ಇತ್ತೀಚಿನ ಸುದ್ದಿ
Trending

ಸಿಂಧು ನದಿ ಒಪ್ಪಂದ ರದ್ದುಗೊಂಡರೆ ರಕ್ತಪಾತ

ಚೋಲಿಸ್ತಾನ್ ಕಾಲುವೆ ಯೋಜನೆಇಸ್ಲಾಮಾಬಾದ್:‌ ಪಹಲ್ಗಾಮ್‌ ಭಯೋತ್ಪಾದಕ ದಾಳಿ ನಂತರ ಭಾರತವು ಪಾಕಿಸ್ತಾನದೊಂದಿಗಿನ ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿದೆ. ಭಾರತದ ಈ ನಿರ್ಧಾರವನ್ನು ಖಂಡಿಸಿರುವ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ “ಭಾರತ ಒಂದು ವೇಳೆ ಸಿಂಧು ನದಿ ಒಪ್ಪಂದವನ್ನು ರದ್ದುಗೊಳಿಸಿದರೆ, ರಕ್ತ ಹರಿಯುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.ಸಿಂಧು ನದಿ ದಡದಲ್ಲಿ ನಿಂತು ಮಾತನಾಡಿದ ಬಿಲಾವಲ್‌ ಭುಟ್ಟೋ, “ಸಿಂಧು ನದಿ ಒಪ್ಪಂದ ರದ್ದುಗೊಳಿಸುವ ಮೂಲಕ ಭಾರತ ಅನವಶ್ಯಕ ಅಪಾಯವನ್ನು ಮೈಮೇಲೆ ಎಳೆದುಕೊಂಡಿದೆ. ಈ ಒಪ್ಪಂದ ರದ್ದುಗೊಂಡರೆ ಈ ಭಾಗದಲ್ಲಿ ರಕ್ತ ಹರಿಯುತ್ತದೆ. ಭಾರತದ ಈ ನಿರ್ಧಾರ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಿಸಿದೆ” ಎಂದು ಹರಿಹಾಯ್ದಿದ್ದಾರೆ.

“ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸುವ ಭಾರತದ ನಿರ್ಧಾರವು ಕಾನೂನುಬಾಹಿರ ಮತ್ತು ಅಮಾನವೀಯವಾಗಿದೆ.

ನಾವು ಪಾಕಿಸ್ತಾನದ ಹಿತಾಸಕ್ತಿಯ ವಿಷಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುತ್ತೇವೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ” ಎಂದು ಬಿಲಾವಲ್‌ ಭುಟ್ಟೋ ಗುಡುಗಿದ್ದಾರೆ.

ಪಾಕಿಸ್ತಾನದ ಸುಕ್ಕುರ್‌ನಲ್ಲಿ ಮಾತನಾಡಿದ ಬಿಲಾವಲ್ ಭುಟ್ಟೋ ಜರ್ದಾರಿ, “ಭಾರತವು ಪಹಲ್ಗಾಮ್ ಘಟನೆಗೆ ಪಾಕಿಸ್ತಾನವನ್ನು ಹೊಣೆಗಾರನನ್ನಾಗಿ ಮಾಡಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ದೌರ್ಬಲ್ಯಗಳನ್ನು ಮರೆಮಾಚಲು ಮತ್ತು ತಮ್ಮ ಜನರನ್ನು ಮೂರ್ಖರನ್ನಾಗಿಸಲು ಪಾಕಿಸ್ತಾನದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.ಮುಂದುವರೆದು ಸಿಂಧು” ನದಿಯು ಪಾಕಿಸ್ತಾನಕ್ಕೆ ಸೇರಿದ್ದು ಎಂದು ಭಾರತ ಈ ಹಿಂದೆಯೇ ಒಪ್ಪಿಕೊಂಡಿತ್ತು. ಆದರೆ ಈಗ ಏಕಪಕ್ಷೀಯವಾಗಿ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ. ನಾನು ಸುಕ್ಕುರ್‌ನಲ್ಲಿ ನಿಂತು ಭಾರತಕ್ಕೆ ಹೇಳಲು ಬಯಸುತ್ತೇನೆ, ಸಿಂಧು ನಮ್ಮದು ಮತ್ತು ನಮ್ಮದಾಗಿಯೇ ಇರುತ್ತದೆ. ಈ ಸಿಂಧು ನದಿಯಲ್ಲಿ ಒಂದೋ ನೀರು ಹರಿಯುತ್ತದೆ, ಇಲ್ಲದಿದ್ದರೆ ಅವರ ರಕ್ತ ಹರಿಯುತ್ತದೆ” ಎಂದು ಬಿಲಾವಲ್‌ ಭುಟ್ಟೋ ವಿವಿದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿಂಧು ನದಿ ನೀರು ಹಂಚಿಕೆ ಒಪ್ಪಂದ ಅಮಾನತುಗೊಳಿಸಿರುವ ಕುರಿತು, ಭಾರತದ ಜಲ ಶಕ್ತಿ ಸಚಿವಾಲಯವು ಪಾಕಿಸ್ತಾನದ ಜಲ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದೆ. ಒಪ್ಪಂದದ XII(3) ವಿಧಿಯನ್ನು ಉಲ್ಲೇಖಿಸಿ, ಜನಸಂಖ್ಯಾ ಬದಲಾವಣೆ, ಶುದ್ಧ ಇಂಧನದ ಅಗತ್ಯತೆ ಮತ್ತು ಪಾಕಿಸ್ತಾನದ ಭಯೋತ್ಪಾದನಾ ಬೆಂಬಲವನ್ನು ವಿರೋಧಿಸಿ, “ಈಗಿನ ಪರಿಸ್ಥಿತಿಯಲ್ಲಿ ಒಪ್ಪಂದವನ್ನು ಸದ್ಭಾವನೆಯಿಂದ ಅನುಷ್ಠಾನ ಮಾಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.ಭಾರತವು ಸಿಂಧು ನದಿ ಒಪ್ಪಂದವನ್ನು ಅಮಾನತುಗೊಳಿಸಿರುವದು ಪಾಕಿಸ್ತಾನದ ರಾಜಕಾರಣದಲ್ಲಿ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಪಾಕಿಸ್ತಾನ ಸೇನೆ ಮತ್ತು ಪಂಜಾಬ್ ಸರ್ಕಾರವು ಪ್ರಾರಂಭಿಸಿದ ಚೋಲಿಸ್ತಾನ್ ಕಾಲುವೆ ಯೋಜನೆಯನ್ನು, ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ (ಪಿಪಿಪಿ) ವಿರೋಧಿಸಿದೆ.

ಚೋಲಿಸ್ತಾನ್ ಕಾಲುವೆ ಯೋಜನೆ ವಿರೋಧಿಸಿ, ಸಿಂಧ್‌ ಪ್ರಾಂತ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಪ್ರಧಾನಿ ಶೆಹಬಾಜ್ ಷರೀಫ್ ಅವರು ಬಿಲಾವಲ್ ಭುಟ್ಟೋ ಅವರನ್ನು ಭೇಟಿ ಮಾಡಿ, ಒಮ್ಮತವಿಲ್ಲದೆ ಯಾವುದೇ ಕಾಲುವೆಗಳನ್ನು ನಿರ್ಮಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button