ವಿಧಾನಸಭೆ
Trending

ಇ - ಛಾಪಾ ಕಾಗದಗಳಿಗೆ ಗುಡ್ ಬೈ ಹೇಳಿದ ಸರ್ಕಾರ

ಬೆಂಗಳೂರು: ರಾಜ್ಯ ಸರಕಾರವು ಇನ್ನು ಮಂದೆ ಇ-ಸ್ಟಾಂಪಿಂಗ್‌ (ಛಾಪಾ ಕಾಗದ) ಬದಲಿಗೆ ಡಿಜಿಟಲ್‌ ಇ-ಸ್ಟಾಂಪಿಂಗ್‌ ವಿತರಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ-2025’ಕ್ಕೆ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿತು.ವಿಧೇಯಕ ಮಂಡಿಸಿ ಸದನಕ್ಕೆ ವಿವರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘‘ಇ-ಸ್ಟಾಂಪಿಂಗ್‌ ದುರ್ಬಳಕೆ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಚಲನ್‌ ಕೊಟ್ಟು ಉಪ ನೋಂದಣಾಧಿಕಾರಿಗಳಿಂದ ಛಾಪಾ ಕಾಗದ ಪಡೆಯುವುದಕ್ಕೆ ಕಡಿವಾಣ ಹಾಕಲು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಮತ್ತು ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬಲ ನೀಡಲಾಗುತ್ತಿದೆ. ಇದಕ್ಕೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲಾಗುವುದು,’’ ಎಂದು ಹೇಳಿದರು. (ಸಹಕಾರಿ ಸಂಘಗಳಿಂದ ಇ-ಸ್ಟಾಂಪಿಂಗ್ ಸೇವೆ ಉತ್ತಮ)

‘‘ದಸ್ತಾವೇಜುಗಳ ನೋಂದಣಿಗೆ ಆಧಾರ್‌, ಪ್ಯಾನ್‌ ಕಾರ್ಡ್‌, ಪಾಸ್‌ಪಾರ್ಟ್‌ ದಾಖಲೆಗಳಿಗೆ ಮಾನ್ಯತೆ ನೀಡಲಾಗಿದೆ. ಆಧಾರ್‌ನಿಂದ ಶೇ. 46 ಮತ್ತು ಪ್ಯಾನ್‌ಕಾರ್ಡ್‌ನಿಂದ ಶೇ 46ರಷ್ಟು ದಾಖಲೆಗಳು ನೋಂದಣಿಯಾಗುತ್ತಿವೆ. ಆಧಾರ್‌ ಮಾದರಿಯಲ್ಲೇ ಪ್ಯಾನ್‌ಕಾರ್ಡ್‌ನ ದೃಢೀಕರಣಕ್ಕೆ ಕಾವೇರಿ ತಂತ್ರಾಂಶದೊಂದಿಗೆ ಸಂಯೋಜಿಸಲು ಅವಕಾಶ ಕಲ್ಪಿಸುವಂತೆ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಪಾಸ್‌ಪೋರ್ಟ್‌ಗಳ ನೈಜತೆ ಪರಿಶೀಲನೆ ಸಂಬಂಧ ವಿದೇಶಾಂಗ ಸಚಿವರೊಂದಿಗೂ ಚರ್ಚಿಸಲು ನಿರ್ಧರಿಸಲಾಗಿದೆ,’’ ಎಂದು ತಿಳಿಸಿದರು.ಸ್ಥಿರಾಸ್ತಿಗಳ ಜಿಪಿಎಗಳ ದುರುಪಯೋಗ ತಡೆಗೆ ಅವುಗಳ ನೋಂದಣಿಯನ್ನು ಕಡ್ಡಾಯಗೊಳಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ-2025’ಕ್ಕೆ ವಿಧಾನಸಭೆ ಅಂಗೀಕಾರ ನೀಡಿತು.‘‘ಜಿಪಿಎಗಳು ವ್ಯಾಪಕವಾಗಿ ದುರುಪಯೋಗವಾಗುತ್ತಿರುವ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿಅವುಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ನೋಂದಣಿಯಾಗದ ಜಿಪಿಎ ದಾಖಲೆ ಆಧರಿಸಿ ಯಾವುದೇ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿಗೆ ಅವಕಾಶ ಇರುವುದಿಲ್ಲ. ಇದರಿಂದ ಜಿಪಿಎ ಮಾಡಿಕೊಟ್ಟ ವ್ಯಕ್ತಿಯ ಖಾತ್ರಿ ಸಿಗಲಿದೆ,’’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. (ಇ – ಸ್ಟಾಂಪಿಂಗ್ ಸೇವೆ ಆರಂಭ)

‘‘ಜಿಪಿಎ ಹೋಲ್ಡರ್‌ಗಳು ವಿದೇಶಗಳಲ್ಲಿದ್ದರೆ, ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಡಿಯೊ ಕಾನ್ಫರೆನ್ಸ್‌ ಮೂಲಕ ಖಾತ್ರಿಪಡಿಸಲು ಅವಕಾಶ ಕಲ್ಪಿಸುವ ಕುರಿತು ಚಿಂತಿಸಲಾಗುವುದು. ಇದಲ್ಲದೇ ಸರಕಾರದಿಂದ ಮಂಜೂರಾದ ಜಮೀನು, ನಿವೇಶನ, ಮನೆಗಳ ದಾಖಲೆಗಳನ್ನು ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಿಕೊಡಲಾಗುತ್ತದೆ,’’ ಎಂದು ಹೇಳಿದರು.‘‘ಸ್ಥಿರಾಸ್ತಿಗಳ ಅಡಮಾನ ಸಾಲದ ವಿವರವನ್ನು ಆರ್‌ಟಿಸಿಯಲ್ಲಿನಮೂದಿಸಲು ಉಪ ನೋಂದಣಾಧಿಕಾರಿಗಳ ಕಚೇರಿಗಳಿಗೆ ಬ್ಯಾಂಕ್‌, ಸಹಕಾರ ಸಂಸ್ಥೆಗಳು ಅಲೆಯುವುದನ್ನು ತಪ್ಪಿಸಲು, ಅವರೇ ಸಾಲ ನೀಡಿರುವ ಕುರಿತ ಮಾಹಿತಿ ದಾಖಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ,’’ ಎಂದು ವಿವರಿಸಿದರು.


Related Articles

Leave a Reply

Your email address will not be published. Required fields are marked *

Back to top button