
ಬೆಂಗಳೂರು, ಏಪ್ರಿಲ್ 4: ಇತಿಹಾಸ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ಬೆಂಗಳೂರು (Bengaluru) ಕರಗ ಮಹೋತ್ಸವಕ್ಕೆ (Bangalore Karaga 2025) ಇಂದು ರಾತ್ರಿ ಚಾಲನೆ ದೊರೆಯಲಿದೆ. 11 ದಿನಗಳ ಕರಗ ಮಹೋತ್ಸವಕ್ಕೆ ಸಕಲ ತಯಾರಿ ನಡೆದಿದ್ದು, ಈ ಬಾರಿಯೂ ಎ. ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಇದರೊಂದಿಗೆ ಅವರು 15 ಬಾರಿ ಕರಗ ಹೊತ್ತಂತಾಗಲಿದೆ. ಬೆಂಗಳೂರಿನ ಇತಿಹಾಸ ಸಾರುವ ಐತಿಹಾಸಿಕ ಕರಗ ಏಪ್ರಿಲ್ 14 ರವರೆಗೆ, ಅಂದರೆ ಒಟ್ಟು 11 ದಿನಗಳ ಕಾಲ ನಡೆಯಲಿದೆ. ಹೀಗಾಗಿ ದೇವಸ್ಥಾನದಲ್ಲಿ ಬಿರುಸಿನಿಂದ ತಯಾರಿಗಳು ಸಾಗಿವೆ. ಧರ್ಮರಾಯ ಸ್ವಾಮಿ ದೇವಸ್ಥಾನದ ಕರಗ ಮಹೋತ್ಸವಕ್ಕೆ ರಾತ್ರಿ10 ಗಂಟೆಗೆ ಧ್ವಜರೋಹಣ ಮಾಡುವುದರ ಮೂಲಕ ಚಾಲನೆ ದೊರೆಯಲಿದೆ.
ಬೆಂಗಳೂರು ಕರಗ ಕಾರ್ಯಕ್ರಮ ವೇಳಾಪಟ್ಟಿ
- ಏಪ್ರಿಲ್ 4 – ರಥೋತ್ಸವ ಹಾಗೂ ಧ್ವಜಾರೋಹಣ.
- ಏಪ್ರಿಲ್ 5 ರಿಂದ ಏಪ್ರಿಲ್ 8 ರ ತನಕ ಪ್ರತಿದಿನ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ.
- ಏಪ್ರಿಲ್ 9ರಂದು ಆರತಿ ದೀಪಗಳು.
- ಏಪ್ರಿಲ್ 10ರ ಗುರುವಾರ ಹಸಿ ಕರಗ.
- ಏಪ್ರಿಲ್ 11ರಂದು ಪೋಂಗಲ್ ಸೇವೆ.
- ಏಪ್ರಿಲ್ 12 ಶನಿವಾರದಂದು ಕರಗ ಶಕ್ತ್ಯೋತ್ಸವ & ಧರ್ಮರಾಯಸ್ವಾಮಿ ರಥೋತ್ಸವ.
- ಏಪ್ರಿಲ್ 13ರಂದು ಪುರಾಣ ಪ್ರವಚನ ಹಾಗೂ ದೇವಸ್ಥಾನದಲ್ಲಿ ಗಾವು ಶಾಂತಿ.
- ಏಪ್ರಿಲ್ 14ರ ಸೋಮವಾರ ವಸಂತೋತ್ಸವ ಧ್ವಜಾರೋಹಣ.
ಕಳೆದ ಬಾರಿಗಿಂತ ಈ ಬಾರಿ ಕರಗಕ್ಕೆ ತಡವಾಗಿ ತಯಾರಿ ಮಾಡಿಕೊಳ್ಳಲಾಗಿದೆ.ಇದಕ್ಕೆ ಪ್ರಮುಖ ಕಾರಣ ಅಂದರೆ, ಕಳೆದ 4 ತಿಂಗಳಿಂದಲೂ ನಿಧಾನಗತಿಯಲ್ಲಿ ನಡೆಯುತ್ತಿದ್ದ ವೈಟ್ ಟಾಪಿಂಗ್ ಕಾಮಾಗಾರಿ. ಈ ಬಗ್ಗೆ ಜನವರಿ- 30 ರಂದು, ‘‘ಕರಗ ರಥೋತ್ಸವಕ್ಕೆ ಕಾಮಗಾರಿ ಅಡ್ಡಿಯಾಗಲಿದೆ’’ . ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿಸಿ ಇದೀಗ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಫುಟ್ ಪಾತ್ ಕಾಮಗಾರಿ ಮಾತ್ರ ಬಾಕಿಯಿದ್ದು ಒಂದು ವಾರದಲ್ಲಿ ಆ ಕಾಮಗಾರಿಯು ಪೂರ್ಣವಾಗುವ ನಿರೀಕ್ಷೆ ಇದೆ.