
ಈಗ ಎಲ್ಲೆಡೆ ಹಬ್ಬದ ಸೀಸನ್ ಜೋರಾಗಿಯೇ ನಡೆಯುತ್ತಿದೆ. ಇದಕ್ಕಾಗಿ ಇ – ಕಾಮರ್ಸ್ ಭರ್ಜರಿ ಆಫರ್ಗಳು ನೀಡುತ್ತಿವೆ. ಹೀಗಾಗಿ ಆನ್‌ಲೈನ್ ವಹಿವಾಟುಗಳು ನಾಟಕೀಯವಾಗಿ ಹೆಚ್ಚಾಗುತ್ತವೆ. ಡಿಜಿಟಲ್ ಸಂವಹನವು ವೇಗವನ್ನು ಪಡೆಯುತ್ತದೆ. ಸೈಬರ್ ಅಪರಾಧಿಗಳು ನಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಲೂಟಿ ಮಾಡಲು ಇಂತಹ ಅವಕಾಶಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಸೈಬರ್ ಅಪರಾಧಿಗಳು ಇದಕ್ಕಾಗಿ ಅವರು ಫೇಕ್ ಮೆಸೇಜ್ಗಳು, ಫಿಶಿಂಗ್ ಲಿಂಕ್‌ಗಳು, ಅಪಾಯಕಾರಿ QR ಕೋಡ್‌ಗಳು ಮತ್ತು ಫೇಕ್ ಪೇಮೆಂಟ್ ರಶೀದಿಗಳನ್ನು ಕಳುಹಿಸುತ್ತಾರೆ. ನಾವು ಅವುಗಳನ್ನು ಕ್ಲಿಕ್ ಮಾಡಿದರೂ ಅಥವಾ ಸ್ಕ್ಯಾನ್ ಮಾಡಿದರೂ ಸಹ ನಮ್ಮ ಖಾತೆಗಳು ಖಾಲಿಯಾಗುತ್ತವೆ ಎಂದು ತಜ್ಞರು ಎಚ್ಚರಿಸುತ್ತಾರೆ. ಹಬ್ಬದ ಋತುವಿನಲ್ಲಿ ಸ್ಕ್ಯಾಮರ್‌ಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸ್ಮಾರ್ಟ್ ಸಲಹೆಗಳನ್ನು ತಿಳಿಯಲು ಈ ಸುದ್ದಿಯನ್ನು ಓದಿ..
ಫೇಕ್ ವೆಬ್‌ಸೈಟ್‌ಗಳು ಮತ್ತು ಸಾಫ್ಟ್‌ವೇರ್: ಹಬ್ಬದ ಋತುವಿನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಾರೆ. ಇದು ಸೈಬರ್ ಅಪರಾಧಿಗಳಿಗೂ ತಿಳಿದಿದೆ. ಅದಕ್ಕಾಗಿಯೇ ಅವರು ಜನಪ್ರಿಯ ಇ-ಕಾಮರ್ಸ್ ಮತ್ತು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳ ಹೆಸರಿನಲ್ಲಿ ಜನರ ಫೋನ್‌ಗಳಿಗೆ ಫೇಕ್ ಮೆಸೇಜ್ಗಳನ್ನು ಕಳುಹಿಸುತ್ತಾರೆ. ಈ ಸಂದೇಶಗಳು ಫೇಕ್ ಆಫರ್ಸ್, ಮರುಪಾವತಿ ಎಚ್ಚರಿಕೆಗಳು, OTP ನಮೂದಿಸಲು ವಿನಂತಿಗಳು ಮತ್ತು ಉತ್ಪನ್ನ ಡೆಲಿವರಿ ಅಪ್ಡೇಟ್ಗಳೊಂದಿಗೆ ಲಿಂಕ್‌ಗಳನ್ನು ಒಳಗೊಂಡಿರುತ್ತವೆ.
