
ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ಹೊಸ ದಾಳಿಗೆ ಸೋಮವಾರ 31 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿ ಆರೋಪವನ್ನು ಇಸ್ರೇಲ್ ಸರ್ಕಾರ ತಿರಸ್ಕರಿಸಿದೆ.
ಕಳೆದ ವಾರ ಗಾಜಾ ನಗರವನ್ನು ಯುದ್ಧ ವಲಯ ಎಂದು ಇಸ್ರೇಲ್ ಘೋಷಿಸಿದಾಗಿನಿಂದ ನಗರದ ಮೇಲೆ ವಾಯುದಾಳಿಗಳು ಮತ್ತು ಫಿರಂಗಿ ಶೆಲ್ ದಾಳಿಗಳು ಮುಂದುವರೆದಿವೆ. ನಗರದ ಹೊರವಲಯ ಮತ್ತು ಜಬಲಿಯಾ ನಿರಾಶ್ರಿತ ತಾಣದಲ್ಲಿ ಕಟ್ಟಡಗಳ ಮೇಲೆ ರೋಬೋಟ್ಗಳು ಸ್ಪೋಟಕ ಹಾಕಿ ಧ್ವಂಸ ಮಾಡಿವೆ. ಗಾಜಾ ನಗರದಲ್ಲಿ ಮತ್ತೊಂದು ಘೋರ ರಾತ್ರಿ ಎಂದು ನಗರದ ವಾಯುವ್ಯ ಭಾಗದಲ್ಲಿ ಆಶ್ರಯ ಪಡೆದಿರುವ ಜಬಾಲಿಯಾ ಮೂಲದ ವೈದ್ಯ ಸಯೀದ್ ಅಬು ಇಲೈಶ್ ತಿಳಿಸಿದ್ದಾರೆ.
ಸೋಮವಾರದ ಇಸ್ರೇಲ್ ದಾಳಿಯಲ್ಲಿ 31 ಜನ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆಸ್ಪತ್ರೆ ತಿಳಿಸಿದೆ. ಸಾವನ್ನಪ್ಪಿದವರಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಂದಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಗಾಜಾ ನಗರದಲ್ಲಿ 13 ಜನ ಸಾವನ್ನಪ್ಪಿದ್ದಾರೆ. ಕೇವಲ ಉಗ್ರರು ಮತ್ತು ಹಮಾಸ್ ಮೇಲೆ ದಾಳಿ ನಡೆಸುತ್ತಿರುವುದಾಗಿ ಹೇಳಿರುವ ಇಸ್ರೇಲ್, ನಾಗರಿಕರ ಸಾವಿಗೆ ಹಮಾಸ್ ಕಾರಣ ಎಂದು ಆರೋಪಿಸಿದೆ. ಉಗ್ರರ ಗುಂಪು ಗೆರಿಲ್ಲಾ ಸಂಘಟನೆಯನ್ನು ಕಡಿಮೆ ಮಾಡಿ, ಜನರ ನಡುವೆ ಕಾರ್ಯಾಚರಣೆ ನಡೆಸಿದೆ ಎಂದು ಇಸ್ರೇಲ್ ತಿಳಿಸಿದೆ
ಒಂದೆಡೆ ಯುದ್ಧ ಮತ್ತೊಂದೆಡೆ ಕಾಡುತ್ತಿರುವ ಹಸಿವು: ಯುದ್ಧದಿಂದ ಹಲವು ಬಾರಿ ಗಾಜಾ ನಿವಾಸಿಗಳು ಸ್ಥಳಾಂತರಗೊಳ್ಳುತ್ತಿದ್ದು, ಇದೀಗ ಅವರು ಹಸಿವು ಮತ್ತು ಯುದ್ದ ಹೀಗೆ ಎರಡೆರಡು ಬೆದರಿಕೆ ಎದುರಿಸುತ್ತಿದ್ದಾರೆ. ಇಸ್ರೇಲ್‌ನ ದಿಗ್ಬಂಧನದಿಂದ ಉಂಟಾದ ಬಿಕ್ಕಟ್ಟಿನಿಂದ ಪದೇ ಪದೆ ಜನರು ಸ್ಥಳಾಂತಗೊಳ್ಳುತ್ತಿದ್ದು, ಆಹಾರ ಉತ್ಪಾದನೆ ಕೂಡಾ ಕುಸಿತ ಕಂಡಿದೆ. ಇದು ಅಲ್ಲಿನ ಜನರನ್ನು ಕಂಗೆಡಿಸುವಂತೆ ಮಾಡಿದೆ.
ಇಲ್ಲಿಯವರೆಗೆ ಯುದ್ಧಲ್ಲಿ 63,557 ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದು, 1,60,660 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವರು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸತ್ತವರ ಸಂಖ್ಯೆ ಅರ್ಧದಷ್ಟಿದೆ.
ತಜ್ಞರ ನರಮೇಧ ಆರೋಪ: ನರಮೇಧದ ಅಧ್ಯಯನ ನಡೆಸುತ್ತಿರುವ ಅತಿ ದೊಡ್ಡ ವೃತ್ತಿಪರ ಸಂಘಟನೆ ತಜ್ಞರು, ಗಾಜಾದಲ್ಲಿ ಇಸ್ರೇಲ್ ನರಮೇಧ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಇಸ್ರೇಲ್ ತಿರಸ್ಕರಿಸಿದ್ದು, ನಾಗರಿಕರಿಗೆ ಹಾನಿಯಾಗದಂತೆ ತಡೆಯಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಮಾಸ್ ನಂತರ ಆತ್ಮರಕ್ಷಣೆಯ ಯುದ್ಧವನ್ನು ನಡೆಸುತ್ತಿದೆ. ಅಕ್ಟೋಬರ್ 7ರಂದು ನಡೆದ ದಾಳಿ ನರಮೇಧ ಕಾರ್ಯವಾಗಿದೆ ಎಂದಿದೆ.