
ಸಕಲೇಶಪುರ: ಅಜಂತಾ ಎಲ್ಲೋರ . ಬೇಲೂರು ಹಳೇಬೀ ಡು – ಚನ್ನರಾಯಪಟ್ಟಣದ ಗೊಮ್ಮಟೇಶ್ವರದಂತಹ ಶಿಲೆ ಭೂಮಿ ಮೇಲೆ ಕೆತ್ತಿರುವುದು ವಿಶ್ವಕರ್ಮ ಸಮಾಜಕ್ಕೆ ಗೌರವ ಸೇರಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಅವರು ಸಕಲೇಶಪುರದ ತಾಲೋಕ್ ಪಂಚಾಯತ್ ಸಭಾಂಗಣದಲ್ಲಿ ವಿಶ್ವಕರ್ಮ ದಿನಾಚರಣೆ ಉದ್ಗಾಟನೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿ ಮಾತನಾಡಿದರು.
ಸಾವಿರಾರು ವರ್ಷ ಪುರಾತನಕಾಲದಿಂದ ಪ್ರಾರಂಭ ಆದ ದೇವಾಲಯದಲ್ಲಿ ಶಿಲಿ ಮಾಡಲು ಕೈಚಳಕ ತೊರಿಸಿದ ಗೌರವ ನಮ್ಮ ವಿಶ್ವಕರ್ಮ ಜನಾಂಗಕ್ಕೆ ಸೇರಬೇಕು . ಬೇಲೂರು. ಹಳೇಬೀಡಿನ ಕೆತ್ತನೆಯಲ್ಲಿ 2-.3 ಸಾವಿರವರ್ಷ ಹಿಂದೆಯೇ ವನಿತ್ತು ಎಂಬುದನ್ನು ಶಿಲೆ ಶಿಲ್ಪಕಲೆಗಳಲ್ಲಿ ಕಾಣಬಹುದು ಕೆತ್ತನೆ ಯಾವ ರೀತಿ ಮಾಡಿದ್ದಾರೆ ಎಂದರೆ ಆಭರಣ ಮಾಡಿದರೆ ಮನುಷ್ಯ ಎಷ್ಟು ಸುಂದರವಾಗಿ ಕಾಣತ್ತಾನೆ. ಅಂತಹಾ ಕೆತ್ತನೆ ಮೂಲಕ ಈ ಸಮುದಾಯ ತೋರಿಸಿದೆ. ಅಜಂತಾ ಎಲ್ಲೋರ ಮಾಡಲಿಕ್ಕೆ ಮನುಷ್ಯ ನಿಂದ ಸಾದ್ಯವೆ ಇಲ್ಲ ಎನ್ನುವಂತೆ ಕಲ್ಲಿನಲ್ಲಿಕತ್ತಿದ್ದಾರೆ. ಮಧುರೆ ದೇವಾಲಯಕ್ಕೆ ಹೋದರೆ ಎಲ್ಲಿಂದ ಹೋಗಿ ಯಾವ ಕಡೆ ಬಂದೆವು ಎನ್ನುವುದನ್ನು ನಂಬಲಿಕೆ ಅಸಾಧ್ಯ ಈ ದೇಶದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ ನಿಮ್ಮ ವೃತ್ತಿಧರ್ಮ ಕೊನೆಯಾದರೆ ಕಲೆ ಕಲ್ಪನೆ ಮಾಡಿಕೊಳ್ಳುವರು ಅಸಾಧ್ಯ. ಪ್ರಪಂಚದಲ್ಲಿ ಅತಿ ಹೆಚ್ಚು ವಾಸ್ತುಶಿಲ್ಪಗಳಿರುವ ದೇಶ ಭಾರತ. ಈ ಸಮಾಜ ನಮಗೆ ಕೊಟ್ಟಿರುವ ಕೊಡುಗೆ ಅಪಾರ ಇವು ಇನ್ನೂ ಮುಂದುವರಿಯಬೇಕು. ನಮ್ಮಪ್ಪ ಕೆ ಎಸ್ಆರ್ ಟಿಸಿ ಮೆಕಾನಿಕ್. ನಾನು ಆ ಕೆಲಸ ಮಾಡುತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಕುಶಲಕರ್ಮಿಗೆ ನನ್ನ ಕೆಲಸ. ಜಾತಿ.ಧರ್ಮದ ಮೇಲೆ ನಂಬಿಕೆ ಇರಬೇಕು. ವೃತ್ತಿಧರ್ಮ ಅತ್ಯಂತ ಪ್ರೀತಿಯಿಂದ ಕಾಣುವ ಕೆಲಸ ನಮ್ಮೆಲ್ಲರ ಮೇಲಿದೆ. ಈ ವಿಶ್ವಕಮ೯ ಸಮಾಜ ದೇಶಕ್ಕೆ ಅಪಾರ ಕೊಡುಗೆ ನೀಡಿದೆ ಮೈಸೂರಿನ ಯುವಕ ಶ್ರೀರಾಮಚಂದ್ರನ ಪ್ರತಿಮೆ ಮಾಡಿ ದೇಶದ ಗಮನ ಸೆಳೆದಿದ್ದನ್ನು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಮೋಹನ್. ಪುರಸಭಾ ಅಧ್ಯಕ್ಷೆ ಜ್ಯೋತಿರಾಜ್ ಕುಮಾರ್. ತಾಲೋಕ್ ಪಂಚಾಯತ್ ಹರೀಶ್. ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ್. ಹಾಗು ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು. ನಾಗರೀಕರು ಉಪಸ್ಥಿತರಿದ್ದರು.