
ನಾಗಮಂಗಲ.ಆ:5 ಮಕ್ಕಳ ಪೂರಕ ವಿದ್ಯಾರ್ಜನೆಗೆ ಪ್ರಸ್ತುತ ದಿನಗಳಲ್ಲಿ ಶಿಕ್ಷಣದಲ್ಲಿನ ಪೈಪೋಟಿ ವ್ಯಾಸಂಗಕ್ಕೆ ಪೂರಕವಾಗಿ ಪತ್ರಿಕೆಗಳ ಪಾತ್ರ ಅನನ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಎನ್.ಜೆ ರಾಜೇಶ್ ತಿಳಿಸಿದರು.
ಅವರು ನೆನ್ನೆ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಸಮೀಪವಿರುವ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ವಾಗಿ ಕನ್ನಡ ದಿನಪತ್ರಿಕೆಗಳನ್ನ ವಿತರಿಸುತ್ತ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಹಾಗೂ ಜ್ಞಾನ ವಿಜ್ಞಾನ ತಂತ್ರಜ್ಞಾನ ಮಾಹಿತಿಯ ಕೊರತೆ ಇದ್ದು ಇಂತಹ ಸೌಲಭ್ಯಗಳನ್ನು ಅರಿತು ನಾವುಗಳು ನಮ್ಮ ಕಲ್ಪಮಟ್ಟಿಗೆ ಸಹಾಯ ಮಾಡುವ ಮುಖಾಂತರ ಮಕ್ಕಳಿಗೆ ಕನ್ನಡ ದಿನಪತ್ರಿಕೆಗಳ ಮೂಲಕ ಓದಿನ ಜೊತೆಗೆ ವಿದ್ಯಾಮಾನಗಳ ಪ್ರಗತಿಗೆ ಪೂರಕವಾಗಿ ಪತ್ರಿಕೆಗಳು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮಾಧ್ಯಮ ಮತ್ತು ವಿದ್ಯಾರ್ಥಿ ಕಲಿಕೆಯ ಉತ್ಸಾಹಕ್ಕೆ ಕನ್ನಡ ಪತ್ರಿಕೆಗಳ ಸಹಕಾರಿಯಾಗಲಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಹಿರಿಯ ಪತ್ರಕರ್ತರಾದ ಪಿ ಜೆ ಜಯರಾಮ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮೈಲಾರ ಪಟ್ಟಣ ಸರ್ಕಾರಿ ಪ್ರೌಢಶಾಲೆ, ರಾಮನಹಳ್ಳಿ ಬಾಪೂಜಿ ಪ್ರೌಢಶಾಲೆ ಗಳಿಗೆ ದಿನಪತ್ರಿಕೆಗಳನ್ನ ವಿತರಿಸಲಾಯಿತು.
ಸಮಾರಂಭದಲ್ಲಿ ಸಮಾಜ ಸೇವಕರಾದ ಉದಯ್ ಕಿರಣ್ ಕೃಷ್ಣೇಗೌಡ ಗೋಪಿ ಸಂಜು ರವರುಗಳು ಹಾಜರಿದ್ದ ಮುಖ್ಯ ಶಿಕ್ಷಕರಾದ ಚಿಕ್ಕ ಬೋರಯ್ಯನವರು ಸ್ವಾಗತಿಸಿದರು