ಕ್ರೈಂ
Trending

ಹಂಪಿ ನೋಡಲು ಬಂದ ಕುಟುಂಬ ಆತ್ಮಹತ್ಯೆಗೆ ಯತ್ನ

ವಿಜಯನಗರ: ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಸ್ನಾನಘಟ್ಟದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆ ಕೊಟ್ಟೂರ ಪಟ್ಟಣದ ಕುಟುಂಬ ನಿನ್ನೆ(ಮಾರ್ಚ್ 18)  ಹಂಪಿಗೆ ಬಂದಿದೆ. ಆದ್ರೆ, ಇಂದು (ಮಾರ್ಚ್​ 19)  ಸ್ನಾನಘಟ್ಟ‌ ಸಮೀಪದ ಸರಸ್ವತಿ ದೇವಸ್ಥಾನದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ. ಇದರಿಂದ ಚಂದ್ರಯ್ಯ‌(42) ಸಾವನ್ನಪ್ಪಿದ್ದರೆ, ಇನ್ನುಳಿದಂತೆ ಮೃತ ಚಂದ್ರಯ್ಯ‌ ಪತ್ನಿ ಸೌಮ್ಯ ಹಾಗೂ ಮಕ್ಕಳಾದ ಭವಾನಿ, ಶಿವಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.6 ವರ್ಷದಿಂದ ಕೊಟ್ಟೂರಿನಲ್ಲಿ SBI ಸೇವಾಕೇಂದ್ರ ನಡೆಸುತ್ತಿದ್ದ ಚಂದ್ರಯ್ಯ, 10 ಲಕ್ಷಕ್ಕೂ‌ ಹೆಚ್ಚು ಕೈಗಡ ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಿರುಕುಳದಿಂದ ಬೇಸತ್ತು ನಿನ್ನೆ (ಮಾರ್ಚ್​ 18) ಚಂದ್ರಯ್ಯ ಕುಟುಂಬ ಹಂಪಿಗೆ ಬಂದಿದೆ. ಆದ್ರೆ, ಇಂದು (ಮಾರ್ಚ್​ 19) ಹಂಪಿ ಸ್ನಾನಘಟ್ಟ‌ ಸಮೀಪದ ಸರಸ್ವತಿ ದೇವಸ್ಥಾನದ ಬಳಿ ಚಂದ್ರಯ್ಯ ತಾನೂ ವಿಷ ಸೇವಿವುದರ ಜೊತೆ ತನ್ನ ಹೆಂಡ್ತಿ ಹಾಗೂ ಇಬ್ಬರು ಮಕ್ಕಳಿಗೂ ವಿಷ ಕುಡಿಸಿದ್ದಾರೆ.ಆದ್ರೆ, ಚಂದ್ರಯ್ಯ ಚಿಕಿತ್ಸೆ ಫಲಕಾರಿಯಾಗದೇ ಕುಟುಂಬದ ಯಜಮಾನ ಚಂದ್ರಯ್ಯ ಸಾವನ್ನಪ್ಪಿದ್ದು, ಹೆಂಡ್ತಿ ಸೌಮ್ಯ(35) ಹಾಗೂ ಮಕ್ಕಳಾದ ಭವಾನಿ (12) ಶಿವಕುಮಾರ್​ (10) ಬದುಕುಳಿದಿದ್ದಾರೆ. ಮೂವರಿಗೆ ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button