
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಮಾರುತಿಮಂದಿರ ವಾರ್ಡ್ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಗೋವಿಂದರಾಜನಗರ ಮಂಡಲ ಬಿಜೆಪಿ ಮಹಿಳಾ ಘಟಕ ವತಿಯಿಂದ, ಸಂಸ್ಕಾರ ಫೌಂಡೇಷನ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪೌರ ಕಾರ್ಮಿಕ, ಆಶಾ ಕಾರ್ಯಕರ್ತರಿಗೆ ಹಾಗೂ ಸಾಧಕ ಮಹಿಳೆಯರಿಗೆ ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಮಹಿಳೆಯರಿಗೆ ಬಾಗಿನ ವಿತರಣೆ ಕಾರ್ಯಕ್ರಮ.
ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು, ಮಂಡಲದ ಅಧ್ಯಕ್ಷರಾದ ಎನ್.ಬಿ.ಮಂಜುನಾಥ್ ರವರು, ಮಾಜಿ ಪಾಲಿಕೆ ಸದಸ್ಯ ರಾಮಪ್ಪ, ಬಿಜೆಪಿ ಮುಖಂಡರುಗಳಾದ ನಂಜಪ್ಪ, ಡೊಡ್ಡಯ್ಯ ರಮ್ಯ ಸುರೇಶ್, ಶಾಮಣ್ಣ , ವೆಂಕಟೇಶ್, ಶ್ರೀಮತಿ ದೀಪಿಕಾ ಉಮೇಶ್ ಶೆಟ್ಟಿ, ಪ್ರೀತಿ ಹನಗುಂದ, ಪಣಿವೇಣಿ ಸೀತರಾಮ್, ಚಲನಚಿತ್ರ ರಂಗದ ಖ್ಯಾತ ನಟಿಯರುಗಳಾದ ನಿಶಿತಾ ಗೌಡ, ಅಕ್ಷತಾಗೌಡ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಭಾರತಾಮಾತೆ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾನಯಿತು.
ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ಭಾರತದ ಭವಿಷ್ಯದ ರೂವಾರಿಗಳು ಎಂದರೆ ಮಹಿಳೆಯರು. ತಾಯಿ, ಅಕ್ಕ, ತಂಗಿ ಪತ್ನಿ, ಮಗಳು ಎಲ್ಲ ಸ್ಥಾನಗಳನ್ನು ತುಂಬಿ ನಮ್ಮ ಅಭಿವೃದ್ದಿಗೆ ಶ್ರಮಿಸುವ ಮಹಿಳೆಯರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ, ಕುಟುಂಬದ ಜೊತೆಗೆ ಸಮಾಜದ ಅಭಿವೃದ್ದಿಗೆ ಶ್ರಮಿಸುವಳು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಘಟಕ ಸಶಕ್ತ ಸಂಘಟನೆ ಇದೆ. ನಮ್ಮ ಕ್ಷೇತ್ರದ ಮಹಿಳಾ ಕಾರ್ಯಕರ್ತರಿಗೆ ಗೌರವಿಸುವ ದಿನವಾಗಿದೆ.
ಕಾಲ ಬದಲಾಗಿದೆ ಪುರುಷರಷ್ಟೆ ಮಹಿಳೆಯರಿಗೆ ಸರಿಸಮಾನ ಹಕ್ಕು ಇದೆ. ಕಿತ್ತೂರು ರಾಣಿ ಚನ್ನಮ್ಮ ರವರಿಂದ ಇಂದಿನ ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು, ದೆಹಲಿ ಮುಖ್ಯಮಂತ್ರಿ ಸಹ ಮಹಿಳೆಯಾಗಿ ಸಾಧನೆ ಮಾಡಿ ತೋರಿಸಿದ್ದಾರೆ.
ಕಲೆ, ಸಾಹಿತ್ಯ ಚಲನಚಿತ್ರ, ರಂಗಭೂಮಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪ್ರತಿನಿಧಿಸುತ್ತಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಶೇಕಡ 50ರಷ್ಟು ಮೀಸಲಾತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೀಡಲಾಗಿದೆ.
ರಾಜ್ಯದ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು ಮಹಿಳೆಯರಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು ಇದರಿಂದ ಹೆಣ್ಣು ಮಕ್ಕಳ ಭ್ರೂಣಹತ್ಯೆ ಮಾಡುವುದು ನಿಂತಿತು.
