ಕ್ರೈಂ
Trending

ಜಾಮೀನು ಸಿಕ್ಕಿದ್ದಕ್ಕೆ ರೋಡ್‌ ಶೋ ನಡೆಸಿದ್ದ ಹಾನಗಲ್‌ ಗ್ಯಾಂಗ್‌ ರೇಪ್‌ ಆರೋಪಿಗಳು ಮತ್ತೆ ಪೊಲೀಸ್‌ ವಶಕ್ಕೆ!

ಹಾವೇರಿ: 2024ರ ಹಾನಗಲ್‌ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾಮೀನು ದೊರೆತ ಸಂತಸದಲ್ಲಿ ರೋಡ್‌ ಶೋ ನಡೆಸಿದ್ದ ಏಳು ಆರೋಪಿಗಳ ಪೈಕಿ ಐವರು ಆರೋಪಿಗಳನ್ನು ಹಾನಗಲ್ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಎಲ್ಲಾ ಏಳು ಆರೋಪಿಗಳು ಇಂದು (ಮೇ 23-ಶುಕ್ರವಾರ) ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ವಿಚಾರಣೆಗೆ ಹಾಜರಾಗಿ ವಾಪಾಸ್ ಹೊರ ಬರುತ್ತಿದ್ದಂತೇ, ಹಾವೇರಿಯ ಪ್ರವಾಸಿ ಮಂದಿರದ ಮುಂಭಾಗದ ರಸ್ತೆಯಲ್ಲಿ ಐವರು ಆರೋಪಿಗಳನ್ನು‌ ಪೊಲೀಸರು ವಶಕ್ಕೆ ಪಡೆದರು.ಜಾಮೀನು ಸಿಕ್ಕ ಸಂತಸದಲ್ಲಿ ರೋಡ್ ಶೋ ನಡೆಸಿದ ಆರೋಪಿಗಳ ಮೇಲೆ, ಮತ್ತೆ ಹೊಸ ಪ್ರಕರಣ ದಾಖಲಿಸಲು ಹಾನಗಲ್ ಪೊಲೀಸರ ಸಿದ್ದತೆ ನಡೆಸುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.ರೋಡ್ ಶೋ ನಡೆಸಿದ್ದ ಏಳು ಪ್ರಮುಖ ಆರೋಪಿಗಳಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಖಾಕಿ ಸಫಲವಾಗಿದೆ. ಶೀಘ್ರದಲ್ಲೇ ಉಳಿದ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆಯವುದಾಗಿ ಹಾನಗಲ್‌ ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕು ಮತ್ತು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಗುವಂತಿಲ್ಲ ಎಂಬ ಷರತ್ತಿನ ಮೇಲೆ, ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಈ ಏಳು ಆರೋಪಿಗಳಿಗೆ ಜಾಮೀನು ನೀಡಿತ್ತು. ಆದರೆ ಹಾವೇರಿ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಗುತ್ತಿದ್ದಂತೇ, ಈ ಆರೋಪಿಗಳು ತಮ್ಮ ಸಂಗಡಿಗರೊಂದಿಗೆ ಸೇರಿ ಹಾವೇರಿಯಿಂದ ಅಕ್ಕಿ ಆಲೂರುವರೆಗೆ ರೋಡ್‌ ಶೋ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ಜಾಮೀನು ನೀಡುವಾಗ ವಿಧಿಸಿದ್ದ ಷರತ್ತನ್ನು ಈ ಆರೋಪಿಗಳು ಉಲ್ಲಂಘಿಸಿದ್ದಾರೆ ಎಂದು ಹೇಳಿರುವ ಪೊಲೀಸರು, ಏಳು ಆರೋಪಿಗಳ ಪೈಕಿ ಐವರನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಹೊಸದಾಗಿ ಪ್ರಕರಣ ದಾಖಲಾಗಲಿದೆ ಎಂದು ಮೂಲಗಳು ತಿಳಿಸಿವೆ.

2024ರ ಹಾನಗಲ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಏಳು ಆರೋಪಿಗಳಿಗೆ, ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಸಂತ್ರಸ್ತ ಮಹಿಳೆಯು ಆರೋಪಿಗಳನ್ನು ಗುರುತಿಸುವಲ್ಲಿ ವಿಫಲವಾದ ಪರಿಣಾಮ, ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿತ್ತು.ಆದರೆ ಈ ಎಲ್ಲಾ ಏಳು ಆರೋಪಿಗಳು ಹಾವೇರಿ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗುತ್ತಿದ್ದಂತೇ, ಕಾರು ಮತ್ತು ಬೈಕ್‌ಗಳಲ್ಲಿ ಅಕ್ಕಿ ಆಲೂರುವರೆಗೆ ರೋಡ್ ಶೋ ನಡೆಸಿದ್ದಾರೆ. ಅಕ್ಕಿ ಆಲೂರು ತಲುಪಿದ ಮೇಲೂ ಈ ಆರೋಪಿಗಳು ತಮ್ಮ ಬಿಡುಗಡೆಯನ್ನು ಸಂಭ್ರಮಸಿದ್ದಾರೆ. ಈ ಕುರಿತು ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, “ಭಾಯೀ ಲೋಗ್‌ ರಿಲೀಸ್”‌ ಎಂಬ ಘೋಷಣೆಗಳು ವ್ಯವಸ್ಥೆಗೆ ಸಡ್ಡು ಹೊಡೆಯುವಂತೆ ಕಂಡುಬಂದಿದ್ದವು.ಇದೀಗ ಈ ಏಳು ಆರೋಪಿಗಳ ಪೈಕಿ ಐವರು ಆರೋಪಿಗಳನ್ನು ಮತ್ತೆ ಪೊಲೀಸರು ವಶಕ್ಕೆ ಪಡೆದಿದ್ದು, ಹೊಸದಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದ್ದಾರೆ. ಹಾನಗಲ್‌ ಸಾಮೂಹಿಕ ಅತ್ಯಾಚಾರ ಪ್ರಕರಣ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಾಮೂಹಿಕ ಅತ್ಯಾಚಾರ ಆರೋಪಿಗಳ ಪಟ್ಟಿ

A1- ಅಫ್ತಾಬ್‌ ಚಂದನಕಟ್ಟಿ
A2- ಮದರ್ ಸಾಬ್ ಮಂಡಕ್ಕಿ
A3- ಸಮಿವುಲ್ಲಾ ಲಾಲನವರ್
A7- ಮಹಮ್ಮದ್‌ ಸಾದಿಕ್ ಅಗಸಿಮನಿ
A8- ಶೊಯಿಬ್ ಮುಲ್ಲಾ
A11- ತೌಸಿಪ್ ಚೋಟಿ
A13- ರಿಯಾಜ್ ಸಾವಿಕೇರಿ

Related Articles

Leave a Reply

Your email address will not be published. Required fields are marked *

Back to top button