
ಗೋವಿಂದರಾಜನಗರ ಬಿಜೆಪಿ ಕಛೇರಿಯಲ್ಲಿ ಬೆಂಗಳೂರು ದಕ್ಷ್ಮಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಹುಟ್ಟುಹಬ್ಬದ ಅಚರಣೆಯನ್ನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅರ್ಥಪೂರ್ಣವಾಗಿ ಅಚರಣೆ ಮಾಡಿದರು.ಉಚಿತ ನೇತ್ರಾ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ವಿಕಲಚೇತನರಿಗೆ ವೀಲ್ ಚೇರ್,ಕ್ಯಾನ್ಸರ್ ಪೀಡಿತ ಮಹಿಳೆ ಆರ್ಥಿಕ ಸಹಾಯ ಹಾಗೂ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯರಾದ ತೇಜಸ್ವಿಸೂರ್ಯರವರು, ಶಾಸಕರಾದ ಸಿ.ಕೆ.ರಾಮಮೂರ್ತಿರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ ರವರು ಜಿಲ್ಲಾಧ್ಯಕ್ಷರುಗಳಾದ ಎಸ್.ಹರೀಶ್, ಸಪ್ತಗಿರಿಗೌಡರವರು ವಿತರಿಸಿ ಚಾಲನೆ ನೀಡಿದರು.
ತೇಜಸ್ವಿಸೂರ್ಯರವರು ಮಾತನಾಡಿ ಕೆ.ಉಮೇಶ್ ಶೆಟ್ಟಿರವರು ಜನಾನುರಾಗಿ, ಸ್ನೇಹಪರ, ಬಡವರ ಪರ ಕೆಲಸ ಮಾಡುವ ವ್ಯಕ್ತಿತ್ವ.ಪಕ್ಷದ ಕೆಲಸ ಮಾಡುವ ನಿಷ್ಟಾವಂತ ಕಾರ್ಯಕರ್ತ. ಸದಸ್ಯತ್ವ ಅಭಿಯಾನ, ಸಂಘಟನೆಯಲ್ಲಿ ಚುರುಕಿನಿಂದ ಕೆಲಸ ಮಾಡಿದ್ದಾರೆ.ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅತ್ಯಂತ ಯಶ್ವಸಿಯಾಗಿ ಸಂಘಟನೆ ಮಾಡಿದ್ದಾರೆ ಎಂದು ಹೇಳಿದರು.
ಶಾಸಕರಾದ ಸಿ.ಕೆ.ರಾಮಮೂರ್ತಿ ರವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಸೋಲುಂಟಾಯಿತು. ಮುಂಬರುವ ಬಿಬಿಎಂಪಿ ಚುನಾವಣೆ, ವಿಧಾನಸಭೆಯಲ್ಲಿ ಬಿಜೆಪಿ ಪಕ್ಷ ಗೆಲುವಿನ ಜಯಭೇರಿ ಬಾರಿಸಲಿದೆ. ಉತ್ತಮ ಸಂಘಟಕ, ಹೋಾರಾಟಗಾರ ಕೆ.ಉಮೇಶ್ ಶೆಟ್ಟಿ ರವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ಇಂದು ಕಾರ್ಯಕರ್ತರ ದಿನ ಅವರ ಸಂತೋಷದಲ್ಲಿ ನಾನು ಭಾಗಿಯಾಗಿದ್ದೇನೆ.
ಶಾಲೆಯ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಯಲ್ಲಿ ಒಡನಾಟದಿಂದ ಶಿಸ್ತು, ದೇಶಭಿಮಾನ ಕಲಿತೆ ನಂತರ ಬಿಜೆಪಿ ಪಕ್ಷದಲ್ಲಿ ಕಳೆದ 20ವರ್ಷಗಳಿಂದ ಕಾರ್ಯಕರ್ತನಾಗಿ ಪ್ರಧಾನಿ ನರೇಂದ್ರಮೋದಿರವರು ಹೇಳಿದಂತೆ ಜನ ಸೇವಕನಂತೆ ಕೆಲಸ ಮಾಡುತ್ತಿದ್ದೇನೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು, ಕೇಂದ್ರ ಸಚಿವರಾದ ವಿ.ಸೋಮಣ್ಣರವರು, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಲೋಕಸಭಾ ಸದಸ್ಯರಾದ ಆರ್.ಅಶೋಕ್ ರವರ ನೇತೃತ್ವದಲ್ಲಿ 50ಸಾವಿರಕ್ಕೂ ಹೆಚ್ಚು ಜನರನ್ನು ಬಿಜೆಪಿ ಸದಸ್ಯರಾಗಿ ಸದಸ್ಯತ್ವ ನೋಂದಾಣೆ ಮಾಡಲಾಗಿದೆ.
ಜನರ ಪ್ರೀತಿ, ವಿಶ್ವಾಸ ಸದಾ ಹೀಗೆ ಇರಲಿ, ಅವರ ಸೇವೆ ಮಾಡುವ ಸೌಭಾಗ್ಯ ನನಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.