ನಗರಸಭೆ
Trending

ಅಂಬೇಡ್ಕರ್‌ರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳೇಕಿದೆ

ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಪ್ರಬಾವಶಾಲಿಯಾಗಿವೆ ಸಮಾಜದ ಸರ್ವತೋನ್ಮುಖ ಅಭಿವೃದ್ದಿಯ ಬಗ್ಗೆ ಅವರಿಗಿದ್ದ ದೇಷ್ಠಿಕೋನ ಸರ್ವಕಾಲಿಕವಾದುದ್ದು ಮತ್ತು ಜಾಗತಿಕ ಮಟ್ಟದಲ್ಲಿ ಅನ್ವಯವಾಗುವಂತವುಗಳಾಗಿವೆ ಎಂದು ಕೂಡಗಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಪ್ರೋ ಬಸವರಾಜ ಜಾಲವಾದಿ ಅವರು ಹೇಳಿದರು.

ಸೋಮವಾರರಂದು ತಾಲೂಕಾಡಳಿತ ತಾಲೂಕಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿದಾನ ಶಿಲ್ಪಿ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೪ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಸಮಾಜದ ಎಲ್ಲ ವರ್ಗದ ಜನರೂ ಸಮಾನ ಹಕ್ಕು ಮತ್ತು ಅವಕಾಶವನ್ನು ಹೊಂದಬೇಕು ಹಾಗೂ ಅನುಭವಿಸಬೇಕು ಎಂಬ ವಿಚಾರಧಾರೆಯನ್ನು ಹೊಂದಿದ್ದ ಅವರು ಅದನ್ನು ಸಂವಿದಾನದಲ್ಲಿ ಅಳವಡಿಸುವ ಮೂಲಕ ಯಶಸ್ವಿಯಾದ ಅಂಬೇಡ್ಕರ್ ಅವರು ಆರ್ಥಿಕ, ಸಾಮಾಜಿಕ, ಹಾಗೂ ರಾಜಕೀಯ ವಿಚಾರಗಳಿಗೆ ಸಂಬಂದಿಸಿ ಕ್ರಾಂತಿಕಾರಿ ಮನೋಭಾವನೆಯನ್ನು ಹೊಂದಿದ್ದರು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ ಮಾರಾಟವಾದರೆ ಇಡೀ ದೇಶವೇ ಮಾರಾಟವಾದಂತೆ ಎಂಬ ಸಂದೇಶವನ್ನು ಸಾರಿದ ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆಗೆ ಮುಖ್ಯವಾಗಿ ಬೇಕಾಗಿರುವದು ಶಿಕ್ಷಣವೆಂಬುದಾಗಿದೆ ಅದರ ಜೊತೆಗೆ ಎಲ್ಲರೂ ಒಗ್ಗೂಡುವಿಕೆಯ ಸಂಘಟನೆ ಎಂಬುದು ಬೇಕು ಇದರಿಂದ ಸಮಾನವಾದ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟದ ಮನೋಭಾವನೆಯ ಕಿಚ್ಚು ತಾನಾಗಿಯೇ ಬರುತ್ತದೆ ಅದಕ್ಕಾಗಿ ಮೊದಲು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಮನುಷ್ಯ ಹುಟ್ಟಿದಾಗ ಯಾವ ಜಾತಿಯೂ ಇರುವದಿಲ್ಲಾ ನಂತರ ಬರುವ ಜಾತಿಯ ವಿಷ ಬೀಜವು ಆತನನ್ನು ತುಳಿಯಲು ಪ್ರಾರಂಬಿಸುತ್ತದೆ ಅದನ್ನು ಮೆಟ್ಟಿ ನಿಲ್ಲಲು ಮತ್ತು ದೇಶದ ಪ್ರಗತಿಗೆ ಶಿಕ್ಷಣವೇ ಅಸ್ತ್ರವಾಗಿದೆ ಎಂಬುದನ್ನು ಒತ್ತಿ ಹೇಳಿದ ಅವರು ಅಂಬೇಡ್ಕರ್ ಅವರು ನೀಡಿದ ಸಂವಿದಾನ ಅಡಿಯಲ್ಲಿ ರಾಜಕೀಯದಲ್ಲಿ ಸಮಾನತೆಯನ್ನು ಕಾಣುತ್ತಿದ್ದೇವೆ ಆದರೆ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಮಾನತೆ ಎಂಬುದು ಕಾಣುತ್ತಿಲ್ಲಾವೆಂದ ವಿಷಾದ ವ್ಯಕ್ತ ಪಡಿಸಿದ ಅವರು ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ನಾವು ಮೊದಲು ಪ್ರಶ್ನೇ ಮಾಡುವದನ್ನು ಕಲಿಯಬೇಕು ಅದಕ್ಕೆ ಮೊದಲು ಶಿಕ್ಷಣದ ಜೊತೆಗೆ ಇತಿಹಾಸವನ್ನು ಓದುವದನ್ನು ಕಲಿಯಬೇಕು ಇತಿಹಾಸ ಓದದವರು ಇತಿಹಾಸವನ್ನು ಸೃಷ್ಠಿಸಲು ಸಾದ್ಯವಿಲ್ಲಾ ಅಂಬೇಡ್ಕರ್ ಅವರು ಸಮಾಜಮುಖಿ ಬಧುಕನ್ನು ಅಳವಡಿಸಿಕೊಂಡಿದ್ದರು. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಪ್ರೇರೆಪಿಸುವಂತಹ ಕಾರ್ಯವಾಗಬೇಕಿದೆ ಶಿಕ್ಷಣದಿಂದ ಬೀದಿಯಲ್ಲಿರುವ ಮಕ್ಕಳು ಮುಂದೊಂದು ದಿನ ಗದ್ದುಗೆ ಏರಲಿದ್ದಾರೆ ಕಾರಣ ಎಲ್ಲರೂ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕೆಂದರು.

