ಕ್ರೈಂ
Trending

ಮನಸೋ ಇಚ್ಛೆ ಹಣ ಸುಲಿಗೆ, ಹದ್ದಿನ ಕಣ್ಣಿಟ್ಟ ಡ್ರಗ್ ಕಂಟ್ರೋಲ್ ಬೋರ್ಡ್!

ಬೆಂಗಳೂರು: ಆರೋಗ್ಯ ಇಲಾಖೆ (Health Department) ಕಳೆದ ಕೆಲವು ತಿಂಗಳನಿಂದ ಜನರ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಲಾಗಿತ್ತು. ಅಪಾಯಕಾರಿಯಾದ ಕಲರ್, ರಾಸಾಯನಿಕಗಳ ಬಳಕೆಗೆ ಕಡಿವಾಣ ಸೇರಿದ್ದಂತೆ ಹಲವು ಆಹಾರ ಪದಾರ್ಥಗಳ ಸ್ಯಾಂಪಲ್ಸ್ ಸಂಗ್ರಹಿಸಿ ಟೆಸ್ಟ್ ಮಾಡಲು ಮುಂದಾಗಿತ್ತು. ಈ ನಡುವೆ ಆರೋಗ್ಯ ಇಲಾಖೆ ಮತ್ತೊಂದು ಪ್ರಯೋಗಕ್ಕೂ ಮುಂದಾಗಿದೆ. ಅದೆನೇಂದರೆ ರಕ್ತ ನಿಧಿ ಘಟಕಗಳಲ್ಲಿ (blood bank units) ಹೆಚ್ಚು ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಡ್ರಗ್ ಕಂಟ್ರೋಲ್ ಬೋರ್ಡ್​ಗೆ ಸಾಲು ಸಾಲು ದೂರುಗಳು ಬಂದಿವೆ. ಹಾಗಾಗಿ ಬ್ಲಡ್ ಘಟಕಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಲು ಮುಂದಾಗಿದೆ.

ಇತ್ತಿಚ್ಚಿಗೆ ರಕ್ತ ನಿಧಿ ಘಟಕಗಳಲ್ಲಿ ಸ್ವಚ್ಛತೆ ಇರಲ್ಲ, ರಕ್ತ ಸಂಗ್ರಹ ಘಟಕದಲ್ಲಿ ಯಾವುದೇ ರೂಲ್ಸ್ ಫಾಲೋ ಆಗುತ್ತಿಲ್ಲ. ರಕ್ತ ಸಂಗ್ರಹ ನಿಧಿ ಘಟಕಗಳಲ್ಲಿ ಕಳ್ಳಾಟ ಶುರುವಾಗಿದೆ ಅಂತಾ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಆರೋಗ್ಯ ಇಲಾಖೆ ರಕ್ತ ಸಂಗ್ರಹ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದೆ. ಜನರಿಂದ ಕ್ಯಾಂಪ್​ಗಳ ಮೂಲಕ ಸಂಗ್ರಹವಾದ ಬ್ಲಡ್ ಎಲ್ಲಿ ಹೋಗುತ್ತಿದೆ. ರಕ್ತ ನಿಧಿ ಘಟಕಗಳಲ್ಲಿ ಯಾವೆಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ. ಸ್ವಚ್ಛತೆ, ಶುಚಿತ್ವ ಹೇಗಿದೆ. ರಕ್ತ ಸಂಗ್ರಹಣದಲ್ಲಿ ಏನೆಲ್ಲಾ ಗೋಲ್ ಮಾಲ್ ಆಗುತ್ತಿದೆ. ಏನೆಲ್ಲಾ ಸಮಸ್ಯೆಯಾಗಿದೆ ಅಂತಾ ವರದಿ ಸಂಗ್ರಹಿಸಲು ಮುಂದಾಗಿದೆ.ಇನ್ನು ರಕ್ತ ನಿಧಿ ಘಟಕಗಳಲ್ಲಿ ಬೇಡಿಕೆಯ ರಕ್ತಕ್ಕೆ ಮುಗಂಡ ಹಣ ಪಡೆಯಲಾಗುತ್ತಿದೆ. ಪರ್ಯಾಯ ರಕ್ತ ನೀಡಿದರೆ ಮುಗಂಡ ಹಣ ನೀಡುತ್ತಾರೆ. ಇಲ್ಲವಾದರೆ ಮುಗಂಡ ಹಣ ನೀಡಲ್ಲ. ಸರ್ಕಾರದ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚು ಹಣ ಸೂಲಿಗೆ ಮಾಡಲಾಗುತ್ತಿದೆ ಹಾಗೂ ಬ್ಲಡ್ ಬ್ಯಾಂಕ್​ಗಳಲ್ಲಿ ಶುಚಿತ್ವ ಇರಲ್ಲ ಹಾಗೂ ತರಬೇತಿ ಪಡೆದ ಸಿಬ್ಬಂದಿ ಇರಲ್ಲ. ಹೀಗಾಗಿ ಬ್ಲಡ್ ಬ್ಯಾಂಕ್​ಗಳ ಮೇಲೆ ಹದ್ಧಿನ ಕಣ್ಣಿಟ್ಟಿರುವ ಡ್ರಗ್ ಕಂಟ್ರೋಲ್ ಬೋರ್ಡ್ ಸ್ಯಾಂಪಲ್ಸ್ ಸಂಗ್ರಹಿಸಿ ವರದಿ ಸಂಗ್ರಹಿಸಲು ಮುಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನ ಕಲಬೆರಕೆ ಆಹಾರ, ಅಪಾಯಕಾರಿಯಾದ ಕಲರ್ ಹಾಗೂ ಕೆಮಿಕಲ್ ಬಳಕೆಯ ಆಹಾರ ತಿಂಡಿಗಳ ಮೇಲೆ ನಿಗಾ ಅಭಿಯಾನ ಶುರು ಮಾಡಿದ್ದ ಆರೋಗ್ಯ ಇಲಾಖೆ, ಇದೀಗ ರಕ್ತ ಸಂಗ್ರಹ ಘಟಕಗಳ ಪರಿಶೀಲನೆಗೆ ಮುಂದಾಗಿದ್ದು, ವರದಿ ಆಧರಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದೆ.

Related Articles

Leave a Reply

Your email address will not be published. Required fields are marked *

Back to top button