ನಗರಸಭೆ
Trending

ಬಿಜೆಪಿ ಶುದ್ದೀಕರಣದ ಯತ್ನಾಳ್ ಹೋರಾಟಕ್ಕೆ ಹೈಕಮಾಂಡ್ ನಿಂದ ಜಟ್ಕಾ ಕಟ್

ಬೆಂಗಳೂರು: ಬಿಜೆಪಿ ಶುದ್ದೀಕರಣ ಮಾಡುವ ಬಸನಗೌಡ ಪಾಟೀಲ್ ಯತ್ನಾಳ್ ಹೋರಾಟಕ್ಕೆ ಹೈಕಮಾಂಡ್‌ನಿಂದ ಜಟ್ಕಾ ಕಟ್ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.ವಿಧಾನಸೌಧದಲ್ಲಿ ಗುರುವಾರ ಯತ್ನಾಳ್ ಉಚ್ಚಾಟನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಯತ್ನಾಳ್ ಹೋರಾಟ ಕುಟುಂಬ ರಾಜಕೀಯ, ಭ್ರಷ್ಟಾಚಾರದ ವಿರುದ್ಧ ಇತ್ತು. ಬಿಜೆಪಿಯಲ್ಲಿನ ಕಲುಷಿತ ವಾತಾವರಣವನ್ನು ಮುಕ್ತಗೊಳಿಸಬೇಕು ಎಂದು ಯತ್ನಾಳ್ ಮತ್ತು ಕೆ.ಎಸ್ ಈಶ್ವರಪ್ಪ ಹೋರಾಟ ಮಾಡುತ್ತಿದ್ದರು. ಬಿಜೆಪಿಯ ಶುದ್ಧೀಕರಣದ ಹೋರಾಟಕ್ಕೆ ಯತ್ನಾಳ್ ಉಚ್ಚಾಟನೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಜಡ್ಕಾ ಕಟ್ ಮಾಡಿದೆ’ ಎಂದು ಲೇವಡಿ ಮಾಡಿದರು.ʻಈ ಮೂಲಕ ಕೇಂದ್ರ ಬಿಜೆಪಿ ನಾಯಕರು ಯತ್ನಾಳ್ ಮತ್ತು ಇತರ ಹಿಂದೂ ಹುಲಿಗಳಿಗೆ ಸ್ಪಷ್ಟವಾದ ಸಂದೇಶ ನೀಡಿದ್ದಾರೆ. ನಮಗೆ ಭ್ರಷ್ಟಾಚಾರ ಇಷ್ಟ, ಕುಟುಂಬ ರಾಜಕೀಯ ಇಷ್ಟ. ನೀವು ಎಷ್ಟೇ ತಿಪ್ಪರಲಾಗ ಹಾಕಿದರೂ ಇವರಿಬ್ಬರನ್ನು ನಾವು ಬಿಟ್ಟು ಕೊಡಲ್ಲ ಎಂಬ ಸಂದೇಶವನ್ನು ನೀಡಿದ್ದಾರೆʼ ಎಂದು ತಿರುಗೇಟು ನೀಡಿದರು.ʻಫೋಕ್ಸೋ ಆರೋಪಿಯನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತೇವೆ. ಯಾರ ಮೇಲೆ ದುಬೈ ಗೆ ಹೋದ ಆರೋಪ ಇದೆ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತೇವೆ ಎಂಬ ಸಂದೇಶ ನೀಡಿದ್ದಾರೆʼ ಎಂದು ಇದೇ ವೇಳೆ ಹೇಳಿದರು.

ದೆಹಲಿಯಲ್ಲಿ ಎಚ್‌.ಡಿ‌ ಕುಮಾರಸ್ವಾಮಿ ಮತ್ತು ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ದೆಹಲಿ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ? ನಾನೂ ಸಹ ಕೇಂದ್ರದ ಸಚಿವರನ್ನ ಭೇಟಿ ಮಾಡ್ತಾ ಇರುತ್ತೇನೆ ಎಂದರು.ಕೇಂದ್ರದ ಅನುದಾನ, ಹೊಸ ಯೋಜನೆಗಳ ಬಗ್ಗೆ ಮಾತನಾಡಬಾರದಾ? ನೀವೇ ಮಾರ್ಗಸೂಚಿ ಕೊಡಿ ಎಂದು ಪ್ರಿಯಾಂಕ್ ಖರ್ಗೆ ಭೇಟಿ ಸಮರ್ಥಿಸಿಕೊಂಡರು. ಸದನದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲಿ, ಅವರಿಗೆ ಸದಸ್ಯರೇ ಇಲ್ಲ. ಮುಂದೆ ಏನೇನೋ ಆಗುತ್ತೆ, ಕಾದು ನೋಡಿ. ಇದು ಅವರವರ ರಾಜಕೀಯ ಅಸ್ತಿತ್ವ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದರು.


Related Articles

Leave a Reply

Your email address will not be published. Required fields are marked *

Back to top button