ನೀವು ಇವುಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬಾರದು. ನೀವು ಕ್ಲಿಕ್ ಮಾಡಿದರೆ ದುರುದ್ದೇಶಪೂರಿತ ವೆಬ್‌ಸೈಟ್ ಪೇಜ್ಗೆ ಹೋಗುತ್ತೀರಿ. ಕೆಲವೊಮ್ಮೆ ನೀವು ಅಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದಾಗ ಕೆಲವು ಅಪಾಯಕಾರಿ ಸಾಫ್ಟ್‌ವೇರ್ ಡೌನ್‌ಲೋಡ್ ಆಗುತ್ತದೆ. ಈ ದುರುದ್ದೇಶಪೂರಿತ ವೆಬ್‌ಸೈಟ್‌ಗಳು ಮತ್ತು ಸಾಫ್ಟ್‌ವೇರ್‌ಗಳು ನಮ್ಮ ಫೋನ್‌ನಿಂದ ಪಾಸ್‌ವರ್ಡ್‌ಗಳು, ಬ್ಯಾಂಕ್ ಖಾತೆ ವಿವರಗಳು ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿಯನ್ನು ಕದಿಯುತ್ತವೆ. ಆಗ ಈ ಮಾಹಿತಿಗಳು ಹ್ಯಾಕರ್ಸ್ ಉಪಯೋಗಿಸಿಕೊಳ್ಳುತ್ತಾರೆ.
ಹಲವು ಬಾರಿ ಸೈಬರ್ ಅಪರಾಧಿಗಳು ಯೆಸ್, ನೋ, ಸ್ಟಾಪ್ ಮತ್ತು ಆರ್ಡರ್ ಎಂಬ ಮುಂತಾದ ವಿಭಿನ್ನ ಆಯ್ಕೆಗಳನ್ನು ಹೈಲೈಟ್ ಮಾಡುವ ಮೆಸೇಜ್ ಪ್ರಾಂಪ್ಟ್‌ಗಳನ್ನು ಕಳುಹಿಸುತ್ತಾರೆ. ನಾವು ಈ ಆಯ್ಕೆಗಳಲ್ಲಿ ಯಾವುದನ್ನೂ ಆಯ್ಕೆ ಮಾಡಬಾರದು. ಒಂದು ವೇಳೆ ಈ ಆಯ್ಕೆಗಳ ಮೇಲೆ ಕ್ಲಿಕ್ ಮಾಡುವುದರಿಂದಲೂ ನಿಮ್ಮ ಖಾತೆ ಹ್ಯಾಕ್ ಆಗಬಹುದು. ಹೀಗಾಗಿ ನೀವು ಅಂತಹ ಸ್ಕ್ಯಾಮ್ ಮೆಸೇಜ್ಗಳನ್ನು ಮತ್ತು ಪ್ರಾಂಪ್ಟ್‌ಗಳಿಗೆ ಪ್ರತಿಕ್ರಿಯಿಸಬಾರದು.
QR ಕೋಡ್ ಸ್ಕ್ಯಾನ್: ಸೈಬರ್ ವಂಚಕರು QR ಕೋಡ್‌ಗಳೊಂದಿಗೆ ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಹಬ್ಬದ ಶುಭಾಶಯಗಳ ಸೋಗಿನಲ್ಲಿ ಜನರಿಗೆ QR ಕೋಡ್‌ಗಳನ್ನು ಕಳುಹಿಸುತ್ತಾರೆ. ಆ ಶುಭಾಶಯ ಸಂದೇಶದಲ್ಲಿ ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗುತ್ತೆ.
ವ್ಯಾಪಾರ ಸಂಸ್ಥೆಗಳನ್ನೂ ಬಿಡದ ವಂಚಕರು: ಪ್ರತಿ ವರ್ಷ ಹಬ್ಬದ ಋತುವಿನಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ಸೈಬರ್ ಸ್ಕ್ಯಾಮರ್‌ಗಳಿಂದ ಬಹಳಷ್ಟು ಬಳಲುತ್ತವೆ. ಕಳೆದ ವರ್ಷ (2024 ರಲ್ಲಿ) ನಮ್ಮ ದೇಶದಲ್ಲಿ 74 ಪ್ರತಿಶತ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ಕನಿಷ್ಠ ಒಂದೂ ಸಾರಿಯಾದರೂ ಸೈಬರ್ ವಂಚನೆಗೆ ಒಳಗಾಗಿದ್ದವು ಎಂಬುದು ಗಮನಾರ್ಹ.
