
ಭಾಗ್ಯನಗರದ ವಿದ್ಯಾವಿಕಾಸ ಶಾಲೆಯ ಸಭಾ ಭವನದಲ್ಲಿ ಫಾನಘಂಟಿ ಫೌಂಡೇಶನ್, ವಾಸವಿ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಹಿರಿಯ ಪತ್ರಕರ್ತರೆಲ್ಲರೂ ಉದ್ಘಾಟಿಸಿದರು. ಇದೇ ವೇಳೆ ಮಾತಾನಾಡಿದ ಪತ್ರಕರ್ತರಾದ ಸಾಧಿಕ್ ಅಲಿ ಅವರು ಪತ್ರಕರ್ತರು ವಿಷಯವನ್ನು ಬರೀ ಸುದ್ದಿಯನ್ನಾಗಿ ನೋಡದೆ ಸಮಾಜದ ಅಭಿವೃದ್ಧಿ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಪತ್ರಕರ್ತರು ನಿರ್ಣಾಯಕರಲ್ಲ,ಓದುಗರೇ ನಿರ್ಣಾಯಕರು. ವಿದ್ಯಾರ್ಥಿಗಳು ಕೂಡ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆಯನ್ನು ಓದುವ ಹವ್ಯಾಸ ರೂಪಿಸಿಕೊಳ್ಳಿ ಎಂದರು.
ಪತ್ರಕರ್ತರಾದ ಸೋಮರಡ್ಡಿ ಅಳವಂಡಿ ಮಾತನಾಡಿ ಸಮಾಜದ ಅಭಿವೃದ್ಧಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಪ್ರತಿಯೊಬ್ಬರು ಪತ್ರಕರ್ತರೆ,ಸೋಶಿಯಲ್ ಮೀಡಿಯಾದಲ್ಲಿ ಬೇಗನೆ ಸುದ್ದಿ ವಿನಿಮಯವಾದರೂ ಅದರ ಬಗ್ಗೆ ನಂಬಿಕೆ ಕಡಿಮೆ.ಯಾವಾಗಲೂ ಸತ್ಯ ಮಾತ್ರ ಸುದ್ದಿಯಾಗಬೇಕೆಂದರು.
ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪುರ,ರವೀಂದ್ರ ಅವರು ಕೂಡ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಫಾನಘಂಟಿ ಪೌಂಡೇಶನ್ ನ ಅಧ್ಯಕ್ಷರಾದ ಶಾರದಾ ಫಾನಘಂಟಿ ಅವರು ಮಾತನಾಡಿ ಪತ್ರಕರ್ತರು ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುತ್ತಾರೆ. ಪ್ರತಿಭೆಗಳಿಗೆ ವೇದಿಕೆಯನ್ನು ಒದಿಗಿಸುವುದರ ಜೊತೆಗೆ ಪ್ರೋತ್ಸಾಹ ನೀಡುತ್ತಾರೆ.ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಪತ್ರಿಕಾ ದಿನಾಚರಣೆಯ ನಿಮಿತ್ತವಾಗಿ ಶಾಲಾ ಆವರಣದಲ್ಲಿ ಹಿರಿಯ ಪತ್ರಕರ್ತರೆಲ್ಲಾ ಸೇರಿ ಸಸಿನೆಡಲಾಯಿತು.ಪತ್ರಕರ್ತರಾದ ಸಾಧಿಕ್ ಅಲಿ,ಸೋಮರಡ್ಡಿ ಅಳವಂಡಿ,ಜಿ.ಎಸ್.ಗೋನಾಳ,ಶರಣಪ್ಪ ಬಾಚಲಾಪುರ,ರವೀಂದ್ರ ವಿ.ಕೆ , ದತ್ತು ಕಮ್ಮಾರ, ಶ್ರೀಕಾಂತ ಅಕ್ಕಿ, ಅನಿಲ್ ಬಾಚನಹಳ್ಳಿ, ಬಿ.ಎನ್.ಹೊರಪೇಟಿ, ಸಿದ್ದು ಹಿರೇಮಠ, ಎಂ.ಎನ್.ಕುಂದಗೋಳ,ಸಾವೆದ್ ಹುಸೇನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾದಿರಾಜ್ ದೇಸಾಯು , ಪ್ರಿಯದರ್ಶಿನಿ ಮುಂಡರಗಿಮಠ, ಹೇಮಾ ಪಾನಘಂಟಿ, ಗಿರಿಜಾ, ವೈಷ್ಣವಿ, ಸಂದೇಶ್ ,ಅರ್ಚನಾ ಹಾಗೂ ಫೌಂಡೇಶನ್ ಪದಾಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು. ಶಿಕ್ಷಕ ಮೋಹನ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.