
ಪೆಹಲ್ಗಾಮ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ತಡ ರಾತ್ರಿ ಪಾಕಿಸ್ಥಾನದ ಉಗ್ರರ ಅಡುಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸುವದರೊಂದಿಗೆ ಪಾಕಿಸ್ಥಾನಕ್ಕೆ ಕಠೋರ ಏಚ್ಚರಕೆ ನೀಡಿದ್ದನ್ನು ಸಂಭ್ರಮಿಸಿದ ತಾಳಿಕೋಟೆಯ ಆರ್ಯ ವೈಶ್ಯ ಸಮಾಜದ ಮಹಿಳೆಯರು ಮತ್ತು ಮಕ್ಕಳು ಭಾರತೀಯ ಸೈನಿಕರಿಗೆ ಜೈಕಾರದ ಸುರಿಮಳೆ ಗೈದರು.
ಬುಧವಾರರಂದು ಶ್ರೀ ವಾಸವಿದೇವಿ ಜಯಂತ್ಯೋತ್ಸವ ಅಂಗವಾಗಿ ಶ್ರೀ ವಾಸವಿ ದೇವಸ್ಥಾನದಲ್ಲಿ ಒಗ್ಗೂಡಿದ ಆರ್ಯವೈಶ್ಯ ಸಮಾಜದ ಮಹಿಳಾ ಮಂಡಳದ ಸದಸ್ಯನಿಯರು ಭಾರತ ಮಾತಾಕಿ ಜೈ, ಭಾರತೀಯ ಸೈನಿಕರಿಗೆ, ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಜೈ ಎಂಬ ಅನೇಕ ಜೈಕಾರಗಳು ನಮ್ಮ ಭಾರತೀಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವಂತೆ ಎದ್ದು ಕಂಡುಬಂದವು.
ಬಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದ ಮಹಿಳೆಯರು ಮತ್ತು ಮಕ್ಕಳು ಸಿಂಧೂರ ಅಳಿಸಿದವರಿಗೆ ಆಪರೇಷನ್ ಸಿಂಧೂರದಿಂದ ಮರು ಉತ್ತರ, ನನ್ನ ರಕ್ತದ ಪ್ರತಿ ಹನಿ ಹನಿಯು ನನ್ನ ರಾಷ್ಟ್ರದ ರಾಜ್ಯದ ಬೆಳವಣಿಗೆಗೆ ಮುಡುಪು, ಭಾರತೀಯ ಸೈನಿಕರಿಗೆ ಜೈಯವಾಗಲಿ ಎಂಬ ಫಲಕಗಳನ್ನು ಪ್ರದರ್ಶಿಸಿದ ಮಹಿಳೆಯರು ರಾಷ್ಟ್ರಾಭಿಮಾನ, ದೇಶಾಭಿಮಾನ ಮತ್ತು ನಮ್ಮ ಭಾರತೀಯ ಸೈನ್ಯದ ಮೇಲಿನ ಪ್ರೀತಿ ಅಭಿಮಾನ ಹೆಚ್ಚಿಸುವಂತೆ ಕಂಡುಬಂದವು.