ಚೆಸ್ಕಾಂ ಉಪ ವಿಭಾಗದ ಗ್ರಾಹಕ ಸಲಹಾ ಸಮಿತಿಯ ವಾಣಿಜ್ಯ ಪ್ರತಿನಿಧಿಯಾಗಿ ಮಾದರಹಳ್ಳಿ ಶಿವರಾಮು ನಾಮ ನಿರ್ದೇಶನ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮದ್ದೂರು ತಾಲೂಕು ಮಟ್ಟದ ವಿದ್ಯುತ್ ಸಂಬಂಧಿಸಿದಂತೆ ಸಮಸ್ಯೆಗಳನ್ನು ಬಗೆಹರಿಸಲು ಉಪ ವಿಭಾಗದ ಗ್ರಾಹಕರ ಸಲಹಾ ಸಮಿತಿಯ ವಾಣಿಜ್ಯ ಪ್ರತಿನಿಧಿಯಾಗಿ ಮಾದರಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಶಿವರಾಮು ರವರು ನಾಮ ನಿರ್ದೇಶಿತರಾಗಿದ್ದಾರೆ,
ಮದ್ದೂರು ಕ್ಷೇತ್ರದ ಶಾಸಕರಾದ ಕೆ.ಎಂ ಉದಯ್ ರವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಸರ್ಕಾರದ ವಿದ್ಯುತ್ ಸಚಿವಾಲಯದ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದವರು ಶಿವರಾಮುರವರನ್ನು ಉಪ ವಿಭಾಗದ ಗ್ರಾಹಕರ ಸಲಹಾ ಸಮಿತಿಯ ವಾಣಿಜ್ಯ ಪತ್ರಿನಿಧಿಯಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.
ನೂತನ ಸದಸ್ಯರಿಗೆ ಮದ್ದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಎಂ ಉದಯ್ ರವರು ಆದೇಶ ಪತ್ರ ವಿತರಸಿ ಉತ್ತಮವಾಗಿ ಜನಪರವಾಗಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿ ಶುಭಹಾರೈಸಿದರು.
ಇದೆ ಸಂದರ್ಭದಲ್ಲಿ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಿ.ಬಸವರಾಜು ,ಮುಖಂಡರಾದ ಕೆ.ಕೆಂಪೇಗೌಡ, ಚನ್ನಶೇಖರ್ ಗ್ರಾಮ ಪಂಚಾಯಿತಿ ಸದಸ್ಯಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.