
ಹಿರಿಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ಅವರು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ವಿಜಯ ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದವರು. ನಂತರ ನಟನೆ ಕಡೆಗೆ ಆಸಕ್ತಿ ಬೆಳೆಯಿತು. ಆರಂಭದಲ್ಲಿ ನಾಟಕ ಮಾಡಿಕೊಂಡಿದ್ದ ಅವರು, ಸಿನಿಮಾಗಳಲ್ಲಿ ಮಿಂಚಿದರು. ಹಾಸ್ಯ ಪಾತ್ರಗಳ ಮೂಲಕ ಜನಾರ್ಧನ್ ಅವರು ಗಮನ ಸೆಳೆದರು. ಬ್ಯಾಂಕ್ ಜನಾರ್ಧನ್ ಅವರು ಚಿತ್ರರಂಗಕ್ಕೆ ಬರೋಕೆ ಕಾರಣ ಆಗಿದ್ದು ಧೀರೇಂದ್ರ ಗೋಪಾಲ್ ಅವರು ಕೊಟ್ಟ ಆಫರ್. ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಕ್ಕೆ ಕಾರಣ ಆಗಿದ್ದು, ಕಾಶೀನಾಥ್ ಅವರು.
ಜನಾರ್ಧನ್ ಅವರು ಎಸ್ಎಸ್ಎಲ್ಸಿ ಪಾಸ್ ಆಗಿದ್ದರು. ಆಗಿನ ಕಾಲಕ್ಕೆ ಅವರಿಗೆ ಬ್ಯಾಂಕ್ನಲ್ಲಿ ಕೆಲಸ ಸಿಕ್ಕಿತು. ಇವುಗಳ ಜೊತೆ ಅವರು ನಾಟಕಗಳಲ್ಲಿ ನಟಿಸಿದರು. ಚಿತ್ರದುರ್ಗದ ಹೊಳಲ್ಕೆರೆಯಲ್ಲೇ ವಾಸವಾಗಿದ್ದ ಅವರು, ‘ಗೌಡರ ಗದ್ದಲ’ ನಾಟಕ ಮಾಡಿದರು. ಇದರಲ್ಲಿ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡರು. ಒಂದು ದಿನ ಇವರ ನಾಟಕವನ್ನು ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ನೋಡಿದರು. ಚಿತ್ರರಂಗಕ್ಕೆ ನೀವು ಬರಬೇಕು ಎಂದು ಆಹ್ವಾನ ಕೊಟ್ಟರು. ಕೆಲ ಸಮಯ ಬಿಟ್ಟು ಜನಾರ್ಧನ್ ಅವರು ಧೀರೇಂದ್ರ ಗೋಪಾಲ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಆದರು.ಜನಾರ್ಧನ್ ನಟಿಸಿದ ಮೊದಲ ಸಿನಿಮಾ ‘ಊರಿಗೆ ಉಪಕಾರಿ’. ವಿಷ್ಣುವರ್ಧನ್ ಜೊತೆ ಅವರ ಕಾಂಬಿನೇಷನ್ ಇತ್ತು. ಮೊದಲ ಚಿತ್ರದಲ್ಲೇ ಉತ್ತಮವಾಗಿ ನಟಿಸಿದರು. ಅಚ್ಚರಿಯ ವಿಚಾರ ಎಂದರೆ ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡೇ ಜನಾರ್ಧನ್ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಅವರು ಬೆಂಗಳೂರಿಗೆ ಟ್ರಾನ್ಸ್ಫರ್ ಮಾಡಿಸಿಕೊಂಡರು. ಕೊನೆಗೆ ಬ್ಯಾಂಕ್ಗೆ ಸರಿಯಾಗಿ ಹೋಗದೆ ಸಂಬಳವೇ ಇಲ್ಲದಂತಾಗಿ ಹೋಯಿತು.
ಸಣ್ಣಪುಟ್ಟ ಪಾತ್ರಗಳೇ ಆಗಿದ್ದರಿಂದ ಜನಾರ್ಧನ್ ಅವರಿಗೆ ಬೇಸರ ಆಯಿತು. ಯಾವುದೇ ನಟನೆ ಮಾಡಬಾರದು ಎಂದು ಅವರು ನಿರ್ಧರಿಸಿದರು. ನಂತರ ಅವರು ಆರು ತಿಂಗಳು ಬ್ಯಾಂಕ್ನಲ್ಲಿ ಕೆಲಸ ಮಾಡಿದರು. ಇದರಿಂದ ಪ್ರಮೋಷನ್ ಕೂಡ ಸಿಕ್ಕಿತು ಆ ಸಂದರ್ಭದಲ್ಲಿ ಕಾಶೀನಾಥ್ ಅವರು ‘ಅಜಗಜಾಂತರ’ ಹೆಸರಿನ ಸಿನಿಮಾ ಮಾಡಿದರು. ಇದಕ್ಕೆ ಬ್ಯಾಂಕ್ ಜನಾರ್ಧನ್ ಅವರಿಗೆ ಆಫರ್ ಕೊಟ್ಟರು. ಅಲ್ಲಿಂದ ಅವರ ವೃತ್ತಿ ಜೀವನ ಬದಲಾಗಿ ಹೋಯಿತು. ಇದರಿಂದ ಜನಾರ್ಧನ್ ಅವರ ಎರಡನೇ ಇನ್ನಿಂಗ್ಸ್ ಆರಂಭ ಆಯಿತು.