ಇತ್ತೀಚಿನ ಸುದ್ದಿ
Trending

8ನೇ ವೇತನ ಆಯೋಗ ಜಾರಿಯಾದರೆ ಕೇಂದ್ರ ನೌಕರರ ಸಂಬಳ ಎಷ್ಟು ಹೆಚ್ಚಾಗುತ್ತೆ?

ಹೊಸದಿಲ್ಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ, 8ನೇ ವೇತನ ಆಯೋಗ ಮಾಡಿರುವ ಶಿಫಾಸ್ಸಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ವರ್ಷದಿಂದಲೇ ಪರಿಷ್ಕೃತ ವೇತನ ಮತ್ತು ಪಿಂಚಣಿ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ.ಈ ಮಧ್ಯೆ 8ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಪ್ರಮಾಣದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ನೌಕರರ ವೇತನದಲ್ಲಿ ಗಣನೀಯ ಏರಿಕೆ ಕಂಡುಬರಲಿದ ಎಂಬ ಮಾತುಗಳಳು ಕೇಳಿಬರುತ್ತಿವೆ.ಈ ಕುರಿತು ಮಾಹತಿ ನೀಡಿರುವ ಗೋಲ್ಡ್‌ಮನ್‌ ಸ್ಯಾಕ್ಸ್‌, “8ನೇ ವೇತನ ಆಯೋಗದ ಶಿಫಾರಸ್ಸುಗಳು ಜಾರಿಗೆ ಬಂದರೆ, ಕೇಂದ್ರ ಸರ್ಕಾರಿ ತಿಂಗಳಿಗೆ 19,000 ರೂಪಾಯಿಗಳವರೆಗೆ ಸಂಬಳ ಹೆಚ್ಚಾಗಬಹುದು..” ಎಂದು ಹೇಳಿದೆ. ಅಲ್ಲದೇ “8ನೇ ವೇತನ ಆಯೋಗ ಜಾರಿಯಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ..” ಎಂದೂ ಗೋಲ್ಡ್‌ಮನ್‌ ಸ್ಯಾಕ್ಸ್‌ ತಿಳಿಸಿದೆ.ಪ್ರಸ್ತುತ, ಮಧ್ಯಮ ಮಟ್ಟದ ಸರ್ಕಾರಿ ನೌಕರರ ವೇತನವು ತಿಂಗಳಿಗೆ ಸರಾಸರಿ 1 ಲಕ್ಷ ರೂ. (ತೆರಿಗೆ ಪೂರ್ವ) ಇದೆ. ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಮೀಸಲಿಡುವ ಹಣದ ಆಧಾರದ ಮೇಲೆ, ಕೇಂದ್ರ ಸರ್ಕಾರಿ ನೌಕರರ ಸಂಬಳ ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬುದನ್ನು ಗೋಲ್ಡ್‌ಮನ್‌ ಸ್ಯಾಕ್ಸ್‌ ಅಂದಾಜಿಸಿದೆ. ಇದರ ಪ್ರಕಾರ