ತಾಲೂಕಾ ತಹಶಿಲ್ದಾರ ಶ್ರೀಮತಿ ಡಾ.ವಿನಯಾ ಹೂಗಾರ ಅವರು ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಶಿಕ್ಷಣದಿಂದ ಸಮಾನತೆಯನ್ನು ಕಾಣುತ್ತಿದ್ದೇವೆ ಸಂವಿದಾನದ ಮೂಲಕ ಇಂದು ನಾವುಗಳು ಎಲ್ಲ ಹಕ್ಕುಗಳನ್ನು ಪಡೆದುಕೊಳ್ಳುತ್ತಾ ಸಾಗಿದ್ದೇವೆ ಪುರುಷನಷ್ಠೆ ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಿದರೆ ವಿಶ್ವದಲ್ಲಿಯೇ ಭಾರತ ದೇಶ ಪ್ರಜ್ವಲಿಸಲಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲಿಗೆ ಬೆಳಿಗ್ಗೆ ೯ ಗಂಟೆಗೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ವೃತ್ತದಲ್ಲಿರುವ ಅಂಬೇಡ್ಕರ್ ಅವರ ಮೂರ್ತಿಗೆ ತಾಲೂಕಾಡಳಿತದ ವತಿಯಿಂದ ಹಾಗೂ ಸಮಾಜ ಬಾಂದವರು ಪುಷ್ಪ ನಮನ ಸಲ್ಲಿಸಿ ಅಂಬೇಡ್ಕರ್ ಅವರ ಭಾವಚಿತ್ರದ ಮೇರವಣಿಗೆಗೆ ಚಾಲನೆ ನೀಡಲಾಯಿತು.ಮೇರವಣಿಗೆಯ ಶ್ರೀ ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಭಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾಪ್ರತಾಪಸಿಂಹ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್ ಮೂಲಕ ಮರಳಿ ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಲಾದ ಸಮಾರಂಭದ ವೇದಿಕೆ ತಲುಪಿತು.

ವೇದಿಕೆಯ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಅಧಿಕ್ಷಕ ಶಿವಲಿಂಗ ಹಚಡದ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ತಾಲೂಕಾ ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಜಾತಾ ಯಡ್ರಾಮಿ, ಪಿಎಸ್‌ಐ ಆರ್.ಎಸ್.ಭಂಗಿ, ಪುರಸಭೆ ಅಧ್ಯಕ್ಷೆ ಶ್ರೀಮತಿ ಜುಬೇದಾ ಜಮಾದಾರ, ಹಾಗೂ ಮೇರವಣಿಗೆಯ ಸಮಯದಲ್ಲಿ ಸಮಾಜದ ಮುಖಂಡರುಗಳಾದ ಎಸ್.ಬಿ.ಕಟ್ಟಿಮನಿ, ಮುತ್ತಪ್ಪಣ್ಣ ಚಮಲಾಪೂರ, ಬಸವರಾಜ ಕಟ್ಟಿಮನಿ, ಶಾಂತಪ್ಪ ಚಲವಾದಿ, ಪರಶುರಾಮ ಕಟ್ಟಿಮನಿ, ದೇವೇಂದ್ರ ಹಾದಿಮನಿ, ಶಿವಶಂಕರ ಕಟ್ಟಿಮನಿ, ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ, ಬಸವರಾಜ ತಳವಾರ, ಗೋಪಾಲ ಕಟ್ಟಿಮನಿ, ಮಹಾಂತೇಶ ಕಟ್ಟಿಮನಿ, ಶೇಖರ ರಕ್ಕಸಗಿ, ಕಾರ್ತಿಕ ಕಟ್ಟಿಮನಿ, ಬಸವರಾಜ ತಾಳಿಕೋಟಿ, ಬಸವರಾಜ ಬೀಸನಾಳ, ಸಿದ್ದಪ್ಪ ಬಸರಿಕಟ್ಟಿ, ಅಶೋಕ ಪಡೇಕನೂರ, ಸಿದ್ದಪ್ಪ ಕೊಣ್ಣೂರ, ನಾಗೇಶ ಚಲವಾದಿ, ಕಾಶಿನಾಥ ಕಾರಗನೂರ, ಕಾಶಿನಾಥ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಎಸ್.ಎನ್.ಮಲ್ಲಾಡೆ, ಎನ್.ವ್ಹಿ.ಕೋರಿ, ಎಸ್.ಎಂ.ಕಲ್ಬುರ್ಗಿ, ಎನ್.ಸಿ.ಗುಡಗುಂಟಿ, ಅನ್ನಪೂರ್ಣಾ ಪಾಟೀಲ, ವಿಶ್ವನಾಥ ಮಳಗಿ, ಮಂಜುನಾಥ ನರಸಾಣಗಿ, ನವೀನ್ ಇಜೇರಿ, ರಾಮನಗೌಡ ಭಂಟನೂರ, ಶ್ರೀನಿವಾಸ ಅಂಗಡಿ, ಸಲ್ಮಾಬೇಗಂ ಡೋಣಿ, ಬಾಬುಗೌಡ ಬಿರಾದಾರ, ಸೋಮರಡ್ಡಿ ಬಿರಾದಾರ, ಹಣಮಂತ್ರಾಯ ಬದವಾಡಗಿ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button