ಇತ್ತೀಚಿನ ಸುದ್ದಿ

ಹುಲಿ ಸೆರೆಗೆ ಅಖಾಡಕ್ಕಿಳಿದ ಸಾಕಾನೆಗಳು ಮುನ್ನೆಚ್ಚರಿಕೆಯಾಗಿ ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ

ಚಾಮರಾಜನಗರ:
ಹುಲಿ ಉಪಟಳ ಮಿತಿಮೀರಿದ ಹಿನ್ನೆಲೆ ಚಾಮರಾಜನಗರ ತಾಲೂಕಿನ ಕಲ್ಪುರ ಸುತ್ತಮುತ್ತಲು ಇಂದು ಎರಡು ಸಾಕಾನೆಗಳ‌ ಮೂಲಕ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ದುಬಾರೆ ಆನೆ ಶಿಬಿರದಿಂದ ಶ್ರೀರಾಮ ಹಾಗೂ ಇಂದ್ರ ಎಂಬ ಸಾಕಾನೆಗಳನ್ನು ಕರೆತಂದು ಎಸಿಎಫ್ ಮಂಜುನಾಥ್ ನೇತೃತ್ವದಲ್ಲಿ ಹುಲಿ ಸೆರೆ ಕೂಂಬಿಂಗ್ ನಡೆಸಲಾಗುತ್ತಿದೆ.

ಹುಲಿ ಮೇಲೆ ನಿಗಾ ಇಡಲು ಕ್ಯಾಮರಾ ಹಾಗೂ ವಿಶೇಷ ಕೇಜ್ ಆದ ವಾಕ್ ಥ್ರೂ ಬೋನನ್ನು ಹುಲಿ ಓಡಾಡಿದ್ದ ಸ್ಥಳಗಳಲ್ಲಿ ಇರಿಸಲಾಗಿದೆ.

ಹುಲಿ ಸೆರೆ ಕಾರ್ಯಾಚರಣೆ ವೇಳೆ ಯಾವುದೇ ಅಚಾತುರ್ಯ ಉಂಟಾಗದಂತೆ ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಕಲ್ಪುರ, ಹರವೆ, ಕಾಳನಹುಂಡಿ, ದೇಶಿಗೌಡನಪುರ, ಮೇಗಲಹುಂಡಿ, ಕಗ್ಗಳಿಪುರ, ಹಳೇಪುರ ನಂಜದೇವನಪುರ, ಕಸಬಾ ಹೋಬಳಿಯ ಹೆಗ್ಗೋಠಾರ, ಗ್ರಾಮಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಚಾಮರಾಜನಗರ ತಹಶೀಲ್ದಾರ್ 144 ಸೆಕ್ಷನ್ ಜಾರಿ ಮಾಡಿದ್ದಾರೆ.

ವರದಿ: ಮಹದೇವಪ್ರಸಾದ್ ಹಂಗಳ

Related Articles

Leave a Reply

Your email address will not be published. Required fields are marked *

Back to top button