ಆಪ್ತ ಸಮಾಲೋಚಕರ, ಮಾನಸಿಕ ಆರೋಗ್ಯ ಸಲಹೆಗಾರ ಹುದ್ದೆಗೆ ನೇಮಕ ಮಾಡಿ; ಮೌನೇಶ್ ಪಾಟೀಲ್ ಒತ್ತಾಯ

ಮುಂಜಾನೆ ವಾರ್ತೆ ಯಾದಗಿರಿ:ವೃತ್ತಿಪರ ಸಮಾಜ ಕಾರ್ಯಕರ್ತರಅಸೋಸಿಯೇಷನ್ ದಿಂದ ಶಾಲಾ ಕಾಲೇಜುಗಳಲ್ಲಿ ಎಂ ಎಸ್ ಡಬ್ಲ್ಯೂ/ಬಿ ಎಸ್ ಡಬ್ಲ್ಯೂ ಪದವೀಧರರನ್ನು ಸಮಾಲೋಚಕರನ್ನಾಗಿ ನೇಮಿಸುವಂತೆ ಪತ್ರ ಚಳುವಳಿಯ ಮುಖಾಂತರ ಸರಕಾರಕ್ಕೆ ಒತ್ತಾಯ
ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಶಿಯಲ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ಮೌನೇಶ ಪಾಟೀಲ್ ಬೆಳಗೇರಾ ಇವರ ನೇತೃತ್ವದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಕಾಲೇಜ್ ಹಂತದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಆತ್ಮಹತ್ಯೆ, ಹಾಗೂ ಒತ್ತಡ ನಿರ್ವಹಣೆಯ ಮೂಲಕ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಲು, ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಶಾಲಾ ಕಾಲೇಜುಗಳಲ್ಲಿ ಎಂ ಎಸ್ ಡಬ್ಲ್ಯೂ/ಬಿ ಎಸ್ ಡಬ್ಲ್ಯೂ ಸ್ನಾತಕೋತರರು ಪದವಿಯಲ್ಲಿ ಪಠ್ಯವಲ್ಲದೆ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅನುಭವಿ ಹಾಗೂ ಪ್ರಯೋಗಿಕವಾಗಿಯೂ ಕೂಡ ನೈಪುಣತೆಯನ್ನು ಹೊಂದಿರುತ್ತಾರೆ.
ಇವರ ಕಾರ್ಯವೈಖರಿಯು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಹರಿಹರಯ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಜೀವನ ಕೌಶಲ್ಯ ಶಿಕ್ಷಣ ಆಪ್ತ ಸಮಾಲೋಚನೆ ಸೇರಿದಂತೆ ತರಬೇತಿಯನ್ನು ನೀಡುವುದಲ್ಲದೆ ಸಮುದಾಯದಲ್ಲಿಯೂ ಕೂಡ ಮನೆ ಭೇಟಿ ಮಾಡಿ ಅವರ ಪೋಷಕರುಗಳಿಗೆ ಒತ್ತಡ ನಿವಾರಣೆ ಕಾರ್ಯಕ್ರಮ ಹಾಗೂ ಮಕ್ಕಳಲ್ಲಿರುವ ಮಾನಸಿಕ ತೊಂದರೆಗಳ ಬಗ್ಗೆ, ಆತ್ಮಹತ್ಯೆಯ ದುಷ್ಪರಿಣಾಮಗಳ ಬಗ್ಗೆ, ಇನ್ನಿತರ ಸಮಸ್ಯೆಗಳ ಬಗ್ಗೆ, ಮನೋವೈದ್ಯಕೀಯ ಶಿಕ್ಷಣ ನೀಡಿ ಜಾಗೃತಿ ಮೂಡಿಸುವುದಲ್ಲದೆ ಅವರ ಬಗ್ಗೆ ಅನುಸರಣೆಯನ್ನು ಕೂಡ ಮಾಡುವ ಕಾರ್ಯವನ್ನು ಮಾಡುತ್ತಾರೆ.
ಆದ್ದರಿಂದ ಬಿ ಎಸ್ ಡಬ್ಲ್ಯೂ/ಎಂ ಎಸ್ ಡಬ್ಲ್ಯೂ ಸ್ನಾತಕೋತ್ತರ ಮುಗಿಸಿದ ಪದವೀಧರರನ್ನು ರಾಜ್ಯದಲ್ಲಿರುವ ಎಲ್ಲಾ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಶೀಘ್ರವೇ ಮಾನಸಿಕ ಆರೋಗ್ಯ ಸಲಹೆಗಾರರನ್ನು/ಆಪ್ತ ಸಮಾಲೋಚಕರನ್ನು/ಸಾಮಾಜಿಕ ಕಾರ್ಯಕರ್ತರನ್ನು ನೇಮಕಾತಿ ಮಾಡಿಕೊಳ್ಳಲು ಆದೇಶವನ್ನು ಹೊರಡಿಸಬೇಕೆಂದು ಕರ್ನಾಟಕ ಸ್ಟೇಟ್ ಪ್ರೊಫೆಷನಲ್ ಸೋಶಿಯಲ್ ವರ್ಕರ್ಸ್ ವೇಲ್ಫೇರ್ ಅಸೋಸಿಯೇಷನ್ ರಾಜ್ಯಾದ್ಯಂತ ಪತ್ರ ಚಳುವಳಿ ಮೂಲಕ ಮುಖ್ಯಮಂತ್ರಿಗಳಿಗೆ, ಉಪ ನಿರ್ದೇಶಕರು ಶಿಕ್ಷಣ ಇಲಾಖೆ, ಆಯುಕ್ತರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ಜಿಲ್ಲಾ ಘಟಕದಿಂದ ಪತ್ರಗಳು ಹಾಕುವ ಮುಖಾಂತರ ಒತ್ತಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ನ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ವೇತಾ ನಾಯಕ ಹಾಗೂ ಸದಸ್ಯರುಗಳಾದ ಸತೀಶ್ ಕುಮಾರ್ ದುಪ್ಪಲ್ಲಿ, ಬಸವರಾಜ್, ತಿಮ್ಮಣ್ಣ,ಇರ್ಷದ್, ಬೇಬಿ ರಾಠೋಡ್, ತನುಜಾ, ಶರಣಮ್ಮ, ಪುಷ್ಪ ಉಪಸ್ಥಿತರಿದ್ದರ – ವರದಿ: ಮಲ್ಲಿಕಾರ್ಜುನ ಕುಂಬಾರಳ್ಳಿ ಯಾದಗಿರಿ ಜಿಲ್ಲೆ