ಹೆಣ್ಣು ಮಕ್ಕಳು ಭೂತಾಯಿ, ಗೃಹಲಕ್ಷ್ಮಿ, ಸಂತಾನಲಕ್ಷ್ಮಿ, ಭಾಗ್ಯಲಕ್ಷ್ಮಿಯಾಗಿ ಇಡಿ ಕುಟುಂಬಕ್ಕೆ ಆಸರೆಯಾಗುವಳು.
ಒಂದು ದೇಶದ ಪ್ರಗತಿಯನ್ನು ಕಾಣಬೇಕಾದರೆ ಮಹಿಳೆಯರನ್ನ ಗೌರವಯುತವಾಗಿ ನೋಡಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು ಈ ನಿಟ್ಟಿನಲ್ಲಿ ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿ ರವರ ಆಡಳಿತದಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದರು. ಮಗಳು ಉಳಿಸಿ, ಮಗಳಿಗೆ ವಿದ್ಯಾಭ್ಯಾಸ ಕೊಡಿ ವಿಶೇಷ ಅಭಿಯಾನದಿಂದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಸ್ವಾಭಿಮಾನಿಯಾಗಿ ಬದುಕಲು ಸಹಕಾರಿಯಾಯಿತು.
ನಟಿ ನಿಶಿತಾ ಗೌಡ ರವರು ಮಾತನಾಡಿ ಮಹಿಳೆಯಂದರೆ ಶಕ್ತಿ ಸ್ವರೂಪಿಣಿ, ನಮ್ಮ ಶಕ್ತಿ ಏನು ಎಂಬುದು ಸಮಾಜಕ್ಕೆ ತೋರಿಸಬೇಕು. ಹೆಣ್ಣು ಮಕ್ಕಳಿಗೆ ಮನಸ್ಸಿನ ಒಳಗಡೆ ಅದ್ಬುತ ಶಕ್ತಿ ಹೊಂದಿರುತ್ತಾಳೆ.
ಜನ್ಮ ಕೊಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರ ಇರುವುದು.ಒಂದು ಜೀವದಿಂದ ಇನ್ನೂಂದು ಜೀವ ಕೊಡುವವಳು ಮಹಿಳೆ.
ಸರ್ವಶೇಷ್ಠ ಮಕ್ಕಳಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ಡೊಡ್ಡದು. ಮಕ್ಕಳಿಗೆ ಭಗವದ್ಲೀತೆ, ರಾಮಾಯಣ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ರಮ್ಯ ಸುರೇಶ್ ರವರು ಮಾತನಾಡಿ ಮಹಿಳೆ ಮಾತೃರೂಪ, ಮಹಿಳೆ ಎಂದರೆ ಹೆಮ್ಮೆಪಡಬೇಕು.
ಮಹಿಳೆಯ ,ಶಕ್ತಿ, ಯುಕ್ತಿ, ಭಕ್ತಿಯ ಸಂಕೇತವಾಗಿದೆ.
ಪ್ರತಿಯೊಬ್ಬ ಮನುಷ್ಯನ ಯಶ್ವಸಿಯ ಹಿಂದೆ ಮಹಿಳೆ ಇರುತ್ತಾಳೆ. ತಾಯಿಗಿಂತ ದೇವರಿಲ್ಲ ,ಎಲ್ಲಕ್ಕೂ ಬದಲಿ ವ್ಯಕ್ತಿ, ವಸ್ತು ಸಿಗಬಹುದು ಅದರೆ ತಾಯಿ ಸಿಗುವುದಿಲ್ಲ.
ದೇಶಭಕ್ತಿ ಮತ್ತು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ತಾಯಿ ಮೊದಲ ಪಾಠಶಾಲೆಯಾಗಿ ಹೇಳಿ ಕೊಡುವಳು ಎಂದು ಹೇಳಿದರು.
ಅಥಿತಿ ನಾರಾಯಣ್ ರವರಿಂದ ಭಕ್ತಿಗೀತೆಗಳು ದೀಕ್ಷಾ ರವರಿಂದ ಭರತನಾಟ್ಯ ಮತ್ತು ಪೌರ ಕಾರ್ಮಿಕರ ಮಹಿಳೆಯರು, ಆಶಾ ಕಾರ್ಯಕರ್ತೆಯರಿಗೆ, ಸಾಧಕ ಮಹಿಳೆಯರಿಗೆ ಮಹಿಳಾ ರತ್ನ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ ನೇರವೆರಿತು.