ಮಾಂಬಳ್ಳಿ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ದೇವರಾಜು ಅವಿರೋಧ ಆಯ್ಕೆ

ಕೆ.ಆರ್.ಪೇಟೆ. ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಾಂಬಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದೇವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಕಾಂತರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು.ತೆರವಾದ ಅಧ್ಯಕ್ಷ ಸ್ಥಾನ ಬಯಸಿ ದೇವರಾಜು ಹೊರತು ಪಡಿಸಿ ಉಳಿದ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಚುನಾವಣೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ಆವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಅಧ್ಯಕ್ಷ ದೇವರಾಜು ಮಾತನಾಡಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆಯಾಗಲು ಕ್ಷೆತ್ರದ ಶಾಸಕರಾದ ಹೆಚ್.ಟಿ ಮಂಜು ಹಾಗೂ ಎಲ್ಲ ಪಕ್ಷದ ಮುಖಂಡರು ಸಂಘದ ಸರ್ವ ನಿರ್ದೇಶಕರು ಸಹಕಾರ ನೀಡಿದ್ದಾರೆ.ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸಂಘದ ನೌಕರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದ ಅವರು.ಸಂಘದಿಂದ ಸಾಲ ಪಡೆದ ಶೇರುದಾರರು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಕೈಜೋಡಿಸಿ.ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯ ಬೆರೆಸದೇ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಿ.ಸಂಘದ ಬ್ಯಾಂಕಿಂಗ್ ಶಾಖೆಯಲ್ಲಿ ಮಹಿಳಾ ಸಂಘಗಳು, ಎಲ್ಲಾ ಶೇರುದಾರರು ಹಾಗೂ ಜನಸಾಮಾನ್ಯರು ಸಹ ಉಳಿತಾಯ ಖಾತೆ ತೆರೆದು ವ್ಯವಹರಿಸುವ ಮೂಲಕ ಬ್ಯಾಂಕಿಂಗ್ ಶಾಖೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸೊಸೈಟಿ ಮಾಜಿ ಅಧ್ಯಕ್ಷ ಕಾಂತರಾಜು ಮಾತನಾಡಿ ನೂತನ ಅಧ್ಯಕ್ಷ ದೇವರಾಜು ಅವರ ಆಡಳಿತ ಅವಧಿಯಲ್ಲಿ ಸಂಘದ ಸರ್ವ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಬೇದ ಮರೆತು ಸಂಘದ ಏಳಿಗೆಗೆ ದುಡಿಯಬೇಕು.ಸಂಘದ ಮೂಲಕ ಷೇರುದಾರರು,ರೈತರು ಹಾಗೂ ಸ್ವಯಂ ಉದ್ಯೋಗ ಕೈಗೊಳುವ ಮಹಿಳೆಯರಿಗೆ ಸಕಾಲಕ್ಕೆ ಹೆಚ್ಚಿನ ಸಾಲವನು ನೀಡಿ ಅವರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷ ದೇವರಾಜು ಅವರಿಗೆ ಸಲಹೆ ನೀಡಿದರು.
ನೂತನ ಅಧ್ಯಕ್ಷರ ಅವಿರೋಧ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಕಾರ್ಯಕರ್ತರು ಬೆಂಬಲಿಗರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿಕೊಂಡು ಗೆಲವು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸೌಭಾಗ್ಯ,ಮಾಜಿ ಅಧ್ಯಕ್ಷ ಕೆ ಟಿ ಪ್ರಕಾಶ್, ಕಾಂತರಾಜು,ಎಂ ಪಿ ಸಿದ್ದೇಗೌಡ, ಎಂ ಎಂ ಜಯರಾಮು,ಪ್ರೇಮಮ್ಮ,
ಗೋವಿಂದಯ್ಯ,ತಿಮ್ಮೇಗೌಡ, ಮಹದೇವ್,ಸಂತೋಷ್ ಕುಮಾರ್, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಜಲೇಂದ್ರ,ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್, ಪುಟ್ಟೇಗೌಡ,ಚಂದ್ರೇಗೌಡ ಕೆ ಟಿ, ಅಶೋಕ್, ನಿಂಗರಾಜು,ಚಿಕ್ಕಬಸಪ್ಪ,ಕಾಯಿ ರವಿ,ವೆಂಕಟೇಶ್, ಚೇತನ್, ಲೋಕೇಶ್,ಸುತ್ತಮುತ್ತಲಿನ ಗ್ರಾಮದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ



