
ಕೋಲಾರ : ರಾಜ್ಯದಲ್ಲಿ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಗಣತಿಯ ನಮೂನೆಯ ಕ್ರಮ ಸಂಖ್ಯೆ 9 ಕಾಲಂನ ಜಾತಿಯಲ್ಲಿ ವಾಲ್ಮೀಕಿ ಸಮುದಾಯವು ನಾಯಕ ಎಂದು ಬರೆಸುವ ಮೂಲಕ ವಾಲ್ಮೀಕಿ ಸಮುದಾಯವು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ವಾಲ್ಮೀಕಿ ಯುವ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ ಅವರು ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿಯ ಕಾಲಂನಲ್ಲಿ ಕ್ರಮ ಸಂಖ್ಯೆ 9 ರಲ್ಲಿ ನಾಯಕ ಎಂದು ಬರೆದು ಕ್ರಮ ಸಂಖ್ಯೆ10 ರಲ್ಲಿ ಕಡ್ಡಾಯವಾಗಿ ಯಾವುದೇ ಪದಗಳನ್ನು ನಮೂದಿಸುವಂತಿಲ್ಲ ಕ್ರಮ ಸಂಖ್ಯೆ 11 ರಲ್ಲಿ ಸಮಾನಾರ್ಥಕ ಪದಗಳನ್ನು ನಮೂದಿಸಬೇಕು ನಾಯಕ, ನಾಯಕ್, ನಾಯ್ಕ್, ಬೇಡ, ಬೇಡರ್, ವಾಲ್ಮೀಕಿ, ನಾಯಕತಳವಾರ, ನಾಯಕಪರಿವಾರ, ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದಿಂದ ಸೆ 22 ರಿಂದ ಅ.7 ರವರೆಗೆ 15 ದಿನಗಳ ಕಾಲ ಜಾತಿ ಗಣತಿ ಕೈಗೊಳ್ಳಲಾಗಿದೆ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಮನೆ ಮನೆ ಭೇಟಿ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ನಾಯಕ ಎಂದು ಬರೆಸುವುದರಿಂದ ರಾಜ್ಯ ಮಟ್ಟದಲ್ಲಿ ನಮ್ಮ ಜನಾಂಗದ ಜನಸಂಖ್ಯೆಯ ನಿಖರವಾದ ಮಾಹಿತಿ ಗೊತ್ತಾಗುತ್ತದೆ ಜೊತೆಗೆ ರಾಜಕೀಯ ಸಾಮಾಜಿಕ ಶೈಕ್ಷಣಿಕ ಸ್ಥಾನಮಾನದ ಹಕ್ಕನ್ನು ಕೇಳಲು ಸಾಧ್ಯವಾಗುತ್ತದೆ ಎಂದು ಕೋಟೆ ಶ್ರೀನಿವಾಸ್ ಮನವಿ ಮಾಡಿದರು.