ಹಬ್ಬದ ಸಮಯದಲ್ಲಿ ವ್ಯಾಪಾರ ಸಂಸ್ಥೆಗಳ ಎಲ್ಲಾ ತಂಡಗಳು ಕಾರ್ಯ ನಿರತವಾಗಿರುತ್ತವೆ. ಇದಲ್ಲದೇ ಅವರು ಪೂರೈಕೆದಾರರು ಎಂದು ಹೇಳಿಕೊಂಡು ಫೇಕ್ ಪೇಮೆಂಟ್ ರಶೀದಿಗಳನ್ನು ಕಳುಹಿಸುತ್ತಾರೆ. ವಂಚಕರು ತಾವು ಕಳುಹಿಸಿದ ಸರಕುಗಳಿಗೆ ಇನ್ಸ್ಟಂಟ್ ಪೇಮೆಂಟ್ ಕೇಳುವ ಸಂದೇಶಗಳನ್ನು ಕಳುಹಿಸುತ್ತಾರೆ. ಇವುಗಳಿಗೆ ಆತುರದಿಂದ ಪ್ರತಿಕ್ರಿಯಿಸಬೇಡಿ ಮತ್ತು ತಕ್ಷಣ ಉತ್ತರಿಸಬೇಡಿ. ಮೊದಲು ಆ ಸಂದೇಶಗಳು ನಿಜವೇ ಅಥವಾ ಇಲ್ಲವೇ ಎಂಬುದನ್ನು ನೀವು ನಿರ್ಧರಿಸಬೇಕು. ನಂತರ ಮಾತ್ರ ನೀವು ಹಣದ ಪಾವತಿಯೊಂದಿಗೆ ಮುಂದುವರಿಯಬೇಕು.
ಸ್ಕ್ಯಾಮರ್‌ಗಳಿಂದ ರಕ್ಷಿಸಿಕೊಳ್ಳಲು ಇಲ್ಲಿವೆ ಕೆಲವು ಸ್ಮಾರ್ಟ್ ಸಲಹೆಗಳು!
- ಕಾನೂನುಬದ್ಧ ಇ – ಕಾಮರ್ಸ್ ಮತ್ತು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳು ಯಾವುದೇ ಫೋನ್ ಸಂಖ್ಯೆಯಿಂದ ಸಂದೇಶಗಳನ್ನು ಕಳುಹಿಸುವುದಿಲ್ಲ. ಅವುಗಳು ಕೆಲವು ಅಧಿಕೃತ ಫೋನ್ ಸಂಖ್ಯೆಗಳು, ಅಧಿಕೃತ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಹೊಂದಿವೆ.
- ಮೊದಲು ನೀವು ಸ್ವೀಕರಿಸುವ ಸಂದೇಶದಲ್ಲಿನ ಲಿಂಕ್ ಮೂಲಕ ಗೋಚರಿಸುವ ಪ್ರೀವೀವ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅದು ಅಸಾಧಾರಣ/ಫೇಕ್ ಆಗಿ ಕಂಡು ಬಂದರೆ ಸಂದೇಶವನ್ನು ತಕ್ಷಣ ಡಿಲಿಟ್ ಮಾಡುವುದು ಉತ್ತಮ.
- ನಿಮ್ಮ ಆಪ್ತ ಸ್ನೇಹಿತರ ಹೆಸರಿನಲ್ಲಿ ಹಣ ಕೇಳುವ ಹೊಸ ಸಂಖ್ಯೆಯಿಂದ ಸಂದೇಶಕ್ಕೆ ಪ್ರತಿಕ್ರಿಯಿಸಬೇಡಿ. ನೀವು ಯಾರ ಹೆಸರಿನಲ್ಲಿ ಸಂದೇಶವನ್ನು ಸ್ವೀಕರಿಸಿದ್ದೀರೋ ಅವರಿಗೆ ಕಾಲ್ ಮಾಡಿ ಮತ್ತು ಈ ಬಗ್ಗೆ ಅವರಿಗೆ ತಿಳಿಸಿ.
- ಕೊಡುಗೆಗಳು, ರಿಯಾಯಿತಿಗಳು ಮತ್ತು ಆಕರ್ಷಕ ಪ್ರಯೋಜನಗಳ ರೂಪದಲ್ಲಿರುವ ಸಂದೇಶಗಳಿಗೆ ಬಲಿಯಾಗಬೇಡಿ.
- ವ್ಯಾಪಾರ ಸಂಸ್ಥೆಗಳು ತಮ್ಮ ಖಾತೆಗಳ ವಿಭಾಗದ ಸಿಬ್ಬಂದಿಗೆ ಸೈಬರ್ ವಂಚನೆಗಳನ್ನು ಹೇಗೆ ನಡೆಸಲಾಗುತ್ತದೆ ಎಂಬುದರ ಕುರಿತು ಕನಿಷ್ಠ ಮಟ್ಟದ ಅರಿವು ನೀಡಬೇಕು. ಇದಕ್ಕಾಗಿ ಅವರು ಸೈಬರ್ ತಜ್ಞರ ಸಹಕಾರವನ್ನು ತೆಗೆದುಕೊಳ್ಳಬೇಕು.
