್‌ದರವನ್ನು ಹೆಚ್ಚಿಸಿದ್ದಾರೆ ಹೆಂಡತಿಗೆ ಉಚಿತ ಬಸ್ ಪ್ರಯಾಣ ನೀಡಿ ಗಂಡನಿಂದ ಕಸಿದುಕೊಳ್ಳುವಂತಹ ಕೆಲಸ ಕಾಂಗ್ರೇಸ್ ಸರ್ಕಾರ ಮಾಡಿದೆ ಸಾರಿಗೆ ಸಂಸ್ಥೆಗೆ ಉಚಿತ ಪ್ರಯಾಣಕ್ಕೆ ಸಂಬಂದಿಸಿ ಸರ್ಕಾರವು ೪೯೦೦ ಕೋಟಿ ರೂ. ಭಾಕಿ ಉಳಿಸಿಕೊಂಡಿದೆ ಸರ್ಕಾರಿ ನೌಕರರಿಗೆ ಸರ್ಕಾರಿ ವೇತನವಾಗುತ್ತಿಲ್ಲಾ ಡಾಕ್ಟರ್‌ಗಳಿಗೆ, ಪೊಲೀಸ್‌ರಿಗೆ ೩ ತಿಂಗಳಿಂದ ವೇತನ ಪಾವತಿಯಾಗಿಲ್ಲಾ ಯುಗಾದಿ ಹಬ್ಬ ಎಲ್ಲರಿಗೂ ಹೊಸ ವರ್ಷವಾದರೆ ಅಂದು ಒಂದೇ ದಿನ ೪೮ ವಸ್ತುಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದರ ಏರಿಕೆಯ ಟ್ಯಾಕ್ಸ್ ಹಾಕಿ ಅಟ್ಟಹಾಸ ಮೇರೆದಿದ್ದಾರೆಂದು ಆರೋಪಿಸಿದರು. ಪ್ರತಿವರ್ಷ ಎಸ್.ಸಿ.ಎಸ್.ಟಿ. ನಿಗಮಗಳಿಗೆ ಮೀಸಲಿದ್ದ ೩೯ ಸಾವಿರ ಕೋಟಿ ರೂ. ಬಿಟ್ಟಿ ಗ್ಯಾರೆಂಟಿಗಳಿಗೆ ಹಾಕಿ ಸಮೂದಾಯಕ್ಕೆ ಅನ್ಯಾಯವನ್ನು ಮಾಡಿದ್ದಾರೆ ಇದರಿಂದ ಕೆಳ ವರ್ಗದ ಜನರು ಮೇಲಕ್ಕೆ ಏಳದಂತಹ ಪರಸ್ಥಿತಿ ನಿರ್ಮಾಣವಾಗಿದೆ ಎಂದ ನಡಹಳ್ಳಿ ಅವರು ಗುತ್ತಿಗೆದಾರರ ಪರಸ್ಥಿತಿ ಅದೋಗತಿಗೆ ಬಂದಿದೆ ಬಿಜೆಪಿ ಸರ್ಕಾರವಿದ್ದಾಗ ೪೦% ಸರ್ಕಾರವೆಂದು ಸುಳ್ಳು ಆರೋಪ ಮಾಡಿ ಈಗ ಶೇ.೬೦ ರಷ್ಟು ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಪಾವತಿಯಾಗುತ್ತಿದೆ ಎಂದ ಅವರು ಬ್ರಷ್ಟಾಚಾರದಲ್ಲಿ ಕರ್ನಾಟಕವು ನಂ. ೧ ಸ್ಥಾನದಲ್ಲಿದೆ ಎಂದು ಕಾಂಗ್ರೇಸ್ ಶಾಸಕರಾದ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ ಶಾಸಕರಿಗೆ ಅನುದಾನ ಸಿಗಲಾರದ್ದಕ್ಕೆ ಶಾಸಕ ರಾಜು ಕಾಗೆ ಅವರು ವಿಧಾನಸೌದದಲ್ಲಿಯೇ ಆತ್ಮಹತ್ಯ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ ಕಾಂಗ್ರೇಸ್ ಸರ್ಕಾರದ ವಿರೂದ್ದ ಅವರದ್ದೇ ಸರ್ಕಾರದ ಶಾಸಕರು ಸರ್ಕಾರದ ಬ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದಾರೆಂದ ಅವರು ಇಂತಹ ಬ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೇಸ್ ಸರ್ಕಾರವನ್ನು ಕಿತ್ತೋಗೆಯುವ ಸಂಕಲ್ಪದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆಯನ್ನು ಪ್ರಾರಂಬಿಸಿದೆ ಇದೇ ದಿ.೧೭ ರಂದು ವಿಜಯಪುರ ನಗರಕ್ಕೆ ಆಗಮಿಸಲಿದ್ದು ಪ್ರತಿ ಭೂತ ಮಟ್ಟದಲ್ಲಿ ಕೆಲಸ ಮಾಡುವ ಪ್ರತಿ ಬೂತ ಕಾರ್ಯಕರ್ತರು ೫ ಜನರಂತೆ ಕರೆದುಕೊಂಡು ಬರಲಿದ್ದಾರೆ ಮುದ್ದೇಬಿಹಾಳ ಮತಕ್ಷೇತ್ರದಿಂದ ಒಟ್ಟು ೧೦ ಸಾವಿರ ಕಾರ್ಯಕರ್ತರು ಭಾಗಹಿಸಲಿದ್ದಾರೆ ಇದು ಅಲ್ಲದೇ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿಯೂ ಕೂಡಾ ಸಾಕಷ್ಟು ನಡಹಳ್ಳಿ ಅಭಿಮಾನಿಗಳು ಇರುವದರಿಂದ ಅಲ್ಲಿಯ ಮಾಜಿ ಶಾಸಕ ಸೋಮನಗೌಡರ ಜೊತೆಗೆ ಕೈ ಜೋಡಿಸಿ ಅಲ್ಲಿಂದಲೂ ಕೂಡಾ ಹೆಚ್ಚಿನ ಕಾರ್ಯಕರ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದರು.

ಈ ಸಮಯದಲ್ಲಿ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು ಪಕ್ಷದ ಪದಾಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button