
ತಾಲ್ಲೂಕಿನ ತೊರ‍್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಾಲೂರು ತಾಲ್ಲೂಕಿನ ತೊರ‍್ನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶ್ವತ್ಥಮ್ಮ ರಾಮಯ್ಯ ಹಾಗೂ ಪಿಡಿಒ ಸಿ .ಆರ್ ಗೌಡ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಒ ಚಂಗಲರಾಯ ಗೌಡ ರವರು ಮಾಹಿತಿ ನೀಡುತ್ತಾ ಗಿಡಗಳು ನೆಡುವುದರ ಮೂಲಕ ಮರಗಳಾಗಿ ಕೊಡುವ ಪ್ರತಿಫಲದ ಉಪಯೋಗಳು ಬಗ್ಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ನಡೆಸಲ್ಪಡುವ ಹತ್ತು ಹಲವಾರು ಕಾರ್ಯಕ್ರಮಗಳ ಹಾಗೂ ಪೂಜ್ಯ ವೀರೇಂದ್ರ ಹೆಗಡೆಯವರು ಆಶ್ರಯದಲ್ಲಿ ನಡೆಯುವ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಒಂದಾದ “ನಮ್ಮ ಊರು ನಮ್ಮ ಕೆರೆ “ಕಾರ್ಯಕ್ರಮದಿಂದ ರೈತರಿಗೆ ಆಗುವ ಪ್ರಯೋಜನವನ್ನು ಹಾಗೂ ಶಾಲೆಯ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಶ್ಲಾಘಿಸಿದರು. ಮಕ್ಕಳಿಗೆ ಗಿಡ ನೆಟ್ಟು ಲಾಲನೆ -ಪಾಲನೆ ಮಾಡಬೇಕು ಎಂದು ಮಾಹಿತಿ ನೀಡಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಮತಿ ರಾಜೇಶ್ವರಿ ಪರಿಸರದಲ್ಲಿ ಜೈವಿಕ – ಅಜೈವಿಕ ಘಟಕಗಳ ಪಾತ್ರ ಹಾಗೂ ಅವುಗಳ ಅಸಮತೋಲನದಿಂದ ಆಗುವ ಹವಾಮಾನ ವೈಪರಿತ್ಯ, ಅತಿವೃಷ್ಟಿ, ಅನಾವೃಷ್ಟಿಯಿಂದ ಜೀವಸಂಕುಲಕ್ಕೆ ಆಗುವ ತೊಂದರಗಳ ಬಗ್ಗೆ ಮಾಹಿತಿ ನೀಡಿದರು. ಪರಿಸರದ ಬಗ್ಗೆ ಶಾಲಾ ಮಕ್ಕಳಲ್ಲಿ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯ ಎಂದು ಜಾಗೃತಿ ಮೂಡಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಸರ ಕಾರ್ಯದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ತೊರ‍್ನಹಳ್ಳಿ ಗ್ರಾಮದ ಊರಿನ ಮುಖಂಡರಾದ ರೋಜಾ ರಾಜಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಮಾಂಜನೇಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ತಿರುಮಲೇಶ್ ಉಪಾಧ್ಯಕ್ಷರಾದ ವೆಂಕಟರಮಣಪ್ಪ, ಖಜಾಂಚಿಗಳಾದ ಆಂಜನಪ್ಪ ಸೇರಿದಂತೆ ಇತರರು ಇದ್ದರು.