ಇತ್ತೀಚಿನ ಸುದ್ದಿ
Trending

ಕೇಂದ್ರ ಸಚಿವರ ಇಬ್ಬರು ಸೋದರಳಿಯರ ನಡುವೆ ಗುಂಡಿನ ಚಕಮಕಿ, ಓರ್ವ ಸಾವು

ಬಿಹಾರ, ಮಾರ್ಚ್​ 20: ಕೇಂದ್ರ ಸಚಿವ ನಿತ್ಯಾನಂದ ರೈ(Nityanand Rai) ಅವರ ಇಬ್ಬರು ಸೋದರಳಿಯರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಅವರ ಮತ್ತೊಬ್ಬ ಸಹೋದರ ಮತ್ತು ತಾಯಿ ಗಾಯಗೊಂಡಿದ್ದಾರೆ. ಪರಸ್ಪರ ವಾಗ್ವಾದದಿಂದಾಗಿ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ನೀರಿಗಾಗಿ ನಡೆದ ಜಗಳದಲ್ಲಿ ವಿಶ್ವಜಿತ್ ಮತ್ತು ಜೈಜಿತ್ ಎಂಬ ಇಬ್ಬರು ಸಹೋದರರ ನಡುವೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆಯಲ್ಲಿ, ವಿಶ್ವಜಿತ್ ಗುಂಡೇಟಿನಿಂದ ಸಾವನ್ನಪ್ಪಿದರೆ, ಜೈಜೀತ್ ಮತ್ತು ತಾಯಿ ಹಿನಾ ದೇವಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಭಾಗಲ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವಿಶ್ವಜಿತ್ ಮತ್ತು ಜಯಜಿತ್ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಸೋದರಳಿಯರು. ಅವರ ತಾಯಿ ಹೀನಾ ದೇವಿಯ ಕೈಗೆ ಗುಂಡು ತಗುಲಿತ್ತು.ಮಾಹಿತಿಯ ಪ್ರಕಾರ, ಮೃತ ವಿಶ್ವಜೀತ್ ಯಾದವ್ ಮತ್ತು ಜೈಜೀತ್ ಯಾದವ್ ಇಬ್ಬರೂ ನವಗಚಿಯಾದ ಜಗತ್ಪುರ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ವಿಶ್ವಜೀತ್ ಹಿರಿಯನಾಗಿದ್ದನು ಮತ್ತು ಜೈಜೀತ್ ಕಿರಿಯನಾಗಿದ್ದನು. ಇಬ್ಬರೂ ಕೃಷಿಯ ಮೂಲಕ ಜೀವನ ಸಾಗಿಸುತ್ತಿದ್ದರು. ನಲ್ಲಿ ನೀರಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ.ಬಳಿಕ ಆ ಜಗಳ ತಾರಕಕ್ಕೇರಿತ್ತು, ಜೈಜೀತ್ ವಿಶ್ವಜೀತ್ ಮೇಲೆ ಗುಂಡು ಹಾರಿಸಿದ್ದಾರೆ, ಗಾಯಗೊಂಡ ವಿಶ್ವಜೀತ್ ಕೂಡ ಗುಂಡು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿದ್ದರು. ಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವಿಶ್ವಜೀತ್ ಸಾವನ್ನಪ್ಪಿದರೆ, ಜೈಜೀತ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಹೀನಾ ದೇವಿ ಮತ್ತು ಜೈಜೀತ್ ಅವರನ್ನು ಬಿಜೆಪಿ ಎಂಎಲ್‌ಸಿ ಡಾ.ಎನ್‌.ಕೆ. ಯಾದವ್ ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ವಿಶ್ವಜೀತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಜಗಳ ನಡೆಯುತ್ತಿರುವಾಗ, ಅವರ ತಾಯಿ ಮಧ್ಯಪ್ರವೇಶಿಸಿದರು ಮತ್ತು ಅವರ ಕೈಗೂ ಗುಂಡು ತಗುಲಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು. ಘಟನಾ ಸ್ಥಳದಿಂದ ಒಂದು ಶೆಲ್ ಮತ್ತು ಒಂದು ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button