ಬಜೆಟ್‌ನಲ್ಲಿ 1.75 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಮಧ್ಯಮ ಮಟ್ಟದ ಕೇಂದ್ರ ಸರ್ಕಾರಿ ನೌಕರರ ಸಂಬಳ ತಿಂಗಳಿಗೆ 1,14,600 ರೂ.ಗೆ ಏರಿಕೆಯಾಗಬಹುದು. ಅದೇ ರೀತಿ 2 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಸಂಬಳವು ತಿಂಗಳಿಗೆ 1,16,700 ರೂ.ಗೆ ಹೆಚ್ಚಾಗಬಹುದು. ಇನ್ನು ಬಜೆಟ್‌ನಲ್ಲಿ 2.25 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಕೇಂದ್ರ ನೌಕರರ ಸಂಬಳವು ತಿಂಗಳಿಗೆ 1,18,800 ರೂ. ಹೆಚ್ಚಾಗಬಹುದು..” ಎಂದು ಗೋಲ್ಡ್‌ಮನ್‌ ಸ್ಯಾಕ್ಸ್‌ ತಿಳಿಸಿದೆ.ಬಜೆಟ್‌ನಲ್ಲಿ 1.75 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಮಧ್ಯಮ ಮಟ್ಟದ ಕೇಂದ್ರ ಸರ್ಕಾರಿ ನೌಕರರ ಸಂಬಳ ತಿಂಗಳಿಗೆ 1,14,600 ರೂ.ಗೆ ಏರಿಕೆಯಾಗಬಹುದು. ಅದೇ ರೀತಿ 2 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಸಂಬಳವು ತಿಂಗಳಿಗೆ 1,16,700 ರೂ.ಗೆ ಹೆಚ್ಚಾಗಬಹುದು. ಇನ್ನು ಬಜೆಟ್‌ನಲ್ಲಿ 2.25 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಕೇಂದ್ರ ನೌಕರರ ಸಂಬಳವು ತಿಂಗಳಿಗೆ 1,18,800 ರೂ. ಹೆಚ್ಚಾಗಬಹುದು..” ಎಂದು ಗೋಲ್ಡ್‌ಮನ್‌ ಸ್ಯಾಕ್ಸ್‌ ತಿಳಿಸಿದೆ.ಇದಕ್ಕೂ ಮೊದಲು 2016ರಲ್ಲಿ ಜಾರಿಯಾದ 7ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ, ಕೇಂದ್ರ ಸರ್ಕಾರ 1.02 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಜುಲೈ 2016ರಿಂದ ಪರಿಷ್ಕೃತ ಸಂಬಳ ಮತ್ತು ಪಿಂಚಣಿಗಳು ಜಾರಿಗೆ ಬಂದವು. ಈ ಹೆಚ್ಚುವರಿ ಹಣಕಾಸಿನ ಹೊರೆಯನ್ನು 2016-17ರ ಹಣಕಾಸು ವರ್ಷದಲ್ಲಿ ಸರಿದೂಗಿಸಲಾಯಿತು.

7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಹೆಚ್ಚಳವನ್ನು ಲೆಕ್ಕ ಹಾಕಲು ಬಳಸುವ ಫಿಟ್‌ಮೆಂಟ್ ಫ್ಯಾಕ್ಟರ್‌ನ್ನು, 2.57 ಪಟ್ಟು ಹೆಚ್ಚಿಸಲಾಯಿತು. ಇದರಿಂದ ಕನಿಷ್ಠ ಮೂಲ ವೇತನ 7,000 ರೂ.ದಿಂದ 18,000 ರೂ.ವರೆಗೆ ಏರಿಕೆ ಕಂಡಿತ್ತು. 8ನೇ ವೇತನ ಆಯೋಗದ ಶಿಫಾರಸ್ಸುಗಳಲ್ಲಿ ಈ ಫಿಟ್‌ಮೆಂಟ್‌ ಫ್ಯಾಕ್ಟರ್‌ನ್ನು ಮತ್ತಷ್ಟು ಏರಿಕೆ ಮಾಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳ, ಪಿಂಚಣಿ ಮತ್ತು ಸೌಲಭ್ಯಗಳ ಪರಿಶೀಲನೆ ಮತ್ತು ಬದಲಾವಣೆಗೆ ಶಿಫಾರಸ್ಸುಗಳನ್ನು ಮಾಡುತ್ತದೆ. ಆರ್ಥಿಕ ಪರಿಸ್ಥಿತಿ, ಹಣದುಬ್ಬರ ಮತ್ತು ಜೀವನ ವೆಚ್ಚವನ್ನು ಆಧರಿಸಿ, ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ವೇತನವನ್ನು ಪರಿಷ್ಕರಿಸಲು ವೇತನ ಆಯೋಗ ಸಮಿತಿಯನ್ನು ರಚಿಸಲಾಗುತ್ತದೆ.


Related Articles

Leave a Reply

Your email address will not be published. Required fields are marked *

Back to top button