ಇತ್ತೀಚಿನ ಸುದ್ದಿ
Trending

ನಾಳೆ ಬೆಳ್ಳಂಬೆಳಗ್ಗೆ ಗಗನಕ್ಕೆ ಜಿಗಿಯಲಿದೆ ಇಸ್ರೋದ 101ನೇ ರಾಕೆಟ್

ISRO 101st Rocket Launch: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) PSLV-C61/EOS-09 ಕಾರ್ಯಾಚರಣೆಗೆ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಇಸ್ರೋ ಮೇ 18ರಂದು ಬೆಳಗ್ಗೆ 5:59ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ 101ನೇ ಉಡಾವಣೆ ನಡೆಯಲಿದೆ.ಇತ್ತೀಚೆಗೆ ಬಿಡುಗಡೆಯಾದ ಟೈಮ್‌ಲ್ಯಾಪ್ಸ್ ವಿಡಿಯೋದಲ್ಲಿ ಇಸ್ರೋದ ಈ ಕಾರ್ಯಾಚರಣೆಯ ಸಿದ್ಧತೆಗಳನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ. ಈ ವಿಡಿಯೋದಲ್ಲಿ ಪಿಎಸ್‌ಎಲ್‌ವಿ ರಾಕೆಟ್​​ನ್ನು ಪೇಲೋಡ್ ಇಂಟಿಗ್ರೇಷನ್ ಫೆಸಿಲಿಟಿನಿಂದ (ಪಿಐಎಫ್) ಮೊಬೈಲ್ ಸರ್ವಿಸ್ ಟವರ್​ಗೆ (ಎಂಎಸ್‌ಟಿ) ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನೋಡಬಹುದು. ಇದು ಉಡಾವಣಾ ವೇದಿಕೆಯಲ್ಲಿ ಅಂತಿಮ ಹಂತದಲ್ಲಿ ರಾಕೆಟ್​ನ್ನು ಸಜ್ಜುಗೊಳಿಸುವ ಕಾರ್ಯವಾಗಿದೆ.

ವೀಕ್ಷಣೆ ಎಲ್ಲಿ, ಯಾವಾಗ?: ಭಾನುವಾರ ಬೆಳಗ್ಗೆ 5.59ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ನಿಗದಿಯಾಗಿದೆ. ಇಸ್ರೋದ ಅಧಿಕೃತ ​ಯೂಟ್ಯೂಬ್​ ಚಾನೆಲ್​ನಲ್ಲಿ ಇದರ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ತಿರುಪತಿ ತಿಮ್ಮಪ್ಪನಿಗೆ ಪೂಜೆ: ಮಹತ್ವದ ಕಾರ್ಯಾಚರಣೆ ಹಿನ್ನೆಲೆಯಲ್ಲಿ, ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಶುಕ್ರವಾರ ತಿರುಪತಿ ತಿಮ್ಮಪ್ಪನ ಮೊರೆ ಹೋದರು. ದೂರ ಸಂವೇದಿ ಉಪಗ್ರಹ ಮಿಷನ್ ಆದ ಪೋಲಾರ್ ಸ್ಯಾಟ್​​ಲೈಟ್ ಲಾಂಚ್ ವೆಹಿಕಲ್ (PSLV)-C61/EOS-09 ಮಿಷನ್‌ನ ಯಶಸ್ವಿ ಉಡಾವಣೆಗೆ ಅವರು ದೇವರ ಆಶೀರ್ವಾದ ಕೋರಿದರು.ಶುಕ್ರವಾರ ಮುಂಜಾನೆ ವಿಐಪಿ ದರ್ಶನದ ಸಮಯದಲ್ಲಿ, ನಾರಾಯಣನ್ ಪೂಜೆಯಲ್ಲಿ ಭಾಗವಹಿಸಿ, ಪಿಎಸ್‌ಎಲ್‌ವಿ-ಸಿ61ರ ಮಾದರಿಯನ್ನು ದೇವರ ಪಾದದಡಿ ಇರಿಸಿ ಮಿಷನ್‌ನ ಯಶಸ್ಸು ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸಿದರು. ವೇದ ವಿದ್ವಾಂಸರು ರಂಗನಾಯಕಕುಲ ಮಂಟಪದಲ್ಲಿ ಆಶೀರ್ವಾದ ಪಡೆದರು. ಈ ವೇಳೆ, ದೇವಾಲಯದ ಅಧಿಕಾರಿಗಳು ತೀರ್ಥ ಪ್ರಸಾದ ನೀಡಿ, ಇಸ್ರೋ ಅಧ್ಯಕ್ಷರಿಗೆ ಶಾಲು ಹೊದಿಸಿ ಗೌರವಿಸಿದರು.”ಪಿಎಸ್‌ಎಲ್‌ವಿ-ಸಿ61 ಮೂಲಕ ಉಡಾವಣೆಯಾಗುವ 101ನೇ ಮಿಷನ್ ಇಸ್ರೋಗೆ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಭಾರತದ ಎಲ್ಲಾ ಹವಾಮಾನ ಭೂ ವೀಕ್ಷಣಾ ಸಾಮರ್ಥ್ಯ ಹೊಂದಿರುವ ಈ ಉಪಗ್ರಹವು ಬಾಹ್ಯಾಕಾಶ ಸಾಧನೆಗೆ ದೇಶದ ಬದ್ಧತೆಯನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಶ್ರೀ ನಾರಾಯಣನ್ ಸುದ್ದಿಗಾರರಿಗೆ ತಿಳಿಸಿದರು.

ಮಿಷನ್‌ನ ಪರಿಚಯ ಮತ್ತು ಉದ್ದೇಶಗಳು: PSLV-C61 ಮಿಷನ್ ಸುಧಾರಿತ ರಾಡಾರ್ ಇಮೇಜಿಂಗ್ ಉಪಗ್ರಹವಾದ EOS-09 (RISAT-1B) ಅನ್ನು ಹೊತ್ತೊಯ್ಯುತ್ತಿದೆ. ಈ ಉಪಗ್ರಹ 1,710 ಕಿಲೋಗ್ರಾಂಗಳಷ್ಟು ತೂಕವಿದೆ. ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್​ನಿಂದ (SAR) ಸಜ್ಜುಗೊಂಡಿದ್ದು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲು-ರಾತ್ರಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳ ಸೆರೆಹಿಡಿಯಲು ಅನುವು ಮಾಡಿಕೊಡಲಿದೆ.EOS-09ನ ಮುಖ್ಯ ಉದ್ದೇಶ ಕೃಷಿ, ಅರಣ್ಯ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆ, ನಗರ ಯೋಜನೆ ಮತ್ತು ರಾಷ್ಟ್ರೀಯ ಭದ್ರತೆಯಂತಹ ಕ್ಷೇತ್ರಗಳಿಗೆ ನೆರವಾಗುವುದಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಂತಹ ಇತ್ತೀಚಿನ ಭದ್ರತಾ ಘಟನೆಗಳ ಮೇಲ್ವಿಚಾರಣೆ ಮಾಡಲಿದೆ. ಸೂಕ್ಷ್ಮ ಗಡಿಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸುವ ನಿಟ್ಟಿನಲ್ಲಿ ಉಪಗ್ರಹ ಕಾರ್ಯ ನಿರ್ವಹಿಸಲಿದೆ.

ತಾಂತ್ರಿಕ ವಿವರ ಮತ್ತು ಉಡಾವಣಾ ಪ್ರಕ್ರಿಯೆ: ಪಿಎಸ್‌ಎಲ್‌ವಿ-ಸಿ61 ರಾಕೆಟ್ ಇಸ್ರೋದ ವಿಶ್ವಾಸಾರ್ಹ ಉಡಾವಣಾ ವಾಹನವಾಗಿದ್ದು, ಇದು ಈ ಹಿಂದೆ 100ಕ್ಕೂ ಹೆಚ್ಚು ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಈ ರಾಕೆಟ್ ಅನೇಕ ರೀತಿಯ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವುದಕ್ಕೆ ಹೆಸರುವಾಸಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button