- ಕ್ವಿಕ್ ಹೀಲ್ ಆಂಟಿಫ್ರಾಡ್.ಎಐ ನಂತಹ ಪರಿಕರಗಳ ಬಳಕೆಯೊಂದಿಗೆ ವ್ಯಕ್ತಿಗಳು ಮತ್ತು ವ್ಯವಹಾರಗಳು ಸೈಬರ್ ವಂಚನೆಯಿಂದ ಸ್ವಲ್ಪ ರಕ್ಷಣೆ ಪಡೆಯಬಹುದು. ನಮ್ಮ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳು ಅಮೂಲ್ಯವಾದ ಮಾಹಿತಿ ಒಳಗೊಂಡಿರುತ್ತವೆ. ಯಾವುದೇ ವೆಬ್‌ಸೈಟ್/ಸಾಫ್ಟ್‌ವೇರ್/ಆ್ಯಪ್ ಅದನ್ನು ಕದಿಯಲು ಪ್ರಯತ್ನಿಸಿದರೆ ಈ AI ಪರಿಕರಗಳು ತಕ್ಷಣವೇ ಅದನ್ನು ‘ರೆಡ್ ಫ್ಲ್ಯಾಗ್’ ಎಂದು ನಮಗೆ ಸೂಚಿಸುತ್ತವೆ.
- ವ್ಯಕ್ತಿಗಳು ಮತ್ತು ವ್ಯವಹಾರಗಳು ತಮ್ಮ ಪಾವತಿ ವಹಿವಾಟುಗಳಿಗೆ ಬಹು ದೃಢೀಕರಣವನ್ನು ಬಳಸಬೇಕು. ಇದು ಯಾವುದೇ ಹಂತದಲ್ಲಿ ಸೈಬರ್ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.
- ವ್ಯವಹಾರಗಳ ಖಾತೆ ವಿಭಾಗದ ಉದ್ಯೋಗಿಗಳು ಯಾವುದೇ ಮೋಸದ ಸಂದೇಶ ಅಥವಾ ರಶೀದಿಯನ್ನು ಗುರುತಿಸಿದರೆ, ಅವರು ಅದನ್ನು ತಕ್ಷಣವೇ ರೆಡ್ ಫ್ಲ್ಯಾಗ್ ಮಾಡಲು ಸುಲಭ ಮತ್ತು ವೇಗದ ಪ್ರಕ್ರಿಯೆಯನ್ನು ಹೊಂದಿಸಬೇಕು.
- ಸೈಬರ್ ಅಪರಾಧಿಗಳು ವೈಯಕ್ತಿಕ ಆಪ್ತ ಸ್ನೇಹಿತ ಅಥವಾ ವ್ಯಾಪಾರ ಪೂರೈಕೆದಾರರ ಹೆಸರಿನಲ್ಲಿ ‘ನಮ್ಮ ಬ್ಯಾಂಕ್ ಖಾತೆ ಸಂಖ್ಯೆ ಬದಲಾಗಿದೆ. ಈ ಹೊಸ ಖಾತೆಗೆ ಹಣವನ್ನು ಕಳುಹಿಸಿ’ ಎಂಬ ಸಂದೇಶಗಳನ್ನು ಕಳುಹಿಸುತ್ತಾರೆ. ಈ ವೇಳೆ, ಸಂದೇಶವನ್ನು ಸ್ವೀಕರಿಸಿದ ವ್ಯಕ್ತಿಯ ಮೂಲ ಸಂಖ್ಯೆಗೆ ನೀವು ಕರೆ ಮಾಡಿ ಬ್ಯಾಂಕ್ ಖಾತೆ ಬದಲಾವಣೆಯ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕು.
- ಅಂತಹ ಅನುಮಾನಾಸ್ಪದ ಸಂದೇಶಗಳನ್ನು ತಕ್ಷಣವೇ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಅಥವಾ cybercrime.gov.in ವೆಬ್‌ಸೈಟ್‌ಗೆ ವರದಿ ಮಾಡಬೇಕು.