ಕ್ರೀಡೆ
Trending

ಸಾರ್ವಜನಿಕವಾಗಿ ಆರ್‌ಸಿಬಿಯನ್ನು ಗೇಲಿ ಮಾಡಿದ ಸಿಎಸ್‌ಕೆ ಆಟಗಾರ

ಬೆಂಗಳೂರು (ಮಾ. 20): 2025 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಇದೇ ಮಾರ್ಚ್ 22 ರ ಶನಿವಾರದಿಂದ ಹೊಡಿಬಡಿ ಆಟಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಈಡನ್ ಗಾರ್ಡನ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಪ್ರತಿ ವರ್ಷ ಐಪಿಎಲ್‌ನಲ್ಲಿ ಬಹುತೇಕ ಎಲ್ಲ ಪಂದ್ಯಗಳು ರೋಚಕವಾಗಿರುತ್ತದೆ. ಆದರೆ, ಐಪಿಎಲ್‌ನಲ್ಲಿ ಅತಿ ದೊಡ್ಡ ಪೈಪೋಟಿ ಎಂದರೆ ಆರ್‌ಸಿಬಿ ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ. ಎರಡೂ ತಂಡಗಳ ನಡುವೆ ಪಂದ್ಯ ಇದೆ ಎಂದಾದರೆ ಅಲ್ಲಿ ಯಾವಾಗಲೂ ಕಠಿಣ ಸ್ಪರ್ಧೆ ಇರುತ್ತದೆ.ಈ ಬಾರಿಯ ಸೀಸನ್​ನಲ್ಲಿ ಆರ್​ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಾರ್ಚ್ 28 ರಂದು ಎದುರಿಸಲಿದೆ. ಇದರ ನಡುವೆ ಇದೀಗ ಮಾಜಿ ಸಿಎಸ್​ಕೆ ಬ್ಯಾಟ್ಸ್‌ಮನ್ ಸುಬ್ರಮಣಿಯಂ ಬದ್ರಿನಾಥ್ ವೈರಲ್ ಮೀಮ್ ಒಂದನ್ನು ಮರುಸೃಷ್ಟಿಸಿ ಆರ್​ಸಿಬಿ ಅಭಿಮಾನಿಗಳನ್ನು ಕೆಣಕಿದ್ದಾರೆ. ಭಾರತದ ಮಾಜಿ ಆಟಗಾರ ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಬದ್ರಿನಾಥ್ ತನ್ನನ್ನು ಸಿಎಸ್‌ಕೆ ಪ್ರತಿನಿಧಿ ಎಂದು ತೋರಿಸಿದ್ದು, ಇತರ ತಂಡಗಳ ಪ್ರತಿನಿಧಿಗಳನ್ನು ಭೇಟಿಯಾಗುವುದನ್ನು ತೋರಿಸುತ್ತದೆ.ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಎಸ್​ಆರ್​ಹೆಚ್, ಜಿಟಿ ಹೀಗೆ ಎಲ್ಲ ತಂಡಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಕೈಕುಳುಕಿ ನಗುಮೊಗದಿಂದ ಮಾತನಾಡಿಸುತ್ತಾರೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿನಿಧಿಯನ್ನು ಭೇಟಿ ಮಾಡುವ ಸರದಿ ಬಂದಾಗ, ಬದ್ರಿನಾಥ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬೇರೆ ತಂಡದತ್ತ ತೆರಳಿದ್ದಾರೆ. ಆರ್​ಸಿಬಿ ಪ್ರತಿನಿಧಿ ಕೈಕೊಡಲು ಬಂದರೂ ಅದನ್ನು ಬದ್ರಿನಾಥ್ ನೋಡಿಯೂ ನೋಡದಂತೆ ಮಾಡಿದ್ದಾರೆ. ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೊತೆಗೆ ಆರ್​ಸಿಬಿ ಅಭಿಮಾನಿಗಳು ಬದ್ರಿನಾಥ್ ವಿರುದ್ಧ ಕೆಂಡಕಾರಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುಬ್ರಮಣಿಯಂ ಬದ್ರಿನಾಥ್ ಭಾರತ ಪರ ಮೂರು ಸ್ವರೂಪಗಳ ಕ್ರಿಕೆಟ್ ಆಡಿದ್ದಾರೆ. ಅವರು ಭಾರತವನ್ನು 2 ಟೆಸ್ಟ್, 7 ಏಕದಿನ ಮತ್ತು ಒಂದೇ ಒಂದು ಟಿ20ಐ ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಆಡಿರುವ 95 ಪಂದ್ಯಗಳಲ್ಲಿ ಬದರಿನಾಥ್ 1441 ರನ್ ಗಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button