
ಕೋಲಾರ ಎಲ್ಐಸಿ ಶಾಖೆಯಲ್ಲಿ ಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗೆ ಹಿರಿಯ ಶಾಖಾಧಿಕಾರಿ ಕರುಣಾಹರನ್ ಸಸಿಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ರೀತಿಯಲ್ಲಿ ಪ್ರತಿಯೊಬ್ಬ ಎಲ್ ಐ ಸಿ ಪ್ರತಿನಿಧಿಯು ಕುಟುಂಬಗಳಿಗೆ ರಕ್ಷಣೆ ನೀಡುತ್ತಾ ಬರುತ್ತಿದ್ದಾರೆ. ಅದೇ ರೀತಿಯಾಗಿ ಗಿಡ ನೆಟ್ಟು ಪರಿಸರವನ್ನು ರಕ್ಷಣೆ ಮಾಡಬೇಕೆಂದರು. ಗಿಡ ಮರಗಳು ಇದ್ದರೆ ಮಳೆ, ವಾತಾವರಣದಲ್ಲಿ ಉತ್ತಮ ಗಾಳಿ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬ ಸಿಬ್ಬಂದಿ, ಪ್ರತಿನಿಧಿಗಳು ಮನೆಗಳ ಬಳಿ ಗಿಡಗಳನ್ನು ಬೆಳಸಬೇಕೆಂದರು.
ಈ ಸಂದರ್ಭದಲ್ಲಿ ನಿವೃತ್ತ ವಿಭಾಗಾಧಿಕಾರಿ ಮುರಳಿ ಮನೋಹರ್ ಗೀಡಗಳನ್ನು ನೀಡಿ ಎಲ್ಐಸಿ ಬಗ್ಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಗುರುಕೃಷ್ಣ, ಶಾಖಾಧಿಕಾರಿ ಕರುಣಾಹರನ್, ಮಾಲೂರು ಶಾಖಾಧಿಖಾರಿ ಕಿಶೋರ್ ಕುಮಾರ್, ಶ್ರೀನಿವಾಸಪುರ ಶಾಖಾಧಿಕಾರಿ ವಿಜಯಕುಮಾರಿ, ಅಭಿವೃದ್ಧಿ ಅಧಿಕಾರಿ ಬಾಲಚಂದ್ರ, ವಿಮಾ ಸಲಹೆಗಾರರ ನಂಜುಂಡಪ್ಪ, ಬಿ.ರವಿ.ಪ್ರಕಾಶ್, ಹಾಗೂ ಪ್ರತಿನಿಧಿಗಳು ಸಿಬ್ಬಂದಿ ಹಾಜರಿದ್ದರು.