
ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ಶಿಕ್ಷಕ ಬಿ.ಆಯ್.ಹಿರೇಹೊಳಿ ಅವರಿಗೆ ಧಾರವಾಡದ ನಾಟ್ಯಸ್ಪೂರ್ತಿ ಆರ್ಟ್ & ಕಲ್ಚರಲ್ ಅಕಾಡೆಮಿ ವಾರ್ಷಿಕೋತ್ಸವ ಅಂಗವಾಗಿ ಕೊಡಮಾಡಲಾದ ಬಸವಶ್ರೀ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ದಾರವಾಡದ ಆಲೂರ ವೆಂಕಟರಾವ್ ಭವನದಲ್ಲಿ ನಡೆದ ನಾಟ್ಯಸ್ಪೂರ್ತಿ ಆರ್ಟ್ & ಕಲ್ಚರಲ್ ಅಕಾಡೆಮಿಯ ೧೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಮನಸೂರ ರೇವಣಸಿದ್ದೇಶ್ವರ ಮಠದ ಡಾ. ಶ್ರೀ ಬಸವರಾಜ ದೇವರು, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಧಾರವಾಡ ಗ್ರಾಮೀಣ ಮಾಜಿ ಶಾಸಕಿ ಶ್ರೀಮತಿ ಸೀಮಾ ಅಶೋಕ ಮಸೂತಿ, ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಜಾನಪದ ಕಲಾವಿದ ಇಮಾಮಸಾಬ ವಲ್ಲಪ್ಪಣ್ಣವರ, ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಬಂಗೆಣ್ಣನವರ ಉಪಸ್ಥಿತರಿದ್ದರು.