
ಹಾವರ್ಡ್ ವಿಶ್ವವಿದ್ಯಾಲಯದ 2.6 ಬಿಲಿಯನ್ ಮೊತ್ತದ ಸಂಶೋಧನಾ ಅನುದಾನ ಕಡಿತವನ್ನು ಮಾಡಿದ ಟ್ರಂಪ್ ಆಡಳಿತದ ಆದೇಶವನ್ನು ಬೋಸ್ಟನ್ ಫೆಡರಲ್ ನ್ಯಾಯಾಧೀಶರು ರದ್ದು ಮಾಡಿದ್ದಾರೆ. ನ್ಯಾಯಾಲಯದ ಈ ಆದೇಶವೂ ಶ್ವೇತಭವನದ ವಿರುದ್ಧ ಕಾನೂನು ಸಮರದಲ್ಲಿ ಐವಿ ಲೀಗ್ ಶಾಲೆಗೆ ಗಮನಾರ್ಹ ವಿಜಯ ತಂದುಕೊಟ್ಟಿದೆ.
ಹಾರ್ವರ್ಡ್ ಆಡಳಿತ ಮತ್ತು ನೀತಿಗಳಲ್ಲಿ ಬದಲಾವಣೆಗಳನ್ನು ತರಬೇಕು ಎಂಬ ವಿವಿ ಕಾರ್ಯಾಚರಣೆಗೆ ಹಸ್ತಕ್ಷೇಪ ಮಾಡಿದ್ದ ಟ್ರಂಪ್ ಆಡಳಿತದ ಈ ಅನುದಾನಗಳನ್ನು ಕಡಿತ ಮಾಡುವ ಮೂಲಕ ಹಾರ್ವರ್ಡ್ ವಿರುದ್ಧ ಪ್ರತೀಕಾರ ನಡೆಸಿದ್ದಾರೆ ಎಂದು ಕೂಡ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಆಲಿಸನ್ ಬರೋಸ್ ತಿಳಿಸಿದ್ದಾರೆ.
ಯಹೂದಿ ವಿರುದ್ಧದ ನೀತಿಯಲ್ಲಿ ಹಾರ್ವರ್ಡ್ ವಿಳಂಬ ತೋರಿದ ಎಂಬ ಕಾರಣಕ್ಕೆ ಸರ್ಕಾರ ಅನುದಾನವನ್ನು ತಡೆ ಹಿಡಿದಿತ್ತು. ಆದರೆ, ವಿಶ್ವವಿದ್ಯಾನಿಲಯದ ಫೆಡರಲ್ ಬೆಂಬಲಿತ ಸಂಶೋಧನೆಯ ನಿಧಿ ಕಡಿತವೂ ಯಹೂದಿಗಳ ವಿರುದ್ಧದ ತಾರತಮ್ಯದಲ್ಲಿ ಕಡಿಮೆ ಸಂಬಂಧವನ್ನು ಹೊಂದಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಸರ್ಕಾರದ ಆಡಳಿತಾತ್ಮಕ ದಾಖಲೆಗಳ ಪರಿಶೀಲನೆಯು ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ಮೇಲೆ ಉದ್ದೇಶಿತ, ಸೈದ್ಧಾಂತಿಕವಾಗಿ ಪ್ರೇರಿತ ದಾಳಿಗೆ ಯಹೂದಿ ವಿರೋಧಿ ತತ್ವವನ್ನು ಬಳಸಿದೆ. ದೇಶವೂ ಯಹೂದಿ ವಿರುದ್ದ ಹೋರಾಡಬೇಕಿದೆ. ಆದರೆ, ವಾಕ್ ಸ್ವಾತಂತ್ರ್ಯದ ಹಕ್ಕನ್ನು ನಾವು ರಕ್ಷಣೆ ಮಾಡಬೇಕಿದೆ ಎಂದಿದ್ದಾರೆ.
ನ್ಯಾಯಾಲಯದ ತೀರ್ಪಿನ ಕುರಿತು ಮಾತನಾಡಿರುವ ಶ್ವೇತಭವನದ ವಕ್ತಾರರಾದ ಲಿಜ್ ಹಸ್ಟನ್, ಫೆಡರಲ್ ಅನುದಾನ ಪುನರ್ ಸ್ಥಾಪನೆ ಮಾಡಿರುವುದು ಹಾರ್ವರ್ಡ್‌ನಲ್ಲಿನ ಸಂಶೋಧನಾ ಕಾರ್ಯಾಚರಣೆ ಮತ್ತು ನೂರಾರು ಯೋಜನೆಗಳಿಗೆ ಚಾಲನೆ ನೀಡಲಿದೆ. ಆದರೆ, ಹಾರ್ವರ್ಡ್ ನಿಜವಾಗಿಯೂ ಫೆಡರಲ್ ಹಣವನ್ನು ಪಡೆಯುತ್ತದೆಯೇ ಎಂದು ನೋಡಬೇಕಾಗಿದೆ. ಸರ್ಕಾರವು ತಕ್ಷಣ ಈ ಕುರಿತು ಮೇಲ್ಮನವಿ ಸಲ್ಲಿಸಲು ಯೋಚಿಸುತ್ತಿದೆ ಎಂದಿದ್ದಾರೆ.
ಟ್ರಂಪ್ ಆಡಳಿತ ಏಪ್ರಿಲ್ 11 ರಂದು ಯಹೂದಿ ವಿರೋಧಿ ಕಾರ್ಯಕ್ಕೆ ಹಲವಾರು ಬೇಡಿಕೆಗಳನ್ನು ಉಲ್ಲೇಖಿಸಿ ಹಾರ್ವರ್ಡ್ ವಿವಿಗೆ ಪತ್ರ ಬರೆದಿತ್ತು. ಇದರಲ್ಲಿ ಕ್ಯಾಂಪಸ್ ಪ್ರತಿಭಟನೆಗಳು, ಶೈಕ್ಷಣಿಕ ಮತ್ತು ಪ್ರವೇಶಗಳಿಗೆ ಸಂಬಂಧಿಸಿದ ವ್ಯಾಪಕ ಬದಲಾವಣೆಗಳನ್ನು ಉಲ್ಲೇಖಿಸಲಾಗಿತ್ತು. ಆದರೆ, ಇದನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ನೀಡುತ್ತಿದ್ದ ಫೆಡರಲ್ ಅನುದಾನ ಸೇರಿದಂತೆ ಹಲವು ನಿಧಿಗಳನ್ನು ಸ್ಥಗಿತಗೊಳಿಸಿ ಟ್ರಂಪ್ ಆಡಳಿತ ಆದೇಶಿಸಿತು. ಟ್ರಂಪ್ ಆಡಳಿತದ ಈ ನಡೆಯುವ ವಿಶ್ವವಿದ್ಯಾನಿಲಯದ ವಿರುದ್ಧ ಪ್ರತೀಕಾರವಾಗಿದೆ ಎಂದು ಹಾರ್ವರ್ಡ್ ನ್ಯಾಯಲಯದಲ್ಲಿ ಮೊಕದ್ದಮೆ ಹೂಡಿತ